jammu-and-kashmir-indian-army-guns-down-6-let-terrorists-in-rajouri-jungles

ಶ್ರೀನಗರ: ಪಾಕಿಸ್ತಾನದಲ್ಲಿ ತರಬೇತಿ ಪಡೆದ ಪಾಕ್ ಬೆಂಬಲಿತ ಉಗ್ರಗಾಮಿ ಸಂಘಟನೆಯ ಲಷ್ಖರ್-ಎ-ತೊಯ್ಬಾದ ಆರು ಸಶಸ್ತ್ರ ಸರ್ಜಿತ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಈ ಮೂಲಕ ಇಂದು ಭಾರತೀಯ ಸೇನೆ ರಣ ಬೇಟೆಯನ್ನು ಮಾಡಿದೆ.

ಹಲವು ದಿನಗಳಿಂದ ಕಾಶ್ಮೀರ ಕಣಿವೆಯಲ್ಲಿ ಉಗ್ರರ ಹಾವಳಿ ಹೆಚ್ಚಾಗಿದ್ದು, ಸೇನೆ ತನ್ನ ಕಾರ್ಯಾಚರಣೆಯನ್ನು ಹೆಚ್ಚಿಸಿದೆ. ಕ್ರೌರ್ಯ ಮೆರೆಯಲು ಸಿದ್ಧರಾಗಿದ್ದ, ಆರು ಜನ ಉಗ್ರರನ್ನು ಇಂದು ಸೇನೆ ಹೊಡೆದುರುಳಿಸಿದೆ. ರಾಜೌರಿ ಸೆಕ್ಟಾರ್ ಪ್ರದೇಶದ ದಟ್ಟ ಅರಣ್ಯದಲ್ಲಿ ಉಗ್ರರು ಅಡಗಿ ಕುಳಿತಿರುವ ಮಾಹಿತಿ ಪಡೆಯದ 16 ಕಾರ್ಪ್ಸ್ ಕಮಾಂಡರ್ ಯೋಧರ ಸೇನೆ ಕಾರ್ಯಾಚರಣೆಗೆ ಇಳಿಯಿತು. ಈ ಸಮಯದಲ್ಲಿ ಗುಂಡಿನ ಕಾಳಗ ನಡೆದು, ಕೊನೆಗೂ ಆರು ಜನ ಉಗ್ರರನ್ನು ಹೊಡೆದುರುಳಿಸುವಲ್ಲಿ ಸೇನೆ ಯಶಸ್ವಿಯಾಗಿದೆ.

ಇದನ್ನೂ ಓದಿರಿ: BEL Recruitment 2021: 88 ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಟ್ರೈನಿ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಜೌರಿ ಅರಣ್ಯ ಪ್ರದೇಶದಲ್ಲಿ 9 ಭಾರತೀಯ ಯೋಧರನ್ನು ಕಳೆದುಕೊಂಡ ನಂತರ ಸಿ ಡಿ ಎಸ್ ಜನರಲ್ ಬಿಪಿನ್ ರಾವತ್ ಅಕ್ಟೋಬರ್ 17 ರಂದು ಆ ಪ್ರದೇಶಕ್ಕೆ ಭೇಟಿ ನೀಡಿದ್ದರು. ಇದರ ಬೆನ್ನಲ್ಲೇ ಆ ಪ್ರದೇಶದಲ್ಲಿ ಉಗ್ರ-ವಿರೋಧಿ ಕಾರ್ಯಾಚರಣೆಗಳು ಮತ್ತು ಶೋಧಗಳು ತೀವ್ರಗೊಂಡಿದ್ದವು.

ಇದನ್ನೂ ಓದಿರಿ: ತೇಜಸ್ವಿ ಸೂರ್ಯ ಅವರಿಗೆ ಬೆದರಿದ ಫ್ಯಾಬ್ ಇಂಡಿಯಾ: ವಿವಾದಾತ್ಮಕ ‘ಜಶ್ನ್ ಇ ರಿವಾಜ್’ ಜಾಹಿರಾತು ಹಿಂತೆಗೆತ

LEAVE A REPLY

Please enter your comment!
Please enter your name here