ಅಬುದಾಬಿ: ಹಾಲಿ ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಸನ್ ರೈಸರ್ಸ್ ಹೈದರಾಬಾದ್ ನೀಡಿದ 135 ರನ್ನುಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಎರಡು ವಿಕೆಟ್ ಕಳೆದುಕೊಂಡು 139 ರನ್ನುಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ನಾಯಕ ಶಿಖರ್ ಧವನ್ 42 ಮತ್ತು ಶ್ರೇಯಸ್ ಅಯ್ಯರ್ ಅಜೇಯ 47 ರನ್ನುಗಳ ಸಹಾಯದೊಂದಿಗೆ 17.5 ಓವರ್ ಗಳಲ್ಲಿ ಸುಲಭ ಜಯಗಳಿಸುವಲ್ಲಿ ಯಶಸ್ವಿಯಾಯಿತು.
ಇನ್ನುಳಿದಂತೆ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಪೃಥ್ವಿಶಾ 11 ರನ್ ಗಳಿಸಿದರೆ, ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಜೊತೆಸೇರಿ ಅಜೇಯ 35 ರನ್ನುಗಳನ್ನು ಗಳಿಸಿದರು. ಈ ಮೂಲಕ 13 ಎಸೆತಗಳು ಇರುವಾಗಲೇ ಜಯದ ಗುರಿ ತಲುಪಿದರು.