journalist-editor-ravi-belagere-life-journey

ಹಾಯ್ ಬೆಂಗಳೂರು ಪತ್ರಿಕೆ ಮತ್ತು ಓ ಮನಸೆ ಪಾಕ್ಷಿಕದ ಸಂಪಾದಕರಾಗಿದ್ದ ಪತ್ರಕರ್ತ ರವಿ ಬೆಳಗೆರೆ ಅವರು ಶುಕ್ರವಾರ ನಿಧನರಾಗಿದ್ದಾರೆ. ಸಂಪಾದಕರಾಗಿ, ಕಥೆಗಾರರಾಗಿ, ಟಿವಿ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ, ಕಲಾವಿದನಾಗಿ ಗುರುತಿಸಿಕೊಂಡಿದ್ದರು.

ಪತ್ರಿಕಾ ಪ್ರಪಂಚದಲ್ಲಿ ಇತರಿಗಿಂತ ವಿಶೇಷವಾಗಿ ಗುರುತಿಸಿಕೊಂಡಿದ್ದ ಇವರು, ಕಾರ್ಗಿಲ್ ಯುದ್ಧ, ಅಫಗಾನಿಸ್ತಾನದ ಯುದ್ಧ, ಗುಜರಾತ್ ಭೂಕಂಪ ಮತ್ತು ಇತ್ತೀಚಿಗೆ ಸಂಭವಿಸಿದ ಪುಲ್ವಾಮಾ ದಾಳಿಗಳ ಸ್ಥಳಕ್ಕೆ ತೆರಳಿ ಸವಾಲಿನ ನಡುವೆಯೂ ವರದಿಯನ್ನು ಮಾಡಿರುವ ಹೆಗ್ಗಳಿಕೆ ಅವರದು.

ರವಿ ಬೆಳಗೆರೆಯವರು ಹುಟ್ಟಿದ್ದು, 1958 ಮಾರ್ಚ್ 15 ಬಳ್ಳಾರಿಯಲ್ಲಿ ಜನಿಸಿದರು. ನಂತರ ತಮ್ಮ ವಿದ್ಯಾಭಾಸವನ್ನು ಬಳ್ಳಾರಿ, ತುಮಕೂರು, ಧಾರವಾಡಗಳಲ್ಲಿ ಮುಂದುವರೆಸಿ, ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಪದವಿಯನ್ನು ಪಡೆದುಕೊಂಡರು. ಆ ನಂತರದಲ್ಲಿ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಪತ್ರಿಕಾ ರಂಗದಲ್ಲಿ ಆಸಕ್ತಿ ಹೊಂದಿದ್ದ ಇವರು ಸಂಯುಕ್ತ ಕರ್ನಾಟಕ, ಲಂಕೇಶ್ ಪತ್ರಿಕೆ, ಈ ಸಂಜೆ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕಾರ್ಯವನ್ನು ನಿರ್ವಹಿಸಿದರು.

journalist-editor-ravi-belagere-life-journeyರವಿ ಬೆಳಗೆರೆ ಅವರು 1995 ಸೆಪ್ಟೆಂಬರ್ 25 ರಂದು “ಹಾಯ್ ಬೆಂಗಳೂರು” ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆಯ ಮೂಲಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹೊಸದಾದ ಅಲೆಯನ್ನು ಸೃಷ್ಟಿಸಿದರು. ನಂತರದಲ್ಲಿ “ಓ ಮನಸೆ” ಎಂಬ ಪಾಕ್ಷಿಕವನ್ನು ಹೊರತಂದರು. ಆ ಮೂಲಕ ಪತ್ರಿಕಾ ರಂಗದಲ್ಲಿ ವಿಶೇಷ ಛಾಪು ಮೂಡಿಸಿದ ಪತ್ರಕರ್ತರಲ್ಲಿ ಇವರು ಒಬ್ಬರಾಗಿ ಗುರುತಿಸಿಕೊಂಡರು.

