kangana-ranaut-tweet-about-mahatma-gandhi

ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಲ್ಲಿರುವ ಖ್ಯಾತ ನಟಿ ಕಂಗನಾ ರನೌತ್ ಇಂದು ಮತ್ತೊಂದು ವಿವಾದಾತ್ಮಕ ಟ್ವಿಟ್ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ. ಕಂಗನಾ ಗಾಂಧೀಜಿ ವಯಕ್ತಿಕ ಜೀವನದ ಕುರಿತು ಮಾತನಾಡಿದ್ದು, ಈ ಕುರಿತು ಪರ ವಿರೋಧ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ.

ಇಂಗ್ಲೆಂಡ್ ರಾಜಮನೆತನದ ಎರಡನೆಯ ಎಲಿಜಬೆತ್ ರಾಣಿಯ ಕುರಿತು ಸಂದರ್ಶನವೊಂದರಲ್ಲಿ ಕೇಳಿಬಂದಿರುವ ದೂರೊಂದರ ಕುರಿತು ಮಾತನಾಡುತ್ತಾ, ಆಕೆ ಉತ್ತಮ ತಾಯಿ, ತಂಗಿ, ಹೆಂಡತಿಯಾಗಿ ಇರದೇ ಇರಬಹುದು ಆದರೆ ಅದ್ಭುತವಾದ ರಾಣಿಯಾಗಿ ಪ್ರಸಿದ್ಧರಾಗಿದ್ದಾರೆ. ಹಾಗೆಯೇ ಅವರು ನಿವೃತ್ತಿಯಾಗಲು ಅವರನ್ನು ಬಿಡಿ. ಈ ಅಸಡ್ಡೆಯ ನುಡಿಗಳು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.


ಕಂಗನಾ ಅವರ ಈ ಟ್ವಿಟ್ ವೈರಲ್ ಆಗಿದ್ದು, ಇದಕ್ಕೆ ಹಲವು ಪ್ರತಿಕ್ರಿಯೆಗಳು ಬಂದಿದ್ದವು. ಇದೆ ಸಮಯದಲ್ಲಿ ಪ್ರತಿಕ್ರಿಯಿಸಿರುವ ಕಂಗನಾ ” ಮಹಾತ್ಮ ಗಾಂಧಿ ಒಬ್ಬ ಕೆಟ್ಟ ಪೋಷಕರಾಗಿದ್ದರು ಎಂದು ಅವರ ಮಕ್ಕಳು ಆರೋಪಿಸಿದ್ದರು. ಅಥಿತಿಗಳು ಬಳಸಿದ ಶೌಚಾಲಯ ಸ್ವಚ್ಛಗೊಳಿಸಲಿಲ್ಲ ಎನ್ನುವ ಕಾರಣಕ್ಕೆ ತಮ್ಮ ಪತ್ನಿಯನ್ನೇ ಹಲವು ಬಾರಿ ಮನೆಯಿಂದ ಹೊರಹಾಕಿದ್ದ ಕುರಿತು ಉಲ್ಲೇಖಗಳು ಇವೆ. ಅವರೊಬ್ಬ ಮಹಾನ್ ನಾಯಕ ಆಗಿರಬಹುದು ಆದರೆ ಒಳ್ಳೆಯ ಪತಿ, ಪೋಷಕರಾಗಿರಲು ಸಾಧ್ಯವಾಗಿರಲಿಲ್ಲ. ಪುರುಷ ಸಾಧಕರ ವಿಚಾರದಲ್ಲಿ ಇಂತಹ ವಿಷಯಗಳು ಗಣನೆಗೆ ಬರುವುದೇ ಇಲ್ಲ” ಎಂದು ಟ್ವಿಟ್ ಮಾಡಿದ್ದಾರೆ.

ಈ ಟ್ವಿಟ್ ವೈರಲ್ ಆಗಿದ್ದು, ಮಹಾತ್ಮ ಗಾಂಧೀಜಿ ಅವರ ಈ ವಿಚಾರವನ್ನು ಎಳೆದು ತಂದಿರುವ ಈ ಪ್ರತಿಕ್ರಿಯೆಗೆ ಹಲವಾರು ಪರ ವಿರೋಧದ ಪ್ರತಿಕ್ರಿಯೆಗಳು ಬಂದಿವೆ. ಸದಾ ವಿವಾದಗಳಿಂದಲೇ ಸುದ್ದಿಯಾಗುವ ಇವರು ಇಂದು ಈ ವಿವಾದಾತ್ಮಕ ಟ್ವಿಟ್ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here