ಬಹುಭಾಷಾ ನಟ ಕಮಲ್​ ಹಾಸನ್ ಅಸ್ವಸ್ಥ​​ : ಚೆನ್ನೈ ಆಸ್ಪತ್ರೆಗೆ ದಾಖಲು

ಕಮಲ್​ ಹಾಸನ್ । kamal-haasan-admitted-to-chennai-hospital

ಚೆನ್ನೈ: ಬಹುಭಾಷಾ ನಟ ಕಮಲ್ ಹಾಸನ್ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡಿದ್ದು, ಉಸಿರಾಟದ ತೊಂದರೆಯಿಂದಲೂ ಬಳಲುತ್ತಿದ್ದಾರೆ. ಅವರನ್ನು ನಿನ್ನೆ ರಾತ್ರಿ ಎಸ್ ಆರ್ ಎಂ ಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಿನ್ನೆ ಹೈದರಾಬಾದ್ ಗೆ ಹೋಗಿದ್ದ ಕಮಲ್ ಹಾಸನ್ ಅವರು ತಮ್ಮ ಗುರು ಕಲಾತಪಸ್ವಿ ಕೆ ವಿಶ್ವನಾಥ್ ಜೊತೆಗಿದ್ದರು. ತದನಂತರ ನಿನ್ನೆ ರಾತ್ರಿಯೇ ಚೆನ್ನೈಗೆ ಬಂದಿದ್ದರು. ಚನ್ನೈ ತಲುಪಿದ ನಂತರ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು ಎಂದು ಹೇಳಲಾಗಿದೆ. ರಾತ್ರಿ ಸ್ವಲ್ಪ ಜ್ವರ ಕಾಣಿಸಿಕೊಂಡು ಉಸಿರಾಟದ ತೊಂದರೆ ಉಂಟಾಗಿತ್ತು ಎಂದು ತಿಳಿದು ಬಂದಿದೆ. ಆದರೆ ಈಗ ಕಮಲ್ ಹಾಸನ್ ಅವರು ಆರೋಗ್ಯವಾಗಿದ್ದು, ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ನಟ ಕಮಲ್ ಹಾಸನ್ ಅವರಿಗೆ ಈಗ 68 ವರ್ಷ ವಯಸ್ಸು. ಈಗಲೂ ಅವರು ಸಿನಿಮಾ ರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ನಿರ್ಮಾಣ ಹಾಗೂ ನಟನೆಯಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ‘ತಮಿಳು ಬಿಗ್ ಬಾಸ್​ ಸೀಸನ್ 6’ನ್ನು ನಡೆಸಿಕೊಡುತ್ತಿದ್ದಾರೆ.

ಇದನ್ನೂ ಓದಿರಿ: ವರಾಹರೂಪಂ ವಿವಾದ ಹೊಂಬಾಳೆ ಫಿಲಮ್ಸ್ ಗೆ ಹಿನ್ನಡೆ; ಮೇಲ್ಮನವಿ ವಜಾಗೊಳಿಸಿದ ಕೇರಳ ಹೈಕೋರ್ಟ್‌

LEAVE A REPLY

Please enter your comment!
Please enter your name here