ದೇಹದ ಉಷ್ಣತೆಯನ್ನು ತಕ್ಷಣವೇ ಕಡಿಮೆ ಮಾಡಲು ಇಲ್ಲಿದೆ ಸುಲಭ ಉಪಾಯಗಳು..!

ನಮ್ಮ ದೇಹದಲ್ಲಿ ಉಷ್ಣತೆ ಹೆಚ್ಚಾಗಲು ಅನೇಕ ಕಾರಣಗಳಿವೆ. ಈಗಾಗಲೇ ನಾವು ಬೇಸಿಗೆಯ ವಾತಾವರಣವನ್ನು ನೋಡುತ್ತಿದ್ದೇವೆ. ಸೂರ್ಯನ ತೀಕ್ಷ್ಣವಾದ ಕಿರಣಗಳ ಅಡಿಯಲ್ಲಿ ಕೆಲಸಗಳನ್ನು ಮಾಡುವುದು ದೇಹದ ಉಷ್ಣತೆ ಹೆಚ್ಚಲು ಕಾರಣವಾಗುತ್ತದೆ. ಅಲ್ಲದೆ ನಾವು ಸೇವಿಸುವ ಆಹಾರಗಳು, ಕಾಯಿಲೆಗಳು ಮತ್ತು ಔಷಧಗಳ ಸೇವನೆಯೂ ಕಾರಣವಾಗಬಹುದು.

ನಾವು ಸೇವಿಸುವ ಆಹಾರಗಳಲ್ಲಿ ಅತಿಯಾಗಿ ಮಸಾಲೆ ಪದಾರ್ಥಗಳ ಬಳಕೆ, ಜಂಕ್ ಪುಡ್ಗಳ ಸೇವನೆ, ಅಲ್ಕೋಹಾಲ್ ಮತ್ತು ಕೆಫಿನ್ ಅಂಶವನ್ನು ಹೊಂದಿರುವ ಚಹಾ ಕಾಫಿಗಳಂತಹ ಪದಾರ್ಥಗಳ ಸೇವನೆಯು ಹೆಚ್ಚಿನ ಉಷ್ಣತೆಯನ್ನು ಉಂಟುಮಾಡುತ್ತದೆ. ಇಂತಹ ಸಮಸ್ಯೆ ಉಂಟಾದಾಗ ಕೆಲವು ಮನೆ ಮದ್ದುಗಳ ಮೂಲಕ ದೇಹದ ಶಾಖವನ್ನು ಕಡಿಮೆ ಮಾಡಿಕೊಳ್ಳಬಹುದು.

ಇದನ್ನೂ ಓದಿರಿ :ಮೇಕೆಯ ಹಾಲನ್ನು ಸೇವಿಸುತ್ತೀರೇ ? ಹಾಗಾದರೆ ಅದರ ಪರಿಣಾಮಗಳ ಬಗ್ಗೆ ತಿಳಿಯಿರಿ..

ದೇಹದಲ್ಲಿ ಉಷ್ಣತೆ ಹೆಚ್ಚುವಿಕೆಯನ್ನು ತಡೆಗಟ್ಟುವ ಕ್ರಮ

  • ಮಸಾಲೆಯುಕ್ತ  ಆಹಾರ ಪದಾರ್ಥಗಳಿಂದ ದೂರವಿರಿ.
  • ಬಿಸಿಲು/ಬಿಸಿ ಪ್ರದೇಶಗಳಿಂದ ದುರವಿರುವುದು ಉತ್ತಮ.
  • ಹಸಿರು ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸಿ.
  • ಮಾಂಸವನ್ನು ಕಡಿಮೆ ಬಳಸಿ.
  • ಆಹಾರ ತಯಾರಿಕೆಯಲ್ಲಿ ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಗಳನ್ನು ಬಳಸಿ.
  • ಕಡಿಮೆ ಸೋಡಿಯಂ ಹೊಂದಿರುವ ಆಹಾರ ಸೇವಿಸಿ.

ಇದನ್ನೂ ಓದಿರಿ: ದೇಹದ ತೂಕವನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳುವುದು ಹೇಗೆ..?

