ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿ ಕಾಂತಾರ: ಎರಡು ವಿಭಾಗಗಳಲ್ಲಿ ನಾಮ ನಿರ್ದೇಶನ

kantara-kannada-movie-box-office-collection

ಕನ್ನಡ ಚಿತ್ರರಂಗದಿಂದ ಸೆಪ್ಟೆಂಬರ್ 30 ರಂದು ಬಿಡುಗಡೆಯಾದ ‘ಕಾಂತಾರ‘ ಚಿತ್ರ ಹೊಸ ಸೆನ್ಸೇಷನ್ ಉಂಟುಮಾಡಿತ್ತು. ರಿಷಬ್ ಶೆಟ್ಟಿ ನಿರ್ದೇಶನ ಮಾಡಿರುವ ಈ ಚಿತ್ರವೂ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿ, ಕನ್ನಡ ಚಿತ್ರರಂಗದ ಹೆಸರನ್ನು ಎಲ್ಲೆಡೆ ಪಸರಿಸಿತು. ಇತ್ತೀಚೆಗಷ್ಟೇ 100 ದಿನಗಳನ್ನು ಪೂರೈಸಿರುವ ಚಿತ್ರ ಇದೀಗ ಆಸ್ಕರ್ ಪ್ರಶಸ್ತಿಗೆ ಎರಡು ವಿಭಾಗದಲ್ಲಿ ನಾಮ ನಿರ್ದೇಶವಾಗಿರುವ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಆಸ್ಕರ್ ಪ್ರಶಸ್ತಿಗೆ ಕಾಂತಾರ ಚಿತ್ರತಂಡ ಜನವರಿ 24 ರಂದು ಅರ್ಜಿಯನ್ನು ಹಾಕಿತ್ತು. ಅಂತಿಮವಾಗಿ ಇದೀಗ ಎರಡು ವಿಭಾಗಗಳಲ್ಲಿ ನಾಮ ನಿರ್ದೇಶವಾಗಿರುವ ಕುರಿತು ಮಾಹಿತಿ ಹೊರಬಿದ್ದಿದೆ. ಅತ್ಯುತ್ತಮ ಸಿನಿಮಾ ಮತ್ತು ಅತ್ಯುತ್ತಮ ನಟ ಎಂಬ ಎರಡು ವಿಭಾಗಗಳಲ್ಲಿ ಪ್ರಶಸ್ತಿ ರೆಸ್ ನಲ್ಲಿ ಕಾಂತಾರ ಚಿತ್ರ ಇರುವುದು ಗೊತ್ತಾಗಿದೆ.

ಇದನ್ನೂ ಓದಿರಿ: ಜನವರಿಯಲ್ಲೇ ಹಸೆಮಣೆ ಏರಲಿದ್ದಾರೆ ವಸಿಷ್ಠ ಸಿಂಹ, ಹರಿಪ್ರಿಯಾ

ಆಸ್ಕರ್ ಪ್ರಶಸ್ತಿ ರೆಸ್ ನಲ್ಲಿ ಕಾಂತಾರ ಸೇರಿದಂತೆ ಒಟ್ಟು 301 ಚಿತ್ರಗಳು ಕೂಡಾ ನಾಮನಿರ್ದೇಶನಕ್ಕೆ ಆಯ್ಕೆಯಾಗಿವೆ. ಹಲವು ಭಾಷೆಗಳಲ್ಲಿ ಮತ್ತು ಬೇರೆ ಬೇರೆ ದೇಶಗಳಲ್ಲಿ ತನ್ನ ಹವಾ ಸೃಷ್ಠಿಸಿ ಗೆದ್ದಿರುವ ಈ ಚಿತ್ರ ಮತ್ತೊಂದು ಹೋರಾಟಕ್ಕೆ ಸಿದ್ಧವಾಗಿದೆ. ಇಲ್ಲಿಯೂ ತನ್ನ ಗೆಲುವನ್ನು ದಾಖಲಿಸಿ ಪ್ರಶಸ್ತಿಯ ಗರಿಯನ್ನು ತರಲಿ ಎಂದು ಆಶಿಸೋಣ.

ಇದನ್ನೂ ಓದಿರಿ: ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಗಾಯಕಿ ಮಂಗ್ಲಿ

LEAVE A REPLY

Please enter your comment!
Please enter your name here