kannada-veteran-director-vijay-reddy-pasess-away

ಡಾ. ರಾಜಕುಮಾರ್ ಅಭಿನಯದ ಮಯೂರ, ಗಂಧದಗುಡಿ ಸೇರಿದಂತೆ ಹಲವು ಚಿತ್ರಗಳ ನಿರ್ದೇಶಕ ವಿಜಯ ರೆಡ್ಡಿ ಅವರು ಇಂದು ಚೆನೈ ನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಬಹು ಅಂಗಾಂಗ ವೈಫಲ್ಯದಿಂದ ಆಸ್ಪತ್ರೆ ಸೇರಿದ್ದ ಅವರು ಹಲವು ದಿನಗಳಿಂದ ಈ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

1970 ರಲ್ಲಿ ತೆರೆಕಂಡ “ರಂಗಮಹಲ್ ರಹಸ್ಯ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಇವರು, ಕನ್ನಡ ಮಾತ್ರವಲ್ಲದೆ ಹಿಂದಿ, ತೆಲಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕನ್ನಡದ ನಾ ನಿನ್ನ ಮರೆಯಲಾರೆ, ಸನಾದಿ ಅಪ್ಪಣ್ಣ, ಮಯೂರ, ಗಂಧದಗುಡಿ, ಕೌ ಬಾಯ್ ಕುಳ್ಳ, ಮೋಜುಗಾರ ಸೊಗಸುಗಾರ, ಹುಲಿಯ ಹಾಲಿನ ಮೇವು, ಶ್ರೀನಿವಾಸ ಕಲ್ಯಾಣ, ಸೇರಿದಂತೆ 48 ಯಶಸ್ವಿ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಹೆಗ್ಗಳಿಕೆಯನ್ನು ಇವರು ಹೊಂದಿದ್ದಾರೆ.

LEAVE A REPLY

Please enter your comment!
Please enter your name here