ipl-2021-chennai-super-kings-won-by-6-wickets-against-rcb

ಶಾರ್ಜಾ: ನಿನ್ನೆ ನಡೆದ ಐಪಿಎಲ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಳ್ಳುವ ಮೂಲಕ 156 ರನ್ ಗಳನ್ನು ಕಲೆಹಾಕಿತು. ಆರ್ ಸಿಬಿ ನೀಡಿದ ಸುಲಭ 157 ರನ್ ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡ 18.1 ಓವರ್ ನಲ್ಲಿ ಅಂದರೆ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿ ಜಯಭೇರಿ ಬಾರಿಸಿತು.

ಚೆನ್ನೈ ತಂಡದ ಪರವಾಗಿ ಆಟವಾಡಿದ ರುತುರಾಜ್ ಗಾಯಕ್ವಾಡ್ 38 ರನ್ನುಗಳು, ಡುಪ್ಲೆಸಿಸ್ 31 ರನ್ನುಗಳು, ಮೊಯಿನ್ ಅಲಿ 23 ರನ್ ಮತ್ತು ಅಂಬಾಟಿ ರಾಯುಡು 32 ರನ್ ಗಳಿಸಿ ತಂಡದ ಗೆಲುವಿಗೆ ತಮ್ಮ ಪಾಲು ನೀಡಿದರು. ಅಂತಿಮವಾಗಿ ಸುರೇಶ್ ರೈನಾ (ಅಜೇಯ 17) ಮತ್ತು ನಾಯಕ ಎಂಎಸ್ ಧೋನಿ (ಅಜೇಯ 11 ರನ್) ಗೆಲುವಿನ ಔಪಚಾರಿಕತೆ ಮುಗಿಸಿದರು. ಆರ್ ಸಿಬಿ ಪರ ಹರ್ಷಲ್ ಪಟೇಲ್ 2, ಚಹಲ್ ಮತ್ತು ಮ್ಯಾಕ್ಸ್ ವೆಲ್ ತಲಾ 1 ವಿಕೆಟ್ ಪಡೆದರು.

LEAVE A REPLY

Please enter your comment!
Please enter your name here