ಶಿವಮೊಗ್ಗ: ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಆಗೋಡು ತಿಮ್ಮಪ್ಪ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ಸಣ್ಣ ಪ್ರಮಾಣದಲ್ಲಿ ಜ್ವರ ಕಾಣಿಸಿಕೊಂಡಿತ್ತು. ಇದಲ್ಲದೆ ಶುಕ್ರವಾರ ನೀಡಿದ್ದ ಕೋವಿಡ್ ಪರೀಕ್ಷೆ ಮಾದರಿಯ ಫಲಿತಾಂಶ ಶನಿವಾರ ಪಾಸಿಟಿವ್ ಬಂದಿದೆ. ಈ ಎಲ್ಲ ಕಾರಣಗಳಿಂದ ಮುಂಜಾಗ್ರತಾ ಕ್ರಮವಾಗಿ ಅವರನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ಕರೆತಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
88 ವರ್ಷದ ಇವರು ಕೋವಿಡ್ ಸಮಯದಲ್ಲಿಯೂ ಸಕ್ರಿಯರಾಗಿದ್ದು, ಮಾಸ್ಕ್ ಮತ್ತು ಕೈಗವಸುಗಳನ್ನು ಧರಿಸಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದರು. ಕಳೆದ ವಾರ ನಡೆದ ಭೂ ಸಿಧಾರಣೆ ಕಾಯ್ದೆ ಹೋರಾಟದಲ್ಲಿಯೂ ಭಾಗಿಯಾಗಿದ್ದರು ಎನ್ನಲಾಗಿದೆ.
ಇದನ್ನೂ ಓದಿರಿ: ಕೊರೋನಾ ಚಿಕಿತ್ಸೆಗಾಗಿ ಸಚಿವ ಸುರೇಶ ಕುಮಾರ್ ಆಸ್ಪತ್ರೆಗೆ ದಾಖಲು