Big Breaking: ರೇಖಾ ಕದಿರೇಶ್ ಹತ್ಯೆ ಪ್ರಕರಣ; ಕದಿರೇಶ್ ಸಹೋದರಿ ಹಾಗೂ ಪುತ್ರ ಅರೆಸ್ಟ್ !

murder-accused-of-rekha-kadiresh-arrested-by-bengaluru-police

ಬೆಂಗಳೂರು: ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರ ಹತ್ಯೆಗೆ ಸಂಬಂಧಿಸಿದಂತೆ ಕದಿರೇಶ್ ಅವರ ಸಹೋದರಿ ಮತ್ತು ಆಕೆಯ ಪುತ್ರನನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.

ರೇಖಾ ಕದಿರೇಶ್ ಅವರ ಹತ್ಯೆಯ ಹಿಂದೆ ಅವರ ಕುಟುಂಬದ ಪಾತ್ರ ಇರುವ ಕುರಿತು ವಿಚಾರಣೆ ನಡೆಸುತ್ತಿರುವ ಪೋಲೀಸರ ತಂಡಕ್ಕೆ ಕೆಲವು ಸಾಕ್ಷ್ಯಗಳು ದೊರೆತಿವೆ ಎಂದು ಹೇಳಲಾಗುತ್ತಿದೆ, ಈ ಹಿನ್ನೆಲೆಯಲ್ಲಿ ಕದಿರೇಶ್ ಅವರ ಸಹೋದರಿ ಮಾಲಾ ಮತ್ತು ಅವಳ ಪುತ್ರ ಅರುಳ್ ನನ್ನ ಬಂಧಿಸಿ ವಿಚಾರಣೆಯನ್ನು ನಡೆಸಿದ್ದಾರೆ.

ಇದನ್ನೂ ಓದಿರಿ: ಲಾರಿ-ಕಾರಿನ ನಡುವೆ ಭೀಕರ ಅಪಘಾತ: ಟಾಲಿವುಡ್ ನಟ ಕತ್ತಿ ಮಹೇಶ್ ಸ್ಥಿತಿ ಗಂಭೀರ

ರೇಖಾ ಕದಿರೇಶ್ ಅವರ ಹತ್ಯೆಯ ಪ್ರಕರಣದ ತನಿಖೆಯ ಸಂಬಂಧ ಇಲ್ಲಿಯವರೆಗೆ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ಹತ್ಯೆ ನಡೆದ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಆ ಆಧಾರದ ಮೇಲೆ ಪೀಟರ್ ಹಾಗೂ ಸೂರ್ಯನನ್ನು ಬಂಧಿಸಲಾಗಿತ್ತು. ಸದ್ಯ ಕುಟುಂಬದ ಸದಸ್ಯರ ವಿಚಾರಣೆ ನಡೆಸುತ್ತಿದ್ದು, ಪ್ರಮುಖ ಮಾಹಿತಿಗಳನ್ನು ಕಲೆಹಾಕುವಲ್ಲಿ ಪೊಲೀಸರು ನಿರತರಾಗಿದ್ದಾರೆ.

ಕದಿರೇಶ್ ಅವರ ಸಾವಿನ ಬಳಿಕ ರೇಖಾ ಅವರು ಪ್ರಭಾವಿಯಾಗಿ ಬೆಳೆಯುತ್ತ ಹೋದರು, ಈ ಏಳಿಗೆಯನ್ನು ಸಹಿಸದ ಮಾಲಾ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ರೇಖಾ ಅವರ ಕೊಲೆ ಮಾಡಲು ಪ್ಲಾನ್ ರೂಪಿಸಿದರು. ಅವರು ತಮ್ಮ ಸೊಸೆ ಪೂರ್ಣಿಮಾಳನ್ನ ರಾಜಕೀಯಕ್ಕೆ ತರಲು ಬಯಸಿದ್ದರು. ಆದರೆ ರೇಖಾ ಅವರು ಇರುವಷ್ಟು ದಿನ ಇದು ಸಾಧ್ಯವಿಲ್ಲ ಎಂದು ತಿಳಿದು ಸ್ಟಿಫನ್, ಪೀಟರ್, ಸೂರ್ಯ ಜೊತೆ ಸೇರಿ ಪಕ್ಕಾ ಪ್ಲಾನ್ ಮಾಡಿ ಕೊಲೆ ಮಾಡಿಸಿದ್ದಾರೆ ಎಂದು ಸದ್ಯ ಹೇಳಲಾಗುತ್ತಿದ್ದು, ಪೋಲೀಸರ ತನಿಖೆಯ ಬಳಿಕವಷ್ಟೇ ಸತ್ಯಾ ಸತ್ಯತೆ ಹೊರಬರಬೇಕಿದೆ.

ಇದನ್ನೂ ಓದಿರಿ: ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರ ನಿಯಂತ್ರಣಕ್ಕೆ ತಕ್ಷಣ ಕ್ರಮಕೈಗೊಳ್ಳಿ-ಕೇಂದ್ರ ಸರ್ಕಾರ 

LEAVE A REPLY

Please enter your comment!
Please enter your name here