indian-air-force-releases-promo-video-featuring-balakot-airstrike
Image Credit: google.com

ಬಾಲಾಕೋಟ್ ನಲ್ಲಿ ವೈಮಾನಿಕ ದಾಳಿ ನಡೆಸಿದ ಕೆಲವು ಚಿತ್ರಗಳನ್ನು ಒಳಗೊಂಡ ಪ್ರೊಮೋ ವಿಡಿಯೋವನ್ನು ಭಾರತೀಯ ವಾಯುಸೇನೆ ಬಿಡುಗಡೆ ಮಾಡಿದೆ. ವಾಯುಸೇನೆಯ ಐಎಎಫ್ ಮುಖ್ಯಸ್ಥ ಆರ್ ಕೆ ಎಸ್ ಭದೌರಿಯಾ ಸುದ್ದಿಗೋಷ್ಠಿ ನಡೆಸಿ ಈ ವಿಡಿಯೋ ಬಿಡುಗಡೆ ಮಾಡಿದರು.

ಬಾಲಾಕೋಟ್ ಏರ್ ಸ್ಟ್ರೈಕ್ ನಡೆದ ಸಮಯದಲ್ಲಿ ಪಾಕಿಸ್ತಾನ ಸೇರಿದಂತೆ ನಮ್ಮ ದೇಶದ ಕೆಲವರು ಸಾಕ್ಷಿಯನ್ನು ಕೇಳುತ್ತಿದ್ದರು. ಈ ಸಂಭಂಧ ತೀವ್ರ ಆಕ್ರೋಶವು ವ್ಯಕ್ತವಾಗಿತ್ತು.. ಸಾಮಾಜಿಕ ತಾಣಗಳಲ್ಲಿ ಸಾಕ್ಷಿ ಕೇಳುವವರನ್ನು ಇನ್ನು ಮುಂದೆ ಫೋಟೋ ಗ್ರಾಪರ್ ಆಗಿ ತೆಗೆದುಕೊಂಡು ಹೋಗಿ ಎನ್ನುವ ಹೇಳಿಕೆಗಳು ಕೇಳಿ ಬಂದಿದ್ದವು. ಸಾಕ್ಷಿ ಕೇಳುವವರಿಗೆ ತಲೆ ಮೇಲೆ ಹೊಡೆಯುವಂತೆ ಈಗ ವಾಯುಸೇನೆ ತನ್ನಲ್ಲಿರುವ ವಿಡಿಯೋವನ್ನು ಫೋಮೋ ರೀತಿಯಲ್ಲಿ ಬಿಡುಗಡೆ ಮಾಡಿದೆ.

ಈ ವಿಡಿಯೋದಲ್ಲಿ ಬಾಲಾಕೋಟ್ ನಲ್ಲಿ ವೈಮಾನಿಕ ದಾಳಿಯ ಸಮಯದಲ್ಲಿ ವಿಮಾನಗಳೆಡೆಗೆ ಓಡುವ ಮತ್ತು ವಿಮಾನಗಳನ್ನು ಹಾರಿಸುವ ಚಿತ್ರಣಗಳು ಕಂಡುಬರುತ್ತವೆ. ರೇಡಾರ್ ಮೂಲಕ ಟಾರ್ಗೆಟ್ ಮಾಡಿ ಮಿಸೈಲ್ ಬೀಳಿಸುವ ಮತ್ತು ಪಾಕಿಸ್ತಾನದ ವಿಮಾನವನ್ನು ಬೆನ್ನತ್ತಿ ಓಡಿಸುವ ದೃಷ್ಯಗಳು ನಮಗೆ ಕಂಡುಬರುತ್ತವೆ.

ಇದನ್ನೂ ಓದಿರಿ: ಅಂತೂ ಕೇಂದ್ರದಿಂದ ಬಂತು ಮಧ್ಯಂತರ ನೆರೆ ಪರಿಹಾರ ನಿಧಿ

indian-air-force-releases-promo-video-featuring-balakot-airstrike
Image Credit: google.com

ಏನೇ ಆದರೂ ಈ ದೇಶದಲ್ಲಿ ಹುಟ್ಟಿದ ನಾವೆಲ್ಲರೂ ನಮ್ಮ ದೇಶದ ಸೈನಿಕರ ಕುರಿತು ಅನುಮಾನವನ್ನು ವ್ಯಕ್ತಪಡಿಸದೆ ಅವರಲ್ಲಿ ವಿಶ್ವಾಸವಿಡುವುದು ಮುಖ್ಯವಾಗಿದೆ. ನಮ್ಮ ಮಕ್ಕಳನ್ನೇ ನಾವು ನಂಬದೆ ಹೋದರೆ ಇನ್ನು ಉಳಿಗಾಳವೆಲ್ಲಿ..? ಇನ್ನಾದರೂ ಸೇನೆಯನ್ನು ಟೀಕಿಸುವ ಮುನ್ನ ಎಚ್ಚರವಿರಲಿ ಎಂದು ಹೇಳುತ್ತ ಸೇನೆ ಬಿಡುಗಡೆ ಮಾಡಿರುವ ಚಿಕ್ಕ ಪ್ರೋಮೊವನ್ನು ನಿಮ್ಮ ಮುಂದಿಡುತ್ತಿದ್ದೇವೆ..

ಇದನ್ನೂ ಓದಿರಿ: ಟ್ರಂಪ್ ಹಾಗೂ ಮೋದಿ ಜೊತೆಯಲ್ಲಿ ಸೆಲ್ಪಿ ತೆಗೆಸಿಕೊಂಡ ಆ ಅದೃಷ್ಟಶಾಲಿ ಬಾಲಕ ಯಾರು?

LEAVE A REPLY

Please enter your comment!
Please enter your name here