ಬೆಂಗಳೂರು: ಕಲಿಯುಗ ಕರ್ಣ, ರೆಬಲ್ ಸ್ಟಾರ್, ಮಂಡ್ಯದ ಗಂಡು ಎಂದೇ ಪ್ರಖ್ಯಾತಿ ಗೊಂಡಿರುವ ನಟ ಅಂಬರೀಶ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕಿಡ್ನಿ, ಶ್ವಾಸಕೋಶ ಮತ್ತು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅಂಬರೀಶ ಅವರು ಇಂದು ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತ ಉಂಟಾಗಿ ಅವರನ್ನು ಹತ್ತಿರದ ವಿಕ್ರಂ ಆಸ್ಪತ್ರೆಗೆ ಕರೆತರಲಾಯಿತು ಆದರೆ ವೈಧ್ಯರ ಪ್ರಯತ್ನ ವಿಪಲವಾಯಿತು.

ಅಂಬರೀಶ ಅವರು ಮೇ. 29, 1952 ರಲ್ಲಿ ತಾಯಿ ಪದ್ಮಾವತಮ್ಮ ಮತ್ತು ತಂದೆ ಹುಚ್ಚೇಗೌಡ ಅವರ ಮಗನಾಗಿ ಮಂಡ್ಯದ ದೊಡ್ದರಸಿಕೆರೆಯಲ್ಲಿ ಜನಿಸಿದರು. ನಾಗರಹಾವು ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಇವರು ಸುಮಾರು 200 ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ಜೀವ ಎನಿಸಿಕೊಂಡಿದ್ದ ಇವರು ಕಳೆದ ವರ್ಷ ಇದೇ ರೀತಿಯ ಸಮಸ್ಯೆಗೆ ಸಿಲುಕಿ ಚೇತರಿಸಿಕೊಂಡಿದ್ದರು. ರಾಜಕೀಯಕ್ಕೆ ಬಂದು ಸಿದ್ದರಾಮಯ್ಯ ಅವರ ಸರಕಾರದಲ್ಲಿ ವಸತಿ ಸಚಿವರಾಗಿದ್ದು ಸಹ ಸಾಧನೆ ಮಾಡಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರದಲ್ಲಿ ಜಲಿಲನಾಗಿ ಚಿತ್ರರಂಗದ ಪ್ರಯಾಣ ಆರಂಭಿಸಿದ ಇವರು ಅಂಬಿ ನಿಂಗ್ ವಯಸ್ಸಾಯ್ತು ಚಿತ್ರದ ಮೂಲಕ ಕೊನೆಗೊಳಿಸಿದ್ದಾರೆ.

ಇವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗಣ್ಯರು, ರಾಜಕಾರಣಿಗಳು ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಆಸ್ಪತ್ರೆ ಸೇರಿದಂತೆ ಬಿಗಿಬಂದೋಬಸ್ತ್ ಮಾಡಲಾಗಿದೆ.

Copyright: Google.com

 

LEAVE A REPLY

Please enter your comment!
Please enter your name here