ಸದ್ಯ ಪ್ರಪಂಚದ 200ಕ್ಕೂ ಹೆಚ್ಚು ದೇಶಗಳಿಗೆ ಕೊರೊನಾ ವೈರಸ್ ಹರಡಿದ್ದು, ತನ್ನ ರೌದ್ರ ನರ್ತನ ತೋರುತ್ತಿದೆ. ಈ ನಡುವೆ ಇದು ಭಾರತದ ಮೇಲೆ ತನ್ನ ಕಬಂಧ ಬಾಹುವನ್ನು ಚಾಚಲು ಪ್ರಯತ್ನಿಸುತ್ತಿದೆ. ಅಂತೆಯೇ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೂ ಇದು ವಕ್ಕರಿಸಿದ್ದು, ಅಲ್ಲಿನ ಸ್ಥಿತಿ ಗಂಭೀರವಾಗಿದೆ.

ಭಾರತದಲ್ಲಿ ಮಾರಕ ಕರೊನಾ ವೈರಸ್ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ನಿಧಿ ಸಂಗ್ರಹಕಾಗಿ ಸರಕಾರ ಉಧ್ಯಮಿಗಳ ಸಹಾಯವನ್ನು ಕೇಳಿತ್ತು. ಇದರಿಂದಾಗಿ ಹಲವಾರು ಉಧ್ಯಮಿಗಳು ಸಹಾಯ ಹಸ್ತವನ್ನು ಚಾಚಿದ್ದು, ಅಪಾರಪ್ರಮಾಣದ ಪರಿಹಾರ ನಿಧಿಯು ಸಂಗ್ರಹವಾಗಿದೆ. ಆದರೆ ಪಾಕಿಸ್ತಾನದ ಕ್ರೀಡಾಪಟು ಶೋಯಬ್ ಅಕ್ತರ್ ನಿಧಿ ಸಂಗ್ರಹಕಾಗಿ ಭಾರತ ಮತ್ತು ಪಾಕಿಸ್ತಾನ ನಡುವಣ ಮೂರು ಪಂದ್ಯಗಳ ಸರಣಿಯನ್ನು ಆಯೋಜಿಸಬೇಕೆಂಬ ಪ್ರಸ್ತಾಪವನ್ನು ಬುಧವಾರ ಮಾಡಿದ್ದರು. ಅಲ್ಲದೇ ಇದರಿಂದ ಸಂಗ್ರಹವಾಗುವ ಹಣವನ್ನು ಅರ್ಧ ಅರ್ಧ ಹಂಚಿಕೊಳ್ಳಬಹುದು ಎಂಬ ವಿಷಯವು ಬಂದಿತ್ತು. ಅವರ ಈ ಪ್ರಸ್ತಾಪಕ್ಕೆ ಬಾರಿ ಟೀಕೆಗಳು ಕೇಳಿಬಂದಿದ್ದು, ಸಧ್ಯ ಭಾರತದ ಲೆಜೆಂಡರಿ ಕ್ರಿಕೆಟ್ ಆಟಗಾರ ಕಪಿಲ್ ದೇವ್ ನೀಡಿರುವ ಹೇಳಿಕೆಯು ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

ಭಾರತಕ್ಕೆ ಕರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಹಣದ ಅವಶ್ಯಕತೆ ಇಲ್ಲಾ, ಕ್ರಿಕೆಟ್ ಪಂದ್ಯಕ್ಕಾಗಿ ಜೀವವನ್ನು ಅಪಾಯಕ್ಕೆ ತಳ್ಳುವುದು ಯೋಗ್ಯವಲ್ಲ ಎಂದು ತೀಕ್ಷಣವಾಗಿ ಕಪಿಲ್ ದೇವ್ ಅವರು ತಿರುಗೇಟು ನೀಡಿದ್ದಾರೆ. ನಮ್ಮಲ್ಲಿ ಸಾಕಷ್ಟು ಹಣಕಾಸು ವ್ಯವಸ್ಥೆಯಿದೆ, ಅಧಿಕಾರಿಗಳು ಎಷ್ಟು ಒಗ್ಗಟ್ಟಿನಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದು ಬಹುಮುಕ್ಯವಾಗಿರುತ್ತದೆ. ಕರೊನಾ ವೈರಸ್ ಹೋರಾಟಕ್ಕೆ ಈಗಾಗಲೇ ಬಿಸಿಸಿಐ 51 ಕೋಟಿ ರೂಪಾಯಿಗಳ ನೆರವನ್ನು ನೀಡಿದೆ. ಒಂದು ವೇಳೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದರೆ ಹೆಚ್ಚಿನ ನೆರವನ್ನು ನೀಡಲು ಶಕ್ತವಾಗಿದೆ ಎಂದು ಹೇಳಿದ್ದಾರೆ.

 

LEAVE A REPLY

Please enter your comment!
Please enter your name here