ಸಿರಿಯಾ: ದೀಪಾವಳಿಯಂದು ಡೊನಾಲ್ಡ್ ಟ್ರಾಂಪ್ ನೀಡಿದ ಮಾಹಿತಿಯ ಪ್ರಕಾರ ಅಮೇರಿಕಾ ಸೇನೆ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಮುಖ್ಯಸ್ಥ, ಬಯೋತ್ಪಾದಕ ಅಬೂಬಕರ್ ಅಲ್ ಅಗ್ದಾದಿಯನ್ನು ಹೊಡೆದುರುಳಿಸಿದ್ದವು. ತನ್ನನ್ನು ಹೊಡೆಯಲು ಅಮೇರಿಕಾ ಸೇನೆ ಬಂದಿರುವುದನ್ನು ತಿಳಿದು ಬಂಕರ್ ಒಂದರಲ್ಲಿ ಬಚ್ಚಿಟ್ಟುಕೊಳ್ಳಲು ಪ್ರಯತ್ನಿಸಿದರೂ ಸೇನೆಗೆ ತಿಳಿದ ಹಿನ್ನೆಲೆಯಲ್ಲಿ ಬಾಂಬ್ ಸ್ಪೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. ಈ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರವಹಿಸಿದ್ದ ಡೆರಿಂಗ್ ಡಾಗ್ ಡೆಲ್ವಾ ವಿಭಾಗಕ್ಕೆ ಸೇರಿದ ನಾಯಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಈ ಡೆರಿಂಗ್ ಡಾಗ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಟ್ರಂಪ್ ಟ್ವೀಟ್ ಮಾಡಿದ್ದು, ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಇವೆಲ್ಲವುಗಳ ಮಧ್ಯೆ ಸೇನಾ ನಾಯಿಯ ಹೆಸರನ್ನು ಭದ್ರತೆ ಮತ್ತು ಇನ್ನಿತರ ಕಾರಣಗಳಿಂದ ಮುಚ್ಚಿತ್ತಿದೆ.
ಇಂದು ಮತ್ತೊಮ್ಮೆ ಟ್ವೀಟ್ ಮಾಡಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೇನೆಯು ಅಬೂಬಕರ್ ಅಲ್ ಅಗ್ದಾದಿಯ ಉತ್ತರಾಧಿಕಾರಿಯನ್ನು ಮುಗಿಸಿರುವುದಾಗಿ ಹೇಳಿದ್ದಾರೆ. ಆದರೆ ಆ ಉತ್ತರಾಧಿಕಾರಿ ಯಾರು ಮತ್ತು ಹೇಗೆ ಕಾರ್ಯಾಚರಣೆ ನಡೆಯಿತು ಅನ್ನುವ ಕುರಿತು ಇನ್ನೂ ಪೂರ್ಣ ಮಾಹಿತಿಯನ್ನು ನೀಡಿಲ್ಲ.
ಇದನ್ನೂ ಓದಿರಿ: ಕಾಶ್ಮೀರದಲ್ಲಿ 370ನೇ ವಿಧಿಯ ರದ್ಧತಿಯ ಬಳಿಕ ಹಿಂಸಾಚಾರ ಸುದ್ದಿ: ಯುರೋಪಿಯನ್ ನಿಯೋಗ ಬೇಟಿ