ಜಿಂಬಾಬ್ವೆ ವಿರುದ್ಧ 71 ರನ್​ ಭರ್ಜರಿ ಗೆಲುವು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಭಾರತ

ಜಿಂಬಾಬ್ವೆ ವಿರುದ್ಧ 71 ರನ್​ ಭರ್ಜರಿ ಗೆಲುವು | india-won-by-71-runs

ಮೆಲ್ಬೋರ್ನ್​: ಟಿ-20 ವಿಶ್ವಕಪ್ ನ ಅಂತಿಮ ಸೂಪರ್​-12 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧದ ಭಾರತ 71 ರನ್​ ಭರ್ಜರಿ ಗೆಲುವು ಸಾಧಿಸಿದೆ. ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದ್ದ ಭಾರತಕ್ಕೆ ಈ ಗೆಲುವು ಬಿ ಗ್ರೂಪ್ ನಲ್ಲಿ ಅಗ್ರಸ್ಥಾನಕ್ಕೇರಿದೆ.

ಮೆಲ್ಬೋರ್ನ್ ಅಂಗಳದಲ್ಲಿ ಭಾನುವಾರ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು, ಮೊದಲು ಬ್ಯಾಟಿಂಗ್ ಮಾಡಲು ಭಾರತ ನಿರ್ಧರಿಸಿತು. ಅದರಂತೆ ಕೆ ಎಲ್ ರಾಹುಲ್ (51) ಮತ್ತು ಸೂರ್ಯಕುಮಾರ್ (61) ಗಳಿಸಿದರು. ಈ ಮೂಲಕ ಭಾರತ 5 ವಿಕೆಟ್ ನಷ್ಟಕ್ಕೆ 186 ರನ್ನುಗಳನ್ನು ಕಲೆಹಾಕಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ, 17.2 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 115 ರನ್ನು ಗಳಿಸಿ ಶರಣಾಯಿತು.

ಭಾರತ ಪರವಾಗಿ ಬೌಲಿಂಗ್ ಮಾಡಿದ ಆರ್ ಅಶ್ವಿನ್ ಮೂರು ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು. ಇನ್ನು ಮೊಹಮದ್ ಶಮಿ ಮತ್ತು ಪಾಂಡ್ಯ ತಲಾ ಎರಡು ವಿಕೆಟ್ ಪಡೆದುಕೊಂಡರು. ಇನ್ನು ಭುವನೇಶ್ವರ್ ಕುಮಾರ್ ಮೊದಲ ಓವರ್ ನಲ್ಲಿಯೇ ಮೇಡನ್ ಸಹಿತ 1 ವಿಕೆಟ್ ತೆಗೆದುಕೊಂಡು ಜಿಂಬಾಬ್ವೆ ಕುಸಿತಕ್ಕೆ ಕಾರಣರಾದರು. ನಂತರ ಎರಡನೆಯ ಓವರ್ ನಲ್ಲಿ ಅರ್ಶ್​ದೀಪ್​ ಸಿಂಗ್ ಸಹ 1 ವಿಕೆಟ್ ಕಿತ್ತರು. ಇನ್ನು ಅಕ್ಸರ್ ಪಟೇಲ್ 1 ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು.

ಭಾರತದ ಬೃಹತ್ ಮೊತ್ತ ಬೆನ್ನಟ್ಟಿದ ಜಿಂಬಾಬ್ವೆ ತಂಡದ ಆರಂಭಿಕ ಬ್ಯಾಟರ್ ಗಳ್ಯಾರು ಹೇಳಿಕೊಳ್ಳುವ ಆಟವಾಡಲಿಲ್ಲ. ಅಲ್ಲದೇ ತಂಡ ಕೇವಲ 50 ರನ್ನುಗಳಿಗೆ ಸೋಲೊಪ್ಪಿಕೊಳ್ಳುವ ಹಂತಕ್ಕೆ ತಲುಪಿತ್ತು. ಅದೇ ಸಮಯದಲ್ಲಿ ಸಿಕಂದರ್​ ರಾಜಾ ಮತ್ತು ರಿಯಾನ್ ಬರ್ಲ್ ಜೊತೆಯಾಗಿ 69 ರನ್ನುಗಳನ್