ದೇಹದ ಉಷ್ಣತೆಯನ್ನು ಕಡಿಮೆ ಮಾಡುವ ಮನೆಮದ್ದುಗಳು


ಜೀರಿಗೆ ಅಥಾವ ಧನಿಯಾ ಬೀಜವನ್ನು ಚೆನ್ನಾಗಿ ಅರೆದು ನೀರಿಗೆ ಹಾಕಿ  ಕುದಿಸಿಕೊಳ್ಳಿ. ಅದಕ್ಕೆ ಕೆಂಪು ಕಲ್ಲುಸಕ್ಕರೆ ಬೆರೆಸಿ ದಿನಕ್ಕೆ ಎರಡು ಬಾರಿಯಂತೆ ಕುಡಿಯುತ್ತ ಬನ್ನಿರಿ. ಇದು ನಿಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಎಳನೀರು ಸೇವನೆಯು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಅಲ್ಲದೇ ದೇಹದ ಉಷ್ಣತೆಯ ಶಮನಕ್ಕೆ ಉತ್ತಮ ಔಷಧವೂ ಆಗಿದೆ.

ನೀರಿನಂಶ ಹೆಚ್ಚಿರುವ ಸೌತೆಕಾಯಿ, ಹಸಿರು ತರಕಾರಿಗಳು, ಮೂಲಂಗಿ, ಉಳ್ಳಾಗಡ್ಡೆ, ಕಲ್ಲಂಗಡಿ ಹಣ್ಣು, ಕರಬೂಜ ಹಣ್ಣು ಇವುಗಳನ್ನು ಹೇರಳವಾಗಿ ನಮ್ಮ ದಿನನಿತ್ಯದ ಆಹಾರದಲ್ಲಿ ಬಳಕೆ ಮಾಡುವುದರಿಂದ ನಮ್ಮ ದೇಹದ ಉಷ್ಣತೆಯು ನಿಯಂತ್ರಣದಲ್ಲಿ ಇರುತ್ತದೆ.

ಇದನ್ನೂ ಓದಿರಿ: ಕೊತ್ತಂಬರಿ ಸೊಪ್ಪಿನ ರಸವನ್ನು ಸೇವಿಸುವುದರಿಂದ ಏನೇಲ್ಲಾ ಪ್ರಯೋಜನಗಳಿವೆ ಗೊತ್ತೇ..?

ಸ್ವಲ್ಪ ಬಾರ್ಲಿ ಅಕ್ಕಿಯನ್ನು ತೆಗೆದುಕೊಂಡು ನೀರಿನಲ್ಲಿ ಹಾಕಿ ಅನ್ನವಾಗುವ ವರೆಗೆ ಬೇಯಿಸಿ. ಅನ್ನವಾದ ನಂತರ ಆ ನೀರನ್ನು ಸೇವಿಸಿ. ಈ ರೀತಿಯಾಗಿ ದಿನಕ್ಕೆ ಎರಡು ಬಾರಿಯಂತೆ ಕುಡಿಯಿರಿ. ಸಿಹಿಯ ಅವಶ್ಯಕತೆಯಿದ್ದರೆ ಕೆಂಪು ಕಲ್ಲುಸಕ್ಕರೆಯನ್ನು ಬಳಸಿರಿ.

ದೇಹದ ಉಷ್ಣತೆಯು ನಿಯಂತ್ರಣದಲ್ಲಿ ಇರಲು ನೀರಿನ ಸೇವನೆ ಅತೀ ಮುಖ್ಯವಾಗಿದೆ. ದಿನದಲ್ಲಿ ನಾಲ್ಕರಿಂದ ಐದು ಬಾರಿ ನೀರನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅತಿಯಾದ ದೇಹದ ಉಷ್ಣತೆಯನ್ನು ನಿಯಂತ್ರಿಸಲು ತಿಳಿ ಮಜ್ಜಿಗೆಯನ್ನು ತೆಗೆದುಕೊಂಡು, ಅದಕ್ಕೆ ಸ್ವಲ್ಪ ಲಿಂಬು ಜೀರಿಗೆ ಪೌಡರ್ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಈ ಮಿಶ್ರಿತ ಮಜ್ಜಿಗೆಯನ್ನು ಪ್ರತಿದಿನವೂ ತಯಾರಿಸಿಕೊಂಡು ಕುಡಿಯಿರಿ.

