jaggesh-40-years-achievement-in-kannada-cinema-industry

ಕನ್ನಡ ಚಿತ್ರರಂಗದ ಹಾಸ್ಯ ನಟ ಜಗ್ಗೇಶ್ ಅವರು ಸಿನಿಮಾ ಜಗತ್ತಿಗೆ ಕಾಲಿಟ್ಟು 40 ವರ್ಷಗಳು ಸಂದಿವೆ. ಈ ಹಿನ್ನೆಲೆ ಸಂತಸ ಹಂಚಿಕೊಂಡಿದ್ದು, ಇದಕ್ಕೆ ಕಾರಣವಾದ ಹಲವರಿಗೆ ಟ್ವೀಟ್‌ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.

ಈ ಕುರಿತು ಸಂತೋಷವನ್ನು ಟ್ವಿಟ್ ಮೂಲಕ ಹಂಚಿಕೊಂಡಿದ್ದು, “1980 ನವಂಬರ್ 17ಕ್ಕೆ ಸಿನಿರಂಗಕ್ಕೆ ನಾ ಬಂದು ಇಂದಿಗೆ 2020 ನವಂಬರ್ 17ಕ್ಕೆ 40ವರ್ಷ. ಈ ಬೆಳವಣಿಗೆಗೆ ಪ್ರೋತ್ಸಾಹಿಸಿದ ನಿರ್ದೇಶಕ ನಿರ್ಮಾಪಕ, ಭುಜತಟ್ಟಿದ ಅಂದಿನ ನನ್ನ ಕಲಾಕುಟುಂಬ, ಮಾಧ್ಯಮ ಕನ್ನಡದ ಮನಸ್ಸುಗಳು ! ಅಪಮಾನಿಸಿದ ಸ್ನೇಹಕ್ಕೆ, ಗೆಲ್ಲುವೆ ಹೋಗು ಕರಿಯ ಎಂದ ಹರಸಿದ ಅಮ್ಮ, ಜೊತೆನಿಂತ ಪರಿಮಳ, ಕೋಮಲ್ ರಾಯರದಯೆಗೆ ಆಜನ್ಮ ಋಣಿ ! ಹರಸಿ ನಮಸ್ಕಾರ” ಎಂದು ಹೇಳಿದ್ದಾರೆ.

ಜಗ್ಗೇಶ ಅವರ ಸಿನಿಮಾ ರಂಗದ 40 ವರ್ಷದ ಸಾಧನೆಗೆ ಅವರ ಅಭಿಮಾನಿಗಳು, ನಟ – ನಟಿಯರು, ರಾಜಕೀಯ ನಾಯಕರು ಟ್ವೀಟ್‌ ಮೂಲಕ ಶುಭ ಹಾರೈಕೆಗಳನ್ನು ತಿಳಿಸುತ್ತಿದ್ದು, ಇದಕ್ಕೆ ಪ್ರತಿಯಾಗಿ ಜಗ್ಗೇಶ್ ಧನ್ಯವಾದ ಹೇಳಿದ್ದಾರೆ. ವರಸ ನಾಯಕ ಜಗ್ಗೇಶ್‌ಗೆ ಆರೋಗ್ಯ ಸಚಿವ ಡಾ. ಸುಧಾಕರ್, ನಟ, ನಿರ್ದೇಶಕ ತರುಣ್‌ ಸುಧೀರ್, ಶಶಿ ಕುಮಾರ್, ರಿಷಭ್‌ ಶೆಟ್ಟಿ, ದುನಿಯಾ ವಿಜಯ್, ಸಿಂಪಲ್‌ ಸುನಿ, ನೆನಪಿರಲಿ ಪ್ರೇಮ್, ನಿರ್ದೇಶಕ ಪ್ರೇಮ್, ರಘುರಾಮ್, ನಟ ಗಣೇಶ್, ರವಿಶಂಕರ್ ಗೌಡ ಟ್ವೀಟ್‌ ಮೂಲಕ ಶುಭ ಕೋರಿದ್ದಾರೆ. ಜತೆಗೆ, ನಟಿಯರಾದ ಅನು ಪ್ರಭಾಕರ್, ರಕ್ಷಿತಾ, ಮೇಘನಾ ಸೇರಿ ಅನೇಕರು ಶುಭ ಕೋರಿದ್ದಾರೆ.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here