ಈ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕ್ರೈಮ್ ಡೈರಿಗೆ ನಿರೂಪಕರಾಗಿ ಕಾಣಿಸಿಕೊಂಡಿದ್ದರು. ಅಪರಾಧ ಜಗತ್ತಿನ ಸುದ್ದಿಯನ್ನು ನೀಡುತ್ತಿದ್ದ ಈ ಕಾರ್ಯಕ್ರಮ ನಿರೂಪಣೆಯ ಶೈಲಿ ಮತ್ತು ಅವರ ಸ್ವರದಲ್ಲಿದ್ದ ಆ ಮಾಂತ್ರಿಕತೆ ಅವರನ್ನು ಮತ್ತಷ್ಟು ಪ್ರಸಿದ್ಧರನ್ನಾಗಿ ಮಾಡಿತು. ಇದರೊಂದಿಗೆ ಟಿ ಎನ್ ಸೀತಾರಾಮ್ ನಿರ್ಮಾಣದ ಧಾರಾವಾಹಿಯಲ್ಲಿಯೂ ಅವರು ನಟಿಸಿದ್ದನ್ನು ಮರೆಯಲು ಸಾಧ್ಯವಿಲ್ಲ. ಇದಲ್ಲದೆ ವಾರಸ್ದಾರ, ಮಾದೇಶ, ಗಂಡ – ಹೆಂಡತಿ ಸೇರಿದಂತೆ ಕೆಲವು ಕನ್ನಡ ಚಿತ್ರಗಳಲ್ಲಿಯೂ ಅಭಿನಯಿಸಿ ಪ್ರಖ್ಯಾತಿಯನ್ನು ಗಳಿಸಿದ್ದರು. ಇತ್ತೀಚಿಗೆ ನಡೆದ ಪ್ರಸಿದ್ಧ “ಬಿಗ್ ಬಾಸ್” ರಿಯಾಲಿಟಿ ಷೋ ಒಂದರಲ್ಲಿ ಸಹ ಭಾಗವಹಿಸಿದ್ದು, ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

journalist-editor-ravi-belagere-life-journeyರವಿ ಬೆಳಗೆರೆ ಅವರು ತಮ್ಮ ಪತ್ರಿಕೆಗಳ ಜೊತೆಯಲ್ಲಿ ಹಲವಾರು ಕಾದಂಬರಿಗಳನ್ನು ಸಹ ಬರೆದಿದ್ದಾರೆ. ಗೋಲಿಬಾರ್, ಸರ್ಪ ಸಂಬಂಧ, ಗಾಡ್ ಫಾದರ್, ಹಿಮಾಗ್ನಿ ಮುಂತಾದ ಕಾದಂಬರಿಗಳು ಮತ್ತು ಹಿಮಾಲಯನ್ ಬ್ಲಂಡರ್, ಕಂಪನಿ ಆಫ್ ವಿಮೆನ್, ಹಂತಕಿ ಐ ಲವ್ ಯು, ದಂಗೆಯ ದಿನಗಳು ಮುಂತಾದ ಅನುವಾದಿತ ಪುಸ್ತಕಗಳನ್ನ ಬರೆದಿದ್ದಾರೆ.

ಅಪರಾಧ ಲೋಕದ ಕತೆಯನ್ನು ವಿವರಿಸುವ ಮತ್ತು ಕಣ್ಣಿಗೆ ಕಟ್ಟುವಂತೆ ಬರೆಯುವ ಶೈಲಿಗೆ ಪ್ರಸಿದ್ಧರಾಗಿದ್ದ ರವಿ ಬೆಳಗೆರೆ ಅವರನ್ನು ಹಲವಾರು ಅಪವಾದಗಳು ಸಹ ಸುಟ್ಟಿಕೊಂಡಿದ್ದವು. ಬ್ಲಾಕ್ ಮೇಲ್, ವರದಿಗಾರರ ಕೊಲೆಗೆ ಸುಪಾರಿ ನೀಡಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದ್ದವು.

ಇವರ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೋಟಾ ಶಿವರಾಂ ಕಾರಂತ್ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿ ಬಂದಿವೆ.

LEAVE A REPLY

Please enter your comment!
Please enter your name here