ಮಿಚಿಗನ್ ಸಂಸತ್ ಗೆ ಶೇ.93ರಷ್ಟು ಮತ ಪಡೆದು ಆಯ್ಕೆಯಾದ ಬೆಳಗಾವಿ ಮೂಲದ ಉದ್ಯಮಿ ಶ್ರೀ ಥನೇದಾರ್

indian-origin-millionaire-thanedar-elected-to-michigan-state-legislature-in-us

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮಿಚಿಗನ್ ಕ್ಷೇತ್ರದಿಂದ ಬೆಳಗಾವಿ ಮೂಲದ ವಿಜ್ಞಾನಿ ಹಾಗೂ ಉದ್ಯಮಿ ಶ್ರೀ ಥಾಣೆದಾರ್ ಆಯ್ಕೆಯಾಗಿಯಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಮಿಲಿಯನೇರ್ ಆಗಿರುವ 65 ವರ್ಷದ ಥಾಣೆದಾರ್ ಅವರು ಮಿಚಿಗನ್‌ನ 3 ನೇ ಜಿಲ್ಲೆಯಿಂದ ಶೇ.93 ರಷ್ಟು ಮತಗಳನ್ನು ಪಡೆದು ಸಂಸತ್ ಗೆ ಆಯ್ಕೆಯಾಗಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆಯವರಾಗಿರುವ ಥಾಣೆದಾರ್ ಅವರು ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಾಂಬೆ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದರು. ನಂತರ ಉನ್ನತ ವ್ಯಾಸಂಗಕ್ಕಾಗಿ 1979 ರಲ್ಲಿ ಅಮೆರಿಕಕ್ಕೆ ತೆರಳಿ ಅಲ್ಲೇ ನೆಲೆ ಕಂಡುಕೊಂಡಿದ್ದರು.

ಸಾಮಾನ್ಯ ಕುಟುಂಬದಲ್ಲಿ ಜನಿಸಿ, ತಮ್ಮ ಸ್ವಪ್ರತಿಭೆಯಿಂದ ಮೇಲೆ ಬಂದು ಅಮೆರಿಕದಲ್ಲಿ ಶ್ರೀಮಂತ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಕೊರೊನಾ ಸಾಂಕ್ರಾಮಿಕಕ್ಕೂ ಮುನ್ನವೇ ಅವರು ಪ್ರಚಾರವನ್ನು ಆರಂಭಿಸಿದ್ದರು. 2018 ರ ಮಿಚಿಗನ್ ಗವರ್ನರ್ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಅಭ್ಯರ್ಥಿಯಾಗಿದ್ದ ಥಾಣೆದಾರ್ 10 ಮಿಲಿಯನ್ ಡಾಲರ್ ಹಣವನ್ನು ಖರ್ಚು ಮಾಡಿದ್ದರು. ಆದರೆ ಚುನಾವಣೆಯಲ್ಲಿ ಅವರು 3ನೇ ಸ್ಥಾನವನ್ನು ಪಡೆದುಕೊಂಡಿದ್ದರು.

ರೋಗ, ನೀರಿನ ಸಮಸ್ಯೆ, ಸ್ವತ್ತು ಮರುಸ್ವಾಧೀನ, ಅಪರಾಧ ಮತ್ತು ನಿರುದ್ಯೋಗ ಸೇರಿದಂತೆ ತಮ್ಮ ಜಿಲ್ಲೆಯನ್ನು ಬಾಧಿಸುತ್ತಿರುವ ಸವಾಲುಗಳ ಸುದೀರ್ಘ ಪಟ್ಟಿಯನ್ನು ನಿಭಾಯಿಸುವುದು ತಮ್ಮ ಮೊದಲ ಆಧ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.

ಸದ್ಯ ತಮ್ಮ ಕ್ಷೇತ್ರದಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ನಂಬಿಕೆಗೆ ಅರ್ಹರಾದ ಯಾವುದೇ ವ್ಯಕ್ತಿಗಳು ಇಲ್ಲ, ಅದರಿಂದಾಗಿ ಇಲ್ಲಿನ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ನಾನು ಬಡತನದ ನೋವನ್ನು ಅರ್ಥಮಾಡಿಕೊಂಡಿದ್ದೇನೆ. ಸಾದ್ಯವಾದಷ್ಟು ಜನರ ಸೇವೆ ಮಾಡುತ್ತೇನೆ ಎಂದು ಥಾಣೆದಾರ್ ಹೇಳಿದ್ದಾರೆ.

ತಮ್ಮ 18 ನೇ ವಯಸ್ಸಿನಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದ ಇವರು ಜೊತೆಯಲ್ಲಿಯೇ ಎಂ ಎಸ್ಸಿ ಪದವಿಯನ್ನು ಪಡೆದುಕೊಳ್ಳುವ ಯೋಚನೆಯನ್ನು ಮಾಡಿದ್ದರು. ಆದರೆ ಧಾರವಾಡದ ಪ್ರಾಂಶುಪಾಲರ ಅನುಮತಿ ದೊರೆಯಲಿಲ್ಲ. ಇದನ್ನು ಪ್ರಶ್ನಿಸಿ ಕುಲಪತಿಗಳ ಬಳಿಗೆ ತೆರಳಿ ಅನುಮತಿಯನ್ನು ಪಡೆದುಕೊಂಡಿದ್ದರು. ಇದೆ ಸಮಯದಲ್ಲಿ ಮತ್ತೊಂದು ಅಡ್ಡಿ ಅವರನ್ನು ಕಾಡಿತ್ತು, ಬ್ಯಾಂಕಿನಲ್ಲಿ ಪರೀಕ್ಷೆಗಾಗಿ 15 ದಿನಗಳ ಕಾಲ ರಜೆ ನೀಡಲು ಸಿದ್ಧರಿರಲಿಲ್ಲ. ಬ್ಯಾಂಕಿನ ನಿರಾಕರಣೆಯನ್ನು ಮೀರಿ ಪರೀಕ್ಷೆಗೆ ಹಾಜರಾದ ಇವರನ್ನು ಗೈರು ಹಾಜರಿ ಎಂದು ಪರಿಗಳಿಸಿ ಕೆಲಸದಿಂದ ತೆಗೆದುಹಾಕಿದ್ದರು.

LEAVE A REPLY

Please enter your comment!
Please enter your name here