karnataka-2nd-puc-exam-2021-timetable-announced-by-karnataka-education-department-second-puc-exam-2021

ಧಾರವಾಡ: ಶಿಕ್ಷಣ ಸಚಿವ ಸುರೇಶ್  ಕುಮಾರ್ ಅವರು ಇಂದು ದ್ವಿತೀಯ ಪಿಯುಸಿ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿ ಮಾತನಾಡಿದರು. ಮೇ ತಿಂಗಳ 24 ರಿಂದ ಜೂನ್ 16 ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ಸಚಿವರು ಮಾತನಾಡುತ್ತ, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲು ನೋಂದಾಯಿಸಿಕೊಂಡಿದ್ದಾರೆ. ಈ ಬಾರಿ ಆಫ್ ಲೈನ್ ಮತ್ತು ಆನ್ ಲೈನ್ ತರಗತಿಗಳ ಮೂಲಕ ಪಠ್ಯ ಕ್ರಮಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಈ ಬಾರಿ ಪರೀಕ್ಷೆ ಬರೆಯುವ ಕೇಂದ್ರಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುವುದು. ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಒತ್ತು ಮತ್ತು ಕಾಳಜಿಯನ್ನು ತೆಗೆದುಕೊಳ್ಳುತ್ತೇವೆ ಎಂದು ಸಚಿವ ಸುರೇಶ್  ಕುಮಾರ್ ಅವರು ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷಾ ದಿನಾಂಕ

ಮೇ 24     ಇತಿಹಾಸ
ಮೇ 26     ಭೂಗೋಳಶಾಸ್ತ್ರ
ಮೇ 29     ಕನ್ನಡ
ಮೇ 31     ಗಣಿತ, ಲೆಕ್ಕಶಾಸ್ತ್ರ
ಜೂನ್ 2    ರಾಜ್ಯಶಾಸ್ತ್ರ, ಕಂಪ್ಯೂಟರ್ ಸೈನ್ಸ್
ಜೂನ್ 3    ಜೀವಶಾಸ್ತ್ರ
ಜೂನ್ 4    ಅರ್ಥಶಾಸ್ತ್ರ
ಜೂನ್ 7    ವ್ಯವಹಾರ ಅಧ್ಯಯನ, ಬೌತಶಾಸ್ತ್ರ
ಜೂನ್ 8    ಭೂಗರ್ಭಶಾಸ್ತ್ರ
ಜೂನ್ 10   ಸಮಾಜಶಾಸ್ತ್ರ, ರಸಾಯನ ಶಾಸ್ತ್ರ
ಜೂನ್ 11   ಉರ್ದು, ಸಂಸ್ಕೃತ
ಜೂನ್ 12   ಸಂಖ್ಯಾಶಾಸ್ತ್ರ
ಜೂನ್ 14   ಐಚ್ಛಿಕ ಕನ್ನಡ
ಜೂನ್ 15   ಹಿಂದಿ
ಜೂನ್ 16   ಇಂಗ್ಲಿಷ್

ಕಳೆದ ಬಾರಿ ಕೊರೋನಾ ಸಂಕಷ್ಟದ ನಡುವೆಯೂ ಯಶಸ್ವಿಯಾಗಿ ಪಠ್ಯ  ಕ್ರಮಗಳನ್ನು ಪೂರ್ಣಗೊಳಿಸಿ, ಮಾರ್ಚ್ ನಲ್ಲಿ ಪರೀಕ್ಷೆಗಳನ್ನು ಏರ್ಪಡಿಸಲಾಗಿತ್ತು. ಅಲ್ಲದೆ ಲಾಕ್ ಡೌನ್ ಜಾರಿಯಾದ ಕಾರಣಗಳಿಂದಾಗಿ ಕೊನೆಯ ಇಂಗ್ಲಿಷ್ ಪರೀಕ್ಷೆಯನ್ನು ಮುಂದೂಡಿ, ಜೂನ್ 18 ರಂದು ನಡೆಸಲಾಗಿತ್ತು.
karnataka-2nd-puc-exam-2021-timetable-announced-by-karnataka-education-department-second-puc-exam-2021

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here