ಉಚಿತ ವಿದ್ಯುತ್ ಬದಲು ಜನರು ಆದಾಯಗಳಿಸುವ ಸಮಯವಿದು – ನರೇಂದ್ರ ಮೋದಿ

ಉಚಿತ ವಿದ್ಯುತ್ | its-time-to-generate-income-from-electricity-than-getting-it-for-free-pm-narendra-modi

ಅಹಮದಾಬಾದ್: ಜನರು ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳುವ ಬದಲು, ವಿದ್ಯುತ್ ನಿಂದಲೇ ಆದಾಯಗಳಿಸುವ ಸಮಯವಿದು ಎಂದು ನರೇಂದ್ರ ಮೋದಿಯವರು (Narendra Modi) ಹೇಳಿದ್ದಾರೆ. ಈ ಮೂಲಕ ಗುಜರಾತ್ ಚುನಾವಣೆ(Gujarat Election) ಯಲ್ಲಿ  ಆಪ್ ನೀಡಿರುವ ಉಚಿತ ವಿದ್ಯುತ್ (Free Electricity) ಆಶ್ವಾಸನೆಗೆ ಟಾಂಗ್ ನೀಡಿದ್ದಾರೆ.

ಗುಜರಾತ್ ನಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡುತ್ತಾ ನರೇಂದ್ರ ಮೋದಿಯವರು, ವಿದ್ಯುತ್ ಉತ್ಪಾದಿಸಿ ಆದಾಯ ಹೇಗೆ ಗಳಿಸಬೇಕು ಎಂಬುದು ತಮಗಷ್ಟೆ ಗೊತ್ತು. ಜನರು ಉಚಿತ ವಿದ್ಯುತ್ ಪಡೆಯುವ ಬದಲು ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸಿ ಲಾಭಗಳಿಸುವುದನ್ನು ನೋಡಲು ಬಯಸುತ್ತೇನೆ. ಮೆಹ್ಸಾನ ಜಿಲ್ಲೆಯ ಮೊಧೇರಾ ಗ್ರಾಮ ಹೇಗೆ ಸೌರಶಕ್ತಿಯ ಮೂಲಕ ಆದಾಯ ಗಳಿಸುತ್ತಿದೆ ಎಂದು ತಾವು ನೋಡಬೇಕು. ಅಗತ್ಯವಿರುವಷ್ಟು ವಿದ್ಯುತ್ ಉಪಯೋಗಿಸಿಕೊಂಡು ಹೆಚ್ಚಿನದನ್ನು ಸರಕಾರಕ್ಕೆ ಮಾರಾಟ ಮಾಡಿ ಲಾಭ ಗಳಿಸಬಹುದು. ತಾವೆಲ್ಲಾ ಈ ರೀತಿಯಾಗುವುದನ್ನು ನೋಡಲು ಬಯಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿರಿ: ಪುಲ್ವಾಮ ದಾಳಿ ವೇಳೆ ಐಎಸ್‌ಐ ಚೀಫ್‌ ಆಗಿದ್ದ ಆಸಿಮ್ ಮುನೀರ್ ಈಗ ಪಾಕ್‌ ಸೇನಾ ಮುಖ್ಯಸ್ಥ

ಪಂಜಾಬ್ ಬಳಿಕ ಗುಜರಾತ್ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಎಎಪಿ ಜನರಿಗೆ ಉಚಿತಗಳ ಕೊಡುಗೆ ನೀಡಲು ಮುಂದಾಗಿದೆ. ತಾವು ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು 300 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉಚಿತ ಸೇವೆಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ. ಈ ಕುರಿತಂತೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.

182 ಸದಸ್ಯರ ಬಲ ಹೊಂದಿರುವ ಗುಜರಾತ್ ವಿಧಾನಸಭೆಗೆ ಡಿಸೇಂಬರ್ 1 ಮತ್ತು ಡಿಸೇಂಬರ್ 5 ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ಭರ್ಜರಿ ತಯಾರಿಯನ್ನು ನಡೆಸುತ್ತಿವೆ. ಡಿಸೇಂಬರ್ 8 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿರಿ: ಕಾಡಾನೆ ದಾಳಿಗೆ ದಸರಾ ಉತ್ಸವದಲ್ಲಿ ಪಾಲ್ಗೊಂಡಿದ್ದ ಗೋಪಾಲಸ್ವಾಮಿ ಆನೆ ಸಾವು

LEAVE A REPLY

Please enter your comment!
Please enter your name here