ನವದೆಹಲಿ: ಇಂದು 70ನೇ ಗಣರಾಜ್ಯೋತ್ಸವವನ್ನು ಬಹಳ ಸಂಭ್ರಮದಿಂದ ದೆಹಲಿಯ ರಾಜಪತ್ ಸೇರಿದಂತೆ  ಶಾಲಾ-ಕಾಲೇಜು, ಸರಕಾರಿ ಕಚೇರಿ ಎಲ್ಲೆಡೆಯೂ ಆಚರಿಸಲಾಗುತ್ತಿದೆ. ಅಂತೆಯೇ ಇಂಡೋ-ಟಿಬೇಟಿಯನ್ ಗಡಿಯಲ್ಲಿ ಭಾರತಿಯ ಸೇನೆಯ ಯೋಧರು ಮೈನಸ್ 30 ಡಿಗ್ರಿ ಚಳಿಯ ನಡುವೆಯೂ ಆಚರಿಸಿ ಸಂಭ್ರಮಿಸಿದ್ದಾರೆ.

ವಿಶ್ವದ ಅತ್ಯಂತ ಎತ್ತರದ ಪ್ರದೇಶವಾದ ಲಡಾಖನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಗಣರಾಜ್ಯೋತ್ಸವವನ್ನು ಸಂಭ್ರಮಿಸಿದ ಘಟನೆ ನಡೆದಿದೆ. ಈ ಪ್ರದೇಶವು ಸಮುದ್ರ ಮಟ್ಟದಿಂದ ಸುಮಾರು 1800 ಅಡಿ ಎತ್ತರದ ಇಂಡೋ-ಟಿಬೆಟ್ ಗಡಿ ಪ್ರದೇಶವಾಗಿದೆ. ಇದು ವಿಶ್ವದ ಅತೀ ಎತ್ತರದ ಯುದ್ಧಭೂಮಿ ಎಂದೇ ಖ್ಯಾತಿ ಗಳಿಸಿದ್ದು, ಇಲ್ಲಿ ಮೈನಸ್ 30 ಡಿಗ್ರಿ ತಾಮಮಾನ ಹೊಂದಿದೆ. ಇಷ್ಟೊಂದು ಚಳಿಯನಡುವೆಯೂ ಗಡಿ ಭದ್ರತಾ ಸೇನೆಯ ಯೋಧರು ಧ್ವಜಾರೋಹಣ ಮಾಡುವ ಮೂಲಕ ಗಣರಾಜ್ಯೋತ್ಸವವನ್ನು ಆಚರಿಸಿದ್ದಾರೆ.

Image Copyright : google.com

LEAVE A REPLY

Please enter your comment!
Please enter your name here