ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹರಡುವಿಕೆಯನ್ನು ತಡೆಗಟ್ಟಲು ಸರಕಾರ ಲಾಕ್ ಡೌನ್ ತಂತ್ರವನ್ನು ಅನುಸರಿಸಿತು. ಈ ಸಮಯದಲ್ಲಿ ನಿಯಮಗಳನ್ನು ಅನುಸರಿಸದೆ ಅನಾವಶ್ಯಕವಾಗಿ ತಿರುಗಾಡುವವರನ್ನು ನಿಯಂತ್ರಿಸಲು ಪೊಲೀಸರು ವಾಹನ ವಶಕ್ಕೆ ಪಡೆದಿದ್ದರು. ಈ ಸಮಯದಲ್ಲಿ ೧ ಲಕ್ಷಕ್ಕಿಂತಲೂ ಹೆಚ್ಚಿನ ವಾಹನಗಳನ್ನು ವಶಕ್ಕೆ ಪಡೆಯಲಾಗಿತ್ತು. ಅವುಗಳನ್ನು ವಾಪಸ್ ಪಡೆಯಲು ನಿಯಮವೊಂದನ್ನು ಜಾರಿಗೆ ತಂದಿದ್ದು, ಆ ಮೂಲಕ ವಾಹನವನ್ನು ತೆಗೆದುಕೊಂಡು ಹೋಗಬಹುದಾಗಿದೆ.
ವಾಹನಗಳನ್ನು ವಾಪಸ್ ಪಡೆದುಕೊಳ್ಳಲು ಹೈಕೋರ್ಟ್ ಹೊಸ ಸೂಚನೆಯೊಂದನ್ನು ನೀಡಿದ್ದು, ಇದರ ಅನುಸಾರ ಠಾಣೆ ಹಂತದಲ್ಲಿಯೇ ದಂಡ ಕಟ್ಟಿಕೊಂಡು ತೆಗೆದುಕೊಂಡು ಹೋಗಬಹುದಾಗಿದೆ. ಅವುಗಳನ್ನು ನ್ಯಾಯಾಲಯದ ತನಕ ತೆಗೆದುಕೊಂಡು ಬರುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿರಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ: ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ
ಜಪ್ತಿಯಾದ ವಾಹನಗಳನ್ನು ವಾಪಸ್ ಪಡೆಯುವ ನೀತಿಯ ವಿರುದ್ಧ ವಕೀಲರೊಬ್ಬರು ಹೈಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿ, ವಾಹನ ಮಾಲೀಕರು ವಾಹನಬಿಡಿಸಿಕೊಂಡು ಹೋಗಲು ಕೋರ್ಟ್ ಅಂಗಳಕ್ಕೆ ಆಗಮಿಸಿದ್ದೆ ಆದಲ್ಲಿ ನೂಕುನುಗ್ಗಲು ಏರ್ಪಡಬಹುದು ಎಂದು ಹೇಳಿದರು. ಈ ಸಮಸ್ಯೆಯ ನಿವಾರಣೆಗೆ ಠಾಣೆಯಲ್ಲಿಯೇ ದಂಡಕಟ್ಟಿಸಿಕೊಂಡು ವಾಹನ ಪಡೆದುಕೊಳ್ಳಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು. ಈ ವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಅನುಮತಿ ನೀಡಿ ಆದೇಶವನ್ನು ಹೊರಡಿಸಿದೆ.