ಲಿಂಬೆ ಹಣ್ಣಿನ ಜ್ಯೂಸ್ ಸೇವನೆಯು ದೇಹದ ಉಷ್ಣತೆಯನ್ನು ನಿಯಂತ್ರಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್-ಸಿ ಅಂಶವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ. ಬೇಸಿಗೆಯಲ್ಲಿ ಇದರ ಸೇವನೆಯಿಂದ ದೇಹವು ತಂಪಾಗಿದ್ದು, ಸುಸ್ತು ಮತ್ತು ನೀರಡಿಕೆಗಳಿಂದ ಹೊರಬರಲು ಸಾಧ್ಯವಾಗುತ್ತದೆ.

ಇದನ್ನೂ ಓದಿರಿ: ತಕ್ಷಣ ದೇಹದ ಉಷ್ಣತೆ ಕಡಿಮೆ ಮಾಡಬಲ್ಲ ನೈಸರ್ಗಿಕ ಆಹಾರಗಳು


ಸಬ್ಜಿ ಬೀಜಗಳು / ಕಾಮಕಸ್ತೂರಿ ಬೀಜಗಳನ್ನು ಎರಡು ಚಮಚಗಷ್ಟನ್ನು ತೆಗೆದುಕೊಂಡು 4 ರಿಂದ 5 ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಬೇಕು. ಚೆನ್ನಾಗಿ ನೆನೆದ ನಂತರ ಸಿಹಿಗಾಗಿ ಕೆಂಪು ಸಕ್ಕರೆ ಬೆರೆಸಿ ಸೇವಿಸುವುದರಿಂದ ಕ್ರಮೇಣ ಉಷ್ಣತೆ ಕಡಿಮೆಯಾಗುತ್ತ ಬರುತ್ತದೆ. ಈ ಮೇಲೆ ತಿಳಿಸಿದ ಯಾವುದಾದರೂ ಕ್ರಮಗಳನ್ನು ಅನುಸರಿಸಿ ಉಷ್ಣತೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದುದು. ಸುಸ್ತು, ತೆಲೆನೋವು, ಮೈ ಕೈ ಗಳಲ್ಲಿ ನೋವು, ಕಾಲುಪಾದ ಮತ್ತು ಕೈ ಗಳಲ್ಲಿ ಅತಿಯಾದ ಉಷ್ಣತೆಯ ಅನುಭವ ಹೀಗೆ ಅನೇಕ ತೊಂದರೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು.

ಬೆಳಗಿನ ಸಮಯದಲ್ಲಿ ತಲೆ, ಕೈ-ಕಾಲುಗಳಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಸ್ನಾನ ಮಾಡುವುದರಿಂದ ದೇಹದ ಉಷ್ಣತೆಯು ನಿಯಂತ್ರಣದಲ್ಲಿ ಇರುತ್ತದೆ. ಈ ರೀತಿಯಾಗಿ ಮಾಡುವುದರಿಂದ ದೇಹಕ್ಕೆ ಉಂಟಾದ ಆಯಾಸ ನಿವಾರಣೆಯಾಗಿ ಉತ್ತಮ ನಿದ್ರೆ ಸಹ ಬರುತ್ತದೆ.

ಇದನ್ನೂ ಓದಿರಿ: ಈ ಸೊಪ್ಪಿನಲ್ಲಿದೆ ಅಸ್ತಮಾ, ಹೊಟ್ಟೆಹುಣ್ಣು ಮುಂತಾದ ಸಮಸ್ಯೆಗಳನ್ನು ನಿವಾರಿಸುವ ಗುಣ..!

LEAVE A REPLY

Please enter your comment!
Please enter your name here