jacqueline-fernandez-kissing-photo-with-sukesh-chandrasekhar-creates-controversy

ನಟಿ (Jacqueline Fernandez) ಜಾಕ್ವೆಲಿನ್ ಫರ್ನಾಂಡಿಸ್ ಅವರ ಖಾಸಗಿ ಫೋಟೋವೊಂದು ಬಹಿರಂಗವಾಗಿದ್ದು, ಸುಕೇಶ್ ಚಂದ್ರಶೇಖರ್ ನಡುವಿನ ಸಂಬಂಧವನ್ನು ಎತ್ತಿ ತೋರಿಸುತ್ತಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವ ಸುಕೇಶ್ ಚಂದ್ರಶೇಖರ್ ಅವರ ಜೊತೆಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಜಾಕ್ವೆಲಿನ್ ಹೇಳಿಕೆಯ ಬಳಿಕ ಈ ಫೋಟೋ ಬಿಡುಗಡೆಯಾಗಿದ್ದು, ವೈರಲ್ ಆಗುತ್ತಿದೆ.

ವೈರಲ್ ಆಗಿರುವ ಫೋಟೋದಲ್ಲಿ ನಟಿ ಜಾಕ್ವೆಲಿನ್ ಕೆನ್ನೆಗೆ ಸುಕೇಶ್ ಮುತ್ತು ನೀಡುತ್ತಿದ್ದು, ಇಬ್ಬರೂ ಮಿರರ್ ಸೆಲ್ಪಿಗೆ ಪೋಸ್ ನೀಡಿದ್ದಾರೆ. ಈ ಫೋಟೋವೂ ಇಂಡಿಯಾ ಟುಡೇ ಬಿಡುಗಡೆ ಮಾಡಿದ್ದು, ಏಪ್ರಿಲ್-ಜೂನ್ ನಡುವೆ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಾಗ ಚೆನ್ನೈನ ಹೋಟೆಲೊಂದರಲ್ಲಿ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ. ಅಲ್ಲದೇ ಫೋಟೋದಲ್ಲಿ ಕಾಣಿಸುತ್ತಿರುವ ಐಫೋನ್ ೧೨ ಪ್ರೋ ಪೋನಿನಲ್ಲಿಯೇ ಅಕ್ರಮ ಹಣ ವರ್ಗಾವಣೆ ವಂಚನೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಜಾರಿನಿರ್ದೇಶನಾಲಯ ಅಕ್ಟೋಬರ್ ನಲ್ಲಿ ಸುಕೇಶ್ ಅಕ್ರಮ ಹಣವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾಕ್ವೆಲಿನ್ ಅವರಿಗೆ ಸಮನ್ಸ್ ನೀಡಿತ್ತು. ಆ ಬಳಿಕ ಜಾಕ್ವೆಲಿನ್ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಈ ಸಮಯದಲ್ಲಿ ಜಾಕ್ವೆಲಿನ್ ಪರ ವಕೀಲರು ಸುಕೇಶ್ ಮತ್ತು ಆತನ ಪತ್ನಿ ನಟಿ ಲೀನಾ ಮರಿಯಾ ಪಾಲ್ ಜೊತೆಗಿನ ಸಂಬಂಧವಿರುವುದನ್ನು ನಿರಾಕರಿಸಿದ್ದರು. ಆದರೆ ಸುಕೇಶ್ ಪರ ವಾದಿಸುತ್ತಿದ್ದ ವಕೀಲರು ಜಾಕ್ವೆಲಿನ್, ಸುಕೇಶ್ ಜೊತೆಯಲ್ಲಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

jacqueline-fernandez-kissing-photo-with-sukesh-chandrasekhar-creates-controversy

ಚುನಾವಣಾ ಆಯೋಗದ ಲಂಚ ಪ್ರಕರಣದಲ್ಲಿ ಚಂದ್ರಶೇಖರ್ ಅವರನ್ನು ಏಪ್ರಿಲ್ 2017 ರಲ್ಲಿ ಬಂಧಿಸಿ, ನಂತರ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. ಎ ಐ ಎ ಡಿ ಎಂ ಕೆಯ ಎರಡು ಎಲೆ ಚುನಾವಣಾ ಚಿಹ್ನೆಯ ವಿವಾದಕ್ಕೆ ಸಂಬಂಧಿಸಿದಂತೆ ಇಸಿ ಅಧಿಕಾರಿಗಳಿಗೆ ಲಂಚ ನೀಡಲು ಅವರು ಎ ಐ ಎ ಡಿ ಎಂ ಕೆ ನಾಯಕ ಟಿಟಿವಿ ದಿನಕರನ್ ಅವರಿಂದ ಹಣವನ್ನು ತೆಗೆದುಕೊಂಡಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕ್ವೆಲಿನ್ ಅವರು ಕೊನೆಯದಾಗಿ ಅಕ್ಟೋಬರ್ 20 ರಂದು ಇಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಇದೀಗ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ಜಾರಿ ಮಾಡಿದೆ.

LEAVE A REPLY

Please enter your comment!
Please enter your name here