ಸಂಪೂರ್ಣ ಜೋಶಿಮಠ ಮುಳುಗುವ ಸಾಧ್ಯತೆ ಎಚ್ಚರಿಕೆ ನೀಡಿದ ಇಸ್ರೋ !

isros-preliminary-report-satellite-images-shows-entire-joshimath-may-sink

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ರಾಷ್ಟ್ರೀಯ ದೂರಸಂವೇದಿ ಕೇಂದ್ರ ಜೋಶಿಮಠದ ಉಪಗ್ರಹ ಚಿತ್ರಗಳನ್ನು ಮತ್ತು ಭೂ ಕುಸಿತದ ಪ್ರಾಥಮಿಕ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಈ ಚಿತ್ರದ ಮೂಲಕ ಇನ್ನು ಕೆಲವೇ ದಿನಗಳಲ್ಲಿ ಇಡೀ ಜೋಶಿಮಠ ಮುಳುಗುವ ಎಚ್ಚರಿಕೆಯನ್ನು ನೀಡಿದೆ.

ಉಪಗ್ರಹದಿಂದ ಮುಳುಗುತ್ತಿರುವ ಚಿತ್ರವನ್ನು ಸೆರೆಹಿಡಿದು, ಇಸ್ರೋ ಫೋಟೋವನ್ನು ಹಂಚಿಕೊಂಡಿದೆ. ಈ ಚಿತ್ರದಲ್ಲಿ ನರಸಿಂಹ ದೇವಸ್ಥಾನ ಮತ್ತು ಭಾರತೀಯ ಸೇನೆಯ ಹೆಲಿಪ್ಯಾಡ್ ಅಪಾಯದ ಸ್ಥಳ ಎಂದು ಗುರುತಿಸಲಾಗಿದೆ. ಇಸ್ರೋ ಮುಳುಗಡೆಯಾಗುತ್ತಿರುವ ಪ್ರದೇಶಗಳ ಅಧ್ಯಯನ ನಡೆಸಿದ್ದು, ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ.

ಇದನ್ನೂ ಓದಿರಿ: ವಿಶ್ವದ ಅತೀ ಉದ್ದದ ರಿವರ್ ಕ್ರೂಸ್ ‘ಗಂಗಾ ವಿಲಾಸ್‌’ ಗೆ ಪ್ರಧಾನಿ ಮೋದಿ ಚಾಲನೆ

ಅಧ್ಯಯನ ವರದಿಯ ಪ್ರಕಾರ, 2022 ರ ಏಪ್ರಿಲ್ ಮತ್ತು ನವೆಂಬರ್ ನಡುವೆಯೇ  ಭೂಮಿ ಕುಸಿತ ಆರಂಭವಾಗಿತ್ತು. ಈ ಸಮಯದಲ್ಲಿ ಜೋಶಿಮಠವು 8.9 ಸೆಂ.ಮೀ ನಷ್ಟು ಕುಸಿದಿದೆ. 2022 ರ ಡಿಸೇಂಬರ್ ನಿಂದ ಜನವರಿ 8 ರ ವರೆಗೆ 5.4 ಸೆಂ.ಮೀ ನಷ್ಟು ಕುಸಿದಿದೆ. ಅಲ್ಲದೇ ಜೋಷಿಮಠಕ್ಕೆ ಸಂಪರ್ಕ ಕಲ್ಪಿಸುವ ಜೋಶಿಮಠ-ಔಲಿ ರಸ್ತೆ ಸಂಪೂರ್ಣ ನಾಶವಾಗುವ ಎಚ್ಚರಿಕೆಯನ್ನೂ ನೀಡಿದೆ.

ಇಸ್ರೋ ನೀಡಿರುವ ಪ್ರಾಥಮಿಕ ವರದಿಯ ಆಧಾರದ ಮೇಲೆ ಉತ್ತರಾಖಂಡ್ ಸರಕಾರ ಅಪಾಯ ಉಂಟಾಗಬಹುದಾದ ಕ್ಷೇತ್ರದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರ ಗೊಳಿಸಿದೆ. ಅಲ್ಲಿನ ಜನವಸತಿಯನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ.

ಇದನ್ನೂ ಓದಿರಿ: ಮಾಜಿ ಕೇಂದ್ರ ಸಚಿವ ಆರ್ಜೆಡಿ ನಾಯಕ ಶರದ್ ಯಾದವ್ ಇನ್ನಿಲ್ಲ

LEAVE A REPLY

Please enter your comment!
Please enter your name here