ಅಫ್ಘಾನ್ ಸೇನೆ- ತಾಲಿಬಾನ್ ಉಗ್ರರ ಸಂಘರ್ಷದಲ್ಲಿ ಭಾರತದ ಫೋಟೋ ಜರ್ನಲಿಸ್ಟ್​ ಡ್ಯಾನಿಶ್​ ಸಿದ್ಧಿಕಿ ಹತ್ಯೆ

indian-photojournalist-danish-siddiqui-killed-in-afghanistan-kandahar-clashes

ಕಂದಹಾರ್: ಅಫ್ಘಾನಿಸ್ತಾನದಲ್ಲಿ ನಡೆದ ಸಂಘರ್ಷದಲ್ಲಿ ಭಾರತದ ಪ್ರಸಿದ್ಧ ಫೋಟೋ ಜರ್ನಲಿಸ್ಟ್​ ಡ್ಯಾನಿಶ್ ಸಿದ್ಧಿಕಿ ಅವರನ್ನು ಹತ್ಯೆ ಮಾಡಲಾಗಿದೆ. ಅಫ್ಘಾನ್​ನ ಕಂದಹಾರ್ ನಗರದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ವರದಿ ಮಾಡಲು ತೆರಳಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ.

ಡ್ಯಾನಿಶ್ ಸಿದ್ಧಿಕಿ ಸಾವಿಗೆ ಅಫ್ಘಾನಿಸ್ತಾನದ ಭಾರತೀಯ ರಾಯಭಾರಿ ಫರೀದ್ ಮಮುಂಡ್ಜೆ ಸಂತಾಪ ಸೂಚಿಸಿದ್ದಾರೆ. ನನ್ನ ಸ್ನೇಹಿತನಂತಿದ್ದ ಡ್ಯಾನಿಶ್​ ಸಿದ್ಧಿಕಿಯನ್ನು ನಿನ್ನೆ ಹತ್ಯೆ ಮಾಡಲಾಗಿದೆ. ಭಾರತೀಯ ಪತ್ರಕರ್ತನಾಗಿದ್ದ ಈತ ಪುಲಿಟ್ಜೆರ್ ಪ್ರಶಸ್ತಿಯನ್ನು ಪಡೆದಿದ್ದರು. ಅಫ್ಘಾನ್ ಸೇನಾಪಡೆಯ ಜೊತೆಗೆ ವರದಿಗೆ ಹೋಗಿದ್ದಾಗ ತಾಲಿಬಾನ್ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಆತ ಕಬೂಲ್​ಗೆ ತೆರಳುವ 2 ವಾರಗಳಿಗೂ ಮೊದಲು ನಾನು ಆತನನ್ನು ಭೇಟಿಯಾಗಿದ್ದೆ. ಆತನ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿರಿ: ಸ್ವಾತಂತ್ರ್ಯ ಬಂದು 74 ವರ್ಷಗಳ ಬಳಿಕ ಕೊನೆಗೂ ವಿದ್ಯುತ್ ಸಂಪರ್ಕ ಪಡೆದ ಕಾಶ್ಮೀರದ ಹಳ್ಳಿ

LEAVE A REPLY

Please enter your comment!
Please enter your name here