ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ನಡೆಯಬೇಕಿರುವ ಉಪಚುನಾವಣೆಯ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಜೆಡಿಎಸ್ ತನ್ನ ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಹಾನಗಲ್ ಕ್ಷೇತ್ರದ ಬೈ ಎಲೆಕ್ಷನ್ ಗೆ ಜೆಡಿಎಸ್ ನಿಂದ ನಿಯಾಜ್ ಶೇಕ್ ಹೆಸರು ಘೋಷಣೆ ಮಾಡಲಾಗಿದೆ.
ಹಾನಗಲ್ ಬೈ ಎಲೆಕ್ಷನ್ ದಿನ ಗೊತ್ತಾದ ಹಿನ್ನೆಲೆಯಲ್ಲಿ ರಾಷ್ತ್ರೀಯ ಪಕ್ಷಗಳಿಗಿಂತಲೂ ಮೊದಲು ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು, ನಿಯಾಜ್ ಶೇಕ್ ಅವರಿಗೆ ಜೆಡಿಎಸ್ ಬಿ ಪಾರ್ಮ್ ನೀಡಿದೆ. ಈ ಕುರಿತಂತೆ ಮಾಜಿಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕೇತಗಾನಹಳ್ಳಿಯಲ್ಲಿ ಘೋಷಣೆ ಮಾಡಿದ್ದಾರೆ. ಜೆಡಿಎಸ್ ಈ ಕ್ಷೇತ್ರದಲ್ಲಿ ಹಲವು ದಿನಗಳಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದು, ಜಯಗಳಿಸುವ ನಿರೀಕ್ಷೆಯಲ್ಲಿದೆ.
ಹಾನಗಲ್ ನಲ್ಲಿ ವಿಧಾನಸಭಾ ಬೈ ಎಲೆಕ್ಷನ್ ಅಕ್ಟೋಬರ್ 30 ರಂದು ನಡೆಯಲಿದ್ದು, ನವೆಂಬರ್ 2 ರಂದು ಮತ ಎಣಿಕೆ ನಡೆಯಲಿದೆ.