ಸ್ವಾತಂತ್ರ್ಯ ಬಂದು 74 ವರ್ಷಗಳ ಬಳಿಕ ಕೊನೆಗೂ ವಿದ್ಯುತ್ ಸಂಪರ್ಕ ಪಡೆದ ಕಾಶ್ಮೀರದ ಹಳ್ಳಿ

0
kadola-village-in-jammu-and-kashmir-gets-power-supply-for-first-time

ಕಾಶ್ಮೀರ: ಸ್ವಾತಂತ್ರ್ಯ ಬಂದು ಬರೋಬ್ಬರಿ 74 ವರ್ಷಗಳೇ ಕಳೆದರೂ ಕಾಶ್ಮೀರದ ರಾಂಬನ್ ಜಿಲ್ಲೆಯ ಕುಗ್ರಾಮವಾದ ಕಾಡೋಲಾ ಎಂಬ ಹಳ್ಳಿಗೆ ಇದುವರೆಗೂ ವಿದ್ಯುತ್ ಸಂಪರ್ಕವಿರಲಿಲ್ಲ. ಇದೀಗ ಕೇಂದ್ರ ಸರಕಾರದ ಪ್ರಾಯೋಜಿತ ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕ ನೀಡಲಾಗಿದೆ.

ರಾಂಬನ್ ಬಸ್ ನಿಲ್ದಾಣದಿಂದ ಸುಮಾರು 12 ಕಿ. ಮೀ. ದೂರದಲ್ಲಿ, ಲಡಾಧರ್ ಪರ್ವತ ಶ್ರೇಣಿಯಲ್ಲಿನ ತುದಿಯಲ್ಲಿ ಕಾಡೋಲಾ ಕುಗ್ರಾಮವಿದೆ. ಕಾಶ್ಮೀರ ಆಡಳಿತ ಇದೀಗ ಕಾಡೋಲಾ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ನೀಡಿದ್ದು, ಇದರಿಂದಾಗಿ ಸುಮಾರು 25 ಮನೆಗಳಿಗೆ ವಿದ್ಯುತ್ ದೊರೆತಿದೆ. ಈ ಕುರಿತು ಮಾಹಿತಿ ನೀಡಿರುವ ಜಮ್ಮು ಪವರ್ ಡಿಸ್ಟ್ರಿಬ್ಯುಷನ್ ಕಾರ್ಪೊರೇಷನ್ ಲಿಮಿಟೆಡ್ ನ ಕಾರ್ಯನಿರ್ವಾಹಕ ಎಂಜಿನಿಯರ್ ನಿಸ್ಸಾರ್ ಹುಸೇನ್, ಈ ವರ್ಷ ಜುಲೈ ಏಳರಂದು ವಿದ್ಯುತ್ ಪೂರೈಸುವ ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ.  .

ಈ ಕುಗ್ರಾಮಕ್ಕೆ ವಿದ್ಯುತ್ ಪೂರೈಸಲು 2018 ರಿಂದ ಕಾರ್ಯ ಆರಂಭಿಸಲಾಗಿದ್ದು, ಈ ಗ್ರಾಮ ಬೆಳಕನ್ನು  ಕಾಣುವಂತೆ ಮಾಡಲು ಇಷ್ಟು ವರ್ಷಗಳು ಬೇಕಾಯಿತು. ಸುಮಾರು 3 ಕಿ.ಮೀ. ವರೆಗೆ ಹೆಚ್ ಟಿ ಲೈನ್ ಮತ್ತು 2.8 ಕಿ. ಮೀ. ಎಲ್ ಟಿ ಲೈನ್ ಎಳೆದು ಸಂಪರ್ಕವನ್ನು ನೀಡಲಾಗಿದೆ. ಶೋಭಾಗ್ಯ ಯೋಜನೆಯಡಿಯಲ್ಲಿ 28.64 ಲಕ್ಷ ರೂಪಾಯಿ ವ್ಯಯಿಸಿ ಬೆಳಕನ್ನು ನೀಡಲಾಗಿದೆ ಎಂದು ನಿಸ್ಸಾರ್ ಹುಸೇನ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ: ಕೃಷಿ ಉತ್ಪಾದನೆ ಹೆಚ್ಚಿಸಲು ಕೈಗೆಟುಕುವ ದರದಲ್ಲಿ ಸೆನ್ಸರ್ ಅಭಿವೃದ್ಧಿಪಡಿಸಿದ ಭಾರತೀಯ ಮೂಲದ ನಾಸಾ ಮಾಜಿ ವಿಜ್ಞಾನಿ 

ಇಷ್ಟು ದಿನ ಮಕ್ಕಳ ಓದಿಗಾಗಿ ಬುಡ್ಡಿ ದೀಪಗಳನ್ನು ಬಳಸುತ್ತಿದ್ದೆವು. ಇನ್ನುಮುಂದೆ ನಮ್ಮ ಮಕ್ಕಳೂ ವಿದ್ಯುತ್ ಬೆಳಕಿನಲ್ಲಿ ಕಲಿಯುವಂತಾಗಿದೆ. ನಾವು ಈ ಮೊದಲು ಮೊಬೈಲ್ ಚಾರ್ಜ್ ಮಾಡಿಸಲು ರಾಂಬನ್ ನಗರಕ್ಕೆ ತೆರಳಬೇಕಿತ್ತು. ಇನ್ನು ದೂರದರ್ಶನ, ಮೊಬೈಲ್ ಮತ್ತು ಇತರ ಇಲ್ಟ್ರಾನಿಕ್ ವಸ್ತುಗಳನ್ನು ಸುಲಭವಾಗಿ ಬಳಕೆ ಮಾಡಬಹುದು ಎಂದು ಊರಿನ ಜನ ಸಂತಸ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here