ಕೆಚ್ಚೆದೆಯ ಕನ್ನಡಿಗರ ಹೋರಾಟಕ್ಕೆ ಮಣಿದ Google

kannada-language-google-search-showing-ugliest-language-in-india-is-kannada-kannadigas-reaction

ಜಗತ್ತಿನ ಸರ್ಚ್ ಎಂಜಿನ್ ದೈತ್ಯ Google ಇಂದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿ ಸರಿಯಾದ ಏಟನ್ನೇ ತಿಂದಿದೆ. ಗೂಗಲ್ ವೆಬ್ ಸರ್ಚ್ ನಲ್ಲಿ ಹೋಗಿ Ugliest language in India ಎಂದು ಸರ್ಚ್ ಮಾಡಿದರೆ ಕನ್ನಡ ಎಂದು ತೋರಿಸುತ್ತಿರುವುದು ತುಂಬಾ ದೊಡ್ಡ ಪ್ರಮಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಸಾವಿರಾರು ಕನ್ನಡಿಗರು ರಿಪೋರ್ಟ್ ಮಾಡಿದ ಹಿನ್ನೆಲೆಯಲ್ಲಿ ಈ ಪುಟವನ್ನು ಗೂಗಲ್ ಸಂಸ್ಥೆ ತೆಗೆದುಹಾಕಿದೆ.

ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದ್ದು https://debtconsolidationsquad.com/ ಎಂಬ ವೆಬ್ ಸೈಟ್ ರಚಿಸಿದ್ದ Ugliest language in India ಎಂಬ ಲೇಖನ. ಈ ಲೇಖನ ರಚಿಸಿ, ಗೂಗಲ್ ಸರ್ಚ್ ಎಂಜಿನ್ ಗೆ ಇಂಡೆಕ್ಸ್ ಮಾಡಲಾಗಿತ್ತು. ಇದು ಇಷ್ಟೊಂದು ಆಕ್ರೋಶಕ್ಕೆ ಕಾರಣವಾಗಿದೆ. ಗೂಗಲ್​ನಂತಹ ಸಂಸ್ಥೆ ಇಂತಹ ವಿಚಾರಗಳತ್ತ ಸೂಕ್ಷ್ಮವಾಗಿ ಗಮನ ನೀಡಬೇಕು. ಯಾವುದೇ ರೀತಿಯಲ್ಲಿ ಸೌಹಾರ್ದತೆಗೆ ಭಂಗ ತರುವ ವಿಚಾರಗಳು ಪ್ರಕಟಗೊಳ್ಳಲು ಆಸ್ಪದ ನೀಡಬಾರದು. ಜತೆಗೆ, ಕನ್ನಡಿಗರು ಕೂಡಾ ಇಂತಹವುಗಳನ್ನು ಒಟ್ಟಾಗಿ ಪ್ರಶ್ನಿಸಬೇಕು ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದರು.

ಈ ಸಂಬಂಧ ಕನ್ನಡಿಗರೆಲ್ಲರೂ ಒಗ್ಗಟ್ಟಾಗಿ ಗೂಗಲ್ ಸರ್ಚ್ ಎಂಜಿನ್ ಗೆ ರಿಪೋರ್ಟ್ ಮಾಡಲು ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಕೊಂಡಿದ್ದು, ಇದಕ್ಕೆ ಅಭೂತಪೂರ್ವ ಜನ ಬೆಂಬಲ ದೊರೆತಿದೆ. ಇದರ ಪರಿಣಾಮವಾಗಿ ಮಣಿದ ಗೂಗಲ್ debtconsolidationsquad.com ವೆಬ್ ಸೈಟ್ ನ್ನು ತೆಗೆದುಹಾಕಿದೆ.

ಇಂತಹ ತಪ್ಪುಗಳು ಆಗಲು ಕಾರಣವೇನು?

ಜಗತ್ತಿನ ದೈತ್ಯ ಸರ್ಚ್ ಎಂಜಿನ್ ಆಗಿರುವ ಗೂಗಲ್ ಪ್ರತಿಯೊಬ್ಬರ ಜ್ಞಾನದ ಕಣಜವಾಗಿ ಇಂದು ರೂಪುಗೊಂಡಿದೆ. ಹಾಗಾಗಿ ಗೂಗಲ್ ತನ್ನ ಸರ್ಚ್ ಎಂಜಿನ್ ನಲ್ಲಿ ಕೇಳಲಾಗುವ ಹಲವಾರು ಪ್ರಮುಖವಾದ ಪ್ರಶ್ನೆಗಳಿಗೆ ಮಾನವರೇ ಕುಳಿತು ಉತ್ತರವನ್ನು ನೀಡುತ್ತಾರೆ. ಆದರೆ ಜಗತ್ತಿನ ಹಲವಾರು ಪ್ರಶ್ನೆಗಳಿಗೆ ಈ ರೀತಿಯಾಗಿ ಉತ್ತರಿಸಲು ಮನುಷ್ಯರಿಂದ ಸಾಧ್ಯವಿಲ್ಲ. ಈ ಕಾರಣಕ್ಕಾಗಿ ತನ್ನ ತಂತ್ರಜ್ಞಾನದ ಮೂಲಕ ಯಾಂತ್ರಿಕವಾಗಿ ಪ್ರಶ್ನೆಗಳಿಗೆ ಉತ್ತರ ಒದಗಿಸಲಾಗುತ್ತದೆ. ಈ ಪ್ರಕ್ರಿಯಿಯೇ ನಡೆಯುವಾಗ ಜಗತ್ತಿನಲ್ಲಿ ಲಭ್ಯವಿರುವ ವಿವಿಧ ವೆಬ್ ಸೈಟ್ ಗಳನ್ನು ಸ್ಕಾನ್ ಮಾಡಿ, ಜನರು ಕೇಳುವ ಪ್ರಶ್ನೆಗೆ ಉತ್ತರಿಸಿರುವ ಯಾವುದಾದರೂ ವೆಬ್ ಸೈಟ್ ಇದ್ದರೆ ಅದನ್ನು ಪ್ರದರ್ಶನ ಮಾಡುತ್ತದೆ. ಈ ವಿಧಾನದಿಂದಾಗಿಯೇ Ugliest language in India ಎಂಬ ಲೇಖನ ರಚಿಸಿರುವ debtconsolidationsquad.com ವೆಬ್ ಸೈಟ್ ರಚಿಸಿರುವ ಲೇಖನವನ್ನು ಪ್ರದರ್ಶಿಸಿದೆ.

ಇದನ್ನೂ ಓದಿರಿ: ಕೊರೋನಾ ಕಾಲದಲ್ಲಿ ಪಾದ್ಬಾಂಧವನಾದ ಬಂಗಾರ : ಸಂಕಷ್ಟ ತೀರಿಸೋದಕ್ಕೆ ಬಂಗಾರ ಅಡವಿಡುವವರ ಪ್ರಮಾಣದಲ್ಲಿ ಏರಿಕೆ

LEAVE A REPLY

Please enter your comment!
Please enter your name here