ಜಮ್ಮು & ಕಾಶ್ಮೀರ ಭಾರತದಿಂದ ಬೇರ್ಪಡಿಸಲಾಗದ ಭಾಗ: ಪಾಕ್‌ಗೆ ಎಂಇಎ ತಿರುಗೇಟು

Jammu and Kashmir integral, inalienable part of India MEA

ನವದೆಹಲಿ: ಜಮ್ಮು ಮತ್ತು ಕಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಕಲಂ 370 ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿದೆ.

ಪಾಕಿಸ್ತಾನದ ಪ್ರಧಾನಿ ಶಾಬಾಜ್ ಷರೀಫ್ ಮತ್ತು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಟ್ವಿಟ್ಟರ್ ನಲ್ಲಿ ಜಮ್ಮು ಕಶ್ಮೀರ ಮತ್ತು 370 ನೇ ವಿಧಿಯ ರದ್ದತಿ ಕುರಿತಂತೆ ಅಂತಾರಾಷ್ಟ್ರೀಯ ಸಮುದಾಯ ಮಧ್ಯ ಪ್ರವೇಶಿಸಬೇಕು ಎಂಬ ಹೇಳಿಕೆಯನ್ನು ನೀಡಿದ ಬೆನ್ನಲ್ಲೇ ಭಾರತೀಯ ವಿದೇಶಾಂಗ ಸಚಿವಾಲಯ ಖಡಕ್ ಹೇಳಿಕೆಯನ್ನು ನೀಡಿದೆ.

ಮಾಧ್ಯಮ ಸಂವಾದವೊಂದರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾತನಾಡುತ್ತ, ಜಮ್ಮು ಮತ್ತು ಕಶ್ಮೀರ ಭಾರತದ ಅಂಗವಾಗಿದೆ. ಅಲ್ಲದೇ 370 ನೇ ವಿಧಿಯು ಸಂಪೂರ್ಣವಾಗಿ ಭಾರತದ ಮತ್ತು ನಮ್ಮ ಸಂವಿಧಾನದ ವಿಷಯವಾಗಿದೆ. ನಮ್ಮ ಆಂತರಿಕ ವಿಚಾರದಲ್ಲಿ ಬೇರೆಯವರು ಮೂಗು ತೂರಿಸಲು ಇಲ್ಲಿ ಅವರ ಸ್ಥಾನ ಏನೆಂಬುದು ನಮಗೆ ತೋರುತ್ತಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಟ್ವಿಟ್ ಮಾಡಿ, ದಕ್ಷಿಣ ಏಷ್ಯದಲ್ಲಿನ ಶಾಂತಿ ಮತ್ತು ಅಭಿವೃದ್ಧಿ ಕಾಶ್ಮೀರದ ವಿವಾದಕ್ಕೆ ಸಂಬಂಧಿಸಿದೆ. ಈ ಸ್ವಯಂ ನಿರ್ಣಯದ ಹಕ್ಕಿನ ದಿನದಂದು ನಾನು IOJK ಯ ಕಾಶ್ಮೀರಿಗಳಿಗೆ ತಮ್ಮ ಭವಿಷ್ಯವನ್ನು ನಿರ್ಧರಿಸುವ ಕಾನೂನುಬದ್ಧ ಹಕ್ಕನ್ನು ನೀಡುವಲ್ಲಿ ತನ್ನ ಪಾತ್ರವನ್ನು ವಹಿಸುವಂತೆ ಜಾಗತಿಕ ಸಮುದಾಯಕ್ಕೆ ಕರೆ ನೀಡುತ್ತೇನೆ. ಭಾರತವು ಕಾಶ್ಮೀರದ ವಿರುದ್ಧ ಆಗಸ್ಟ್ 5 ರಂದು ತೆಗೆದುಕೊಂಡ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಟ್ವಿಟ್ ಮಾಡಿದ್ದರು.

ಇದನ್ನೂ ಓದಿರಿ: 2024ರ ಜನವರಿ 1 ರಂದು ಮೊದಲ ಹಂತದ ಅಯೋಧ್ಯಾ ರಾಮಮಂದಿರ ಲೋಕಾರ್ಪಣೆ!

LEAVE A REPLY

Please enter your comment!
Please enter your name here