ಮೊದಲ ಬಾರಿಗೆ ಯುಎಸ್‌ ಸಿವಿಲ್ ಕೋರ್ಟ್‌ ನ್ಯಾಯಾಧೀಶೆಯಾಗಿ ಭಾರತೀಯ ಮೂಲದ ಸಿಖ್ ಮಹಿಳೆ ಆಯ್ಕೆ

indian-origin-manpreet-monica-singh-becomes-first-female-sikh-judge-in-us

ಹ್ಯೂಸ್ಟನ್: ಯುಎಸ್‌ನ ಮೊದಲ ಮಹಿಳಾ ಸಿಖ್ ನ್ಯಾಯಾಧೀಶೆಯಾಗಿ ಭಾರತೀಯ ಮೂಲದ ಮನ್‌ಪ್ರೀತ್ ಮೋನಿಕಾ ಸಿಂಗ್ ಹ್ಯಾರಿಸ್ ಕೌಂಟಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮನ್‌ಪ್ರೀತ್ ಅವರ ತಂದೆ 1970 ರಲ್ಲಿ ಯುಎಸ್‌ಗೆ ವಲಸೆ ಬಂದು ಅಲ್ಲಿಯೇ ನೆಲೆಸಿದರು. ಆ ನಂತರದಲ್ಲಿ ಮನ್‌ಪ್ರೀತ್ ಇಲ್ಲಿಯೇ ಹುಟ್ಟಿ ಬೆಳೆದರು. ತಮ್ಮ ಶಿಕ್ಷಣ ವನ್ನು ಮುಗಿಸಿ, ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಬೆಳ್ಳೈರ್‌ನಲ್ಲಿ ವಾಸಿಸುತ್ತಿದ್ದಾರೆ.

20 ವರ್ಷಗಳಿಂದ ಮನ್‌ಪ್ರೀತ್ ವಿಚಾರಣಾ ವಕೀಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದಲ್ಲದೇ ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ನಾಗರಿಕ ಹಕ್ಕುಗಳ ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಇದೀಗ ಟೆಕ್ಸಾಸ್‌ನ ಕಾನೂನು ಸಂಖ್ಯೆ 4 ರಲ್ಲಿ ಹ್ಯಾರಿಸ್ ಕೌಂಟಿ ಸಿವಿಲ್ ಕೋರ್ಟ್‌ನ ನ್ಯಾಯಾಧೀಶರಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಯುಎಸ್‌ ನಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಸಿವಿಲ್ ಕೋರ್ಟ್‌ ನ್ಯಾಯಾಧೀಶೆಯಾಗಿ ಆಯ್ಕೆಯಾಗಿ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿರಿ: ಗೋಕರ್ಣ ಕಡಲ ತೀರದಲ್ಲಿ ಸಿದ್ಧೇಶ್ವರ ಶ್ರೀ ಚೀತಾಭಸ್ಮ ವಿಸರ್ಜನೆ

LEAVE A REPLY

Please enter your comment!
Please enter your name here