ದುಬೈ: ಸೊಮವಾರ ನದೆದ ಐಪಿಎಲ್ ನ ಮುಂಬೈ ಮತ್ತು ಬೆಂಗಳೂರು ಪಂದ್ಯದಲ್ಲಿ ನಡುವಿನ ಸೂಪರ್ ಓವರ್ ನಲ್ಲಿ ಬೆಂಗಳೂರು ಪಂದ್ಯಗೆದ್ದು ಬೀಗಿದೆ. ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ನಡುವೆ ಪಂದ್ಯ ಸೂಪರ್ ಓವರ್ ಮತ್ತು ಸಾಗಿತ್ತು. ಸೂಪರ್ ಓವರ್ ನಲ್ಲಿ ಆರ್ ಸಿಬಿ ಗೆದ್ದುಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 201 ರನ್ಗಳನ್ನು ಗಳಿಸಲು ಶಕ್ತವಾಯಿತು. ತಂಡಕ್ಕೆ ದೇವದತ್ ಪಡಿಕ್ಕಲ್ 54, ಆ್ಯರನ್ ಫಿಂಚ್ 52, ಎಬಿ ಡಿವಿಲಿಯರ್ಸ್ 55, ಶಿವಂ ದುಬೆ 27 ರನ್ನುಗಳ ಕೊಡುಗೆಯನ್ನು ನೀಡಿದರು.
ಈ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಇಶಾನ್ ಕಿಶನ್ 99, ಪೊಲಾರ್ಡ್ 60 ರನ್ನುಗಳ ಸಹಾಯದಿಂದ 201 ರನ್ ಗಳಿಸಿ ಡ್ರಾನಲ್ಲಿ ಪಂದ್ಯ ಮುಗಿಸಿತು. ಇದರಿಂದಾಗಿ ಪಂದ್ಯ ಸೂಪರ್ ಓವರ್ ಕಡೆಗೆ ಸಾಗಿತು.
ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಒಂದು ವಿಕೆಟ್ ಕಳೆದುಕೊಂಡು 7 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ರನ್ ಗಳಿಸಿ ವಿಜಯಮಾಲೆ ತನ್ನದಾಗಿಸಿಕೊಂಡಿತು.