ಧ್ರುವ ಸರ್ಜಾ ಅವರು ರವಿವಾರ 24 ರಂದು ತಮ್ಮ ಬ್ಯಾಚುಲರ್ ಲೈಪ್ ಗೆ ಅಂತ್ಯಹಾಡಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತಮ್ಮ ಬಹುದಿನದ ಗೆಳತಿ ಪ್ರೇರಣಾ ಅವರಿಗೆ ನಿನ್ನೆ 7.45 ರ ಸುಮಾರಿಗೆ ಮಾಂಗಲ್ಯ ಧಾರಣೆ ಮಾಡಿದರು.
ಬಹುದಿನಗಳಿಂದ ಚಿಗುರೊಡೆದಿದ್ದ ಪ್ರೀತಿಯನ್ನು ಮನೆಯವರಿಗೆ ತಿಳಿಸಿ, ಲವ್ ಕಮ್ ಅರೆಂಜ್ ಮ್ಯಾರೇಜ್ ಆಗಿರುವ ಧ್ರುವ ಸರ್ಜಾ ಮತ್ತು ಪ್ರೀರಣಾ ಶಂಕರ್ ಅವರದು ಸುಪರ್ ಎನಿಸುವ ಜೋಡಿಯಾಗಿದೆ. ತಮ್ಮ ಬಹುದಿನಗಳ ಪ್ರೇಮಕ್ಕೆ ಮಾಂಗಲ್ಯ ಎಂಬ ಬಂಧವನ್ನು ತೊಡಿಸುವ ಮೂಲಕ ದಾಂಪತ್ಯ ಜೀವನದಲ್ಲಿ ಬಂದಿಯಾಗಿದ್ದಾರೆ.
ನಿನ್ನೆ ನಡೆದ ಅದ್ದೂರಿಯ ಮದುವೆ ಸಮಾರಭದಲ್ಲಿ ಮದುಮಗಳು ಪ್ರೇರಣಾ ಅವರು ಕೇಸರಿಯ ಬಣ್ಣದ ರೇಷ್ಮೆ ಸೀರೆಯಲ್ಲಿ ಮಿಂಚಿದರೆ ಧ್ರುವ ಸರ್ಜಾ ಅವರು ಬಿಳಿ ಬಣ್ಣದ ರೇಷ್ಮೆ ಅಂಗಿ ಮತ್ತು ಪಂಚೆಯನ್ನು ತೊಟ್ಟಿದ್ದರು. ವಿಶೇಷವಾಗಿ ಕನ್ನಡ ಸಿನಿರಂಗವೇ ಮದುವೆಗೆ ಆಗಮಿಸಿತ್ತು. ಇದರಲ್ಲಿ ಪ್ರಮುಖವಾಗಿ ರಾಘವೇಂದ್ರ ರಾಜಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್, ರೀಯಲ್ ಸ್ಟಾರ್ ಉಪೇಂದ್ರ ಜೋಡಿ, ಸುದೀಪ್, ದರ್ಶನ್, ಯಶ್ ಸುಂದರ್ ರಾಜ್, ರವಿಶಂಕರ್ ಸೇರಿದಂತೆ ಹಲವು ತಾರೆಯರು ಆಗಮಿಸಿದ್ದರು.
ಇದನ್ನೂ ಓದಿರಿ: ಪ್ರೇರಣಾ-ಧ್ರುವ ಸರ್ಜಾ ಕಲ್ಯಾಣಕ್ಕೆ ಸಾಕ್ಷಿಯಾದ ಸ್ಯಾಂಡಲ್‌ವುಡ್ ಗಣ್ಯರು