jds-leader-h-d-kumaraswamy-tweet-on-congress

ಬೆಂಗಳೂರು: ಸರಕಾರವನ್ನು ಉರುಳಿಸಿ, ಶಾಸಕರನ್ನು ಕರೀದಿಸುತ್ತಿರುವ ಬಿಜೆಪಿ ವಿರುದ್ಧ “ಪ್ರಜಾಪ್ರಭುತ್ವ ಉಳಿಸಿ” ಹೋರಾಟವನ್ನು ದೇಶದಾದ್ಯಂತ ನಡೆಸುತ್ತಿರುವ ಕಾಂಗ್ರೆಸ್ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆಯಿದೆ ಎಂದು ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತು ಸರಣಿ ಟ್ವಿಟ ಮಾಡಿರುವ ಕುಮಾರಸ್ವಾಮಿ ಸರಕಾರವನ್ನು ನಡೆಸಲು ಬೆಂಬಲವನ್ನು ಪಡೆದ ಪಕ್ಷದ ಸದಸ್ಯರನ್ನು ಸೆಳೆಯುವುದು, ಇಡೀ ಪಕ್ಷವನ್ನೇವಿಲೀನ ಮಾಡಿಕೊಳ್ಳುವುದು ಕಾಂಗ್ರೆಸ್ ಗೆ ಹೊಸದೇನಲ್ಲ. ಶಾಸಕರ ಕರೀದಿಯ ವಿಚಾರದಲ್ಲಿ ಪ್ರತಿಭಟಿಸುತ್ತಿರುವ ಕಾಂಗ್ರೆಸ್ ಜೆಡಿಎಸ್ ನ್ನು ಒಡೆದಿಲ್ಲವೇ ? ಕಳೆದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಎಂಟು ಮಂದಿಯನ್ನು ರಾಜ್ಯಸಭೆಗೆ ಖರೀದಿಸಿಲ್ಲವೇ ?  ಎಂದು ಪ್ರಶ್ನಿಸಿದ್ದಾರೆ.

2004 ರಲ್ಲಿ ಕಾಂಗ್ರೆಸ್-ಜೆಡಿಎಸ್ ಸರಕಾರದ ಅವಧಿಯಲ್ಲಿ ಕಾಂಗ್ರೆಸ್ ನಮ್ಮ ಶಾಸಕರನ್ನು ಸೆಳೆಯಲು ಪ್ರಯತ್ನಿಸಿಲ್ಲವೇ ? ಎಸ್.ಎಮ್. ಕೃಷ್ಟ  ಸರಕಾರದ ಅವಧಿಯಲ್ಲಿ ಶಾಸಕರನ್ನು ಕರೀದಿಸಿ ಸ್ವತಂತ್ರ ಸರಕಾರ ನಡೆಸಲು ಇದೆ ಕಾಂಗ್ರೆಸ್ ಹೊಂಚು ಹಾಕಿತ್ತು. ಈಗ ಪ್ರಜಾಪ್ರಭುತ್ವ ಉಳಿಸಿ ಹೋರಾಟ ಮಾಡುತ್ತಿರುವ ಕಾಂಗ್ರೆಸ್‌ನಿಂದಲೇ ‘ಕುದುರೆ ವ್ಯಾಪಾರ’ ಎಂಬ ಭಾಷೆ ಹುಟ್ಟಿದೆ ಎಂದು ಹೇಳಿದ್ದಾರೆ.

ಪಕ್ಷಾಂತರ ನಿಷೇಧ ಕಾಯ್ದೆ ಇನ್ನೂ ಕಠಿಣವಾಗಬೇಕು. ಪಕ್ಷಾಂತರ ಮಾಡಿದ ವ್ಯಕ್ತಿಗೆ ಮತ್ತು ಆತನ ಕುಟುಂಬಕ್ಕೆ ಎರಡು ಅವಧಿಗೆ ಚುನಾವಣಾ ನಿರ್ಬಂಧಿಸುವ ಮತ್ತು ಅಧಿಕಾರದಲ್ಲಿ ಕೂರದಿರುವಂತೆ ಕಾನೂನು ಜಾರಿಯಾಗಬೇಕು ಎಂದು ಹೇಳಿದ್ದಾರೆ.

ಪ್ರಜಾಪಭುತ್ವದ ಉಳಿವಿಗಾಗಿ ಸಿದ್ದರಾಮಯ್ಯ ಪ್ರಾಣ ನೀಡಲೂ ಸಿದ್ಧ ಎಂದು ಹೇಳುತ್ತಿದ್ದಾರೆ. ಸ್ವಾಮೀ ಪ್ರಾಣ ಅಮೂಲ್ಯವಾದದ್ದು, ಪ್ರಾಣ ಕೊಡುವುದು ಬೇಡ. ಒಮ್ಮೆ ತಮ್ಮ ಕಾಂಗ್ರೆಸ್ ನಡೆದುಬಂದ ಹಾದಿಯನ್ನು ಅವಲೋಕನ ಮಾಡಿಕೊಳ್ಳಲಿ ಎಂದು ಸಿದ್ದರಾಮಯ್ಯ ಅವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here