jaipur-nineteen-year-old-girl-working-at-a-private-hospital-lodged-a-case-of-gang-rape-against-five-persons

ಜೈಪುರ: ರಾಜಸ್ಥಾನದ ಜೈಪುರದಲ್ಲಿ 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಪೈಶಾಚಿಕ ಘಟನೆ ನಡೆದಿದೆ. ಈ ಕುರಿತಂತೆ ಯುವತಿ ಶ್ಯಾಮ್ ನಗರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ.

ಯುವತಿಯು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಐವರ ವಿರುದ್ಧ ದೂರನ್ನು ದಾಖಲಿಸಿದ್ದಾಳೆ. ಅವಳ ದೂರಿನ ಪ್ರಕಾರ ಕಳೆದ 9 ದಿನಗಳ ಹಿಂದೆ ಐವರು ಯುವಕರು ಊರಿನ ಹೊರವಲಯಕ್ಕೆ ಆಕೆಯನ್ನು ಕರೆದೊಯ್ದಿದ್ದಾರೆ. ಅಲ್ಲಿ ಡ್ರಗ್ಸ್ ನೀಡಿ, ಆಕೆಯ ಮೇಲೆ ಅತ್ಯಾಚಾರವನ್ನು ನಡೆಸಿದ್ದಾರೆ ಎನ್ನಲಾಗಿದೆ.

ಪ್ರಕರಣವನ್ನು ದಾಖಲಿಸಿಕೊಂಡಿರುವ ಶ್ಯಾಮ್ ನಗರ ಠಾಣೆ ಪೊಲೀಸರು ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಅಲ್ಲದೇ ದೂರಿನ ಅನ್ವಯ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಬೇಸರದ ಸಂಗತಿಯಾಗಿದೆ.

ಇದನ್ನೂ ಓದಿರಿ: ತೇಜಸ್ವಿ ಸೂರ್ಯ ಅವರಿಗೆ ಬೆದರಿದ ಫ್ಯಾಬ್ ಇಂಡಿಯಾ: ವಿವಾದಾತ್ಮಕ ‘ಜಶ್ನ್ ಇ ರಿವಾಜ್’ ಜಾಹಿರಾತು ಹಿಂತೆಗೆತ

LEAVE A REPLY

Please enter your comment!
Please enter your name here