ಪಾಕಿಸ್ತಾನ ಮೊದಲಿನಿಂದಲೂ ನೇರವಾಗಿ ಯುದ್ಧಮಾಡಿ ಗೆಲ್ಲಲು ಸಾಧ್ಯವಿಲ್ಲ ಎಂದು ಸದಾ ಹಿಂದಿನಿಂದ ಚೂರಿಹಾಕಲು ಪ್ರಯತ್ನದಲ್ಲಿಯೇ ಇರುತ್ತದೆ. ಹಲವಾರು ವರ್ಷಗಳಿಂದ ಯಾವುದೋ ರೀತಿಯಿಂದ ಕಾಶ್ಮೀರಿ ಪ್ರಜೆಗಳನ್ನು ಭಾರತೀಯ ಸೇನೆಯ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನವನ್ನು ಮಾಡುತ್ತಿತ್ತು. ಅಲ್ಲದೇ ಪ್ರತ್ಯೇಕತೆಯ ಕೂಗನ್ನು ಎತ್ತುವಂತೆ ಅಲ್ಲಿನ ಯುವಕರನ್ನು ಸಂಘಟಿಸಲಾಗುತ್ತಿತ್ತು. ಇದೆಲ್ಲವೂ 370 ನೇ ವಿಧಿಯ ರದ್ದತಿಯ ನಂತರ ನಿಧಾನವಾಗಿ ದೂರವಾಯಿತು.
ಸದಾ ಒಂದಿಲ್ಲೊಂದು ಕುತಂತ್ರದಲ್ಲಿಯೇ ಇರುವ ಪಾಕಿಸ್ತಾನ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನದ್ದಲ್ಲ. ಈ ನಡುವೆ ಬಂದ ಕೊರೊನಾ ಸಂಕಷ್ಟವನ್ನು ದೂರಮಾಡಿಕೊಳ್ಳುವುದು ಹೇಗೆ ಎಂದು ಇಡಿ ಪ್ರಪಂಚ ತಲೆಕೆಡಿಸಿಕೊಂಡು ಕುಂತಿದ್ದರೆ, ಪಾಕಿಸ್ತಾನಕ್ಕೆ ಮಾತ್ರ ಭಾರತದಲ್ಲಿ ಉಗ್ರರನ್ನು ಹೇಗೆ ನುಸುಲಿಸುವುದು ಎಂಬ ಚಿಂತೆ. ಕೊರೊನಾ ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ತನ್ನ ತರಬೇತಿ ಶಿಬಿರಗಳಲ್ಲಿ ಇರುವ ಭಯೋತ್ಪಾದಕರನ್ನು ಒಟ್ಟುಗೂಡಿಸಿ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಭಾರತದ ಒಳಗೆ ನುಸುಲಿಸಲು ಅಲ್ಲಿನ ಸರಕಾರ, ಸೇನೆ, ವಿವಧ ಸಂಘಟನೆಗಳು ತಯಾರಿಯನ್ನು ನಡೆಸಿದ್ದವು.
ಭಾರತದ ಗಡಿಯನ್ನು ಪ್ರವೇಶಿಸಲು ಹಲವಾರು ದಿನಗಳಿಂದ ಪ್ರಯತ್ನಗಳನ್ನು ನಡೆಸುತ್ತಲೇ ಇರುವ ಭಯೋತ್ಪಾದಕರು ಹಲವಾರು ದಿನಗಳಿಂದ ಅಪ್ರಚೋಧಿತ ಗುಂಡಿನ ದಾಳಿ, ಕೆಲವೆಡೆ ಬಾಂಬ್ ದಾಳಿಗಳನ್ನು ಮಾಡುತ್ತಿದ್ದಾರೆ. ಇದನ್ನು ಅರಿತ ಭಾರತೀಯ ಸೇನೆಯು ಸರಿಯಾಗಿಯೇ ಉತ್ತರವನ್ನು ನೀಡುತ್ತಿದೆ. ಕಳೆದ ಒಂದೆರಡು ದಿನಗಳ ಹಿಂದೆ ಶ್ರೀನಗರದ ನವಕಾಡಲ್ ನಲ್ಲಿ ಆತ್ಮಾಹುತಿ ದಾಳಿ ನಡೆದಿತ್ತು. ಹೀಗೆ ತನ್ನ ಪ್ರಯತ್ನವನ್ನು ನಡೆಸುತ್ತಲೇ ಇದೆ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ಸಂಘಟನೆಗಳು.
ಸದ್ಯ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಲವಾರು ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸುತ್ತಿದ್ದು, ಭಾರತೀಯ ಯೋಧರಿಂದ ಸರಿಯಾಗಿಯೇ ಪ್ರತಿಫಲ ಪಡೆಯುತ್ತಿದ್ದಾರೆ. ಯೋಧರ ಗುಂಡಿಗೆ ಹಲವಾರು ಭಯೋತ್ಪಾದಕರು ಬಲಿಯಾಗುತ್ತಿದ್ದಾರೆ. ದೇಶದ ಗಡಿಯನ್ನು ಪ್ರವೇಶಿಸಲು ಪ್ರಯತ್ನಿಸುವ ಪ್ರತಿಯೊಬ್ಬ ಉಗ್ರರನ್ನು ಸದೆಬಡಿಯುವ ಕಾರ್ಯದಲ್ಲಿ ಸೇನೆಯು ಸನ್ನದ್ದವಾಗಿದೆ. ಹಲವಾರು ದಿನಗಳಿಂದ ಶ್ರೀನಗರ ಸೇರಿದಂತೆ ಗಡಿಭಾಗದಲ್ಲಿ ಉಗ್ರರ ಧಮನಕಾರ್ಯವು ನಡೆಯುತ್ತಲೇ ಇರುವುದನ್ನು ನಾವಿಲ್ಲಿ ಗಮನಿಸಬಹುದು.
ಸದ್ಯ ಭಾರತೀಯ ಯೋಧರ ನಿರಂತರ ದಾಳಿಗಳಿಂದ ಕಂಗೆಟ್ಟ ಉಗ್ರರು ಗಡಿ ಪ್ರದೇಶಗಳಿಂದ ಪಿಒಕೆ ಭಾಗಕ್ಕೆ ಓಡಿಹೊಗಿರುವ ವಿಷಯಗಳು ಕೇಳಿಬರುತ್ತಿವೆ. ಅಲ್ಲದೇ ಉಗ್ರರ ಧಮನ ಕಾರ್ಯಕ್ಕಾಗಿ ಪಿಒಕೆ ಪ್ರವೇಶಿಸಿ ಹೊಡೆದುಹಾಕಲು ಸೇನೆಯು ಸರ್ವಸನ್ನದ್ಧವಾಗಿ ನಿಂತಿದೆ.