j-k-up-migrant-laborers-killed-in-grenade-attack

ಶೋಪಿಯಾನ: ಇಬ್ಬರು ವಲಸೆ ಕಾರ್ಮಿಕರ ಮೇಲೆ ಗ್ರೆನೇಡ್ ದಾಳಿ ನಡೆಸಿ ಕೊಂಡಿದ್ದ, ಉಗ್ರ ಇಮ್ರಾನ್ ಬಶೀರ್ ಇಂದು ಭದ್ರತಾಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ವಲಸೆ ಕಾರ್ಮಿಕ ಮೇಲೆ ಭಯೋತ್ಪಾದಕ ದಾಳಿಗಳು ಪದೇ ಪದೇ ನಡೆಯುತ್ತಿದ್ದು, ಅಲ್ಲಿನ ಕಾರ್ಮಿಕರಲ್ಲಿ ಆತಂಕವನ್ನು ಉಂಟುಮಾಡಿದೆ. ಇಂತಹ ನಾಗರೀಕ ಹತ್ಯೆಯ ನಿಗ್ರಹಕ್ಕೆ ಸರಕಾರ ಸೇನೆಗೆ ಸಂಪೂರ್ಣ ಅಧಿಕಾರ ನೀಡಿದೆ. ಈ ಹಿನ್ನೆಲೆಯಲ್ಲಿ ಘಟನೆ ನಡೆದ ಕೇವಲ 78 ಗಂಟೆಗಳಲ್ಲಿಯೇ ಭದ್ರತಾ ಪಡೆಗಳು ಶೋಪಿಯಾನ ನೌಗಾಮ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿ ಉಗ್ರ ಇಮ್ರಾನ್ ಬಶೀರ್ ನನ್ನು ಹೊಡೆದುರುಳಿಸಿದ್ದಾರೆ.

ಕಾಶ್ಮೀರಿ ಪಂಡಿತರ ಮೇಲೆ ಗುಂಡು ಹಾರಿಸಿ ಹತ್ಯೆ ನಡೆಸಿದ ಸ್ಥಳದ ಸಮೀಪದಲ್ಲಿಯೇ ಈ ಕಾರ್ಯಾಚರಣೆ ನಡೆದಿದ್ದು, ಕಾಶ್ಮೀರಲ್ಲಿನ ಹಿಂಸಾಚಾರ ನಿಯಂತ್ರಣಕ್ಕೆ ಭದ್ರತಾ ಪಡೆಗಳು ಕಠಿಣ ಕ್ರಮಕ್ಕೆ ಮುಂದಾಗಿವೆ. ಹಿಂಸಾಚಾರ ಮಟ್ಟಹಾಕಲು ಸರಕಾರ ಮುಂದಾಗಿದ್ದು, ಕಾರ್ಯಾಚರಣೆಗೆ ಆದೇಶ ನೀಡಿದೆ.

ಇದನ್ನೂ ಓದಿರಿ: ಕುತೂಹಲ ಘಟ್ಟ ತಲುಪಿದ ಎಐಸಿಸಿ ಅಧ್ಯಕ್ಷೀಯ ಚುನಾವಣೆ: ಇಂದು ಫಲಿತಾಂಶ ಪ್ರಕಟ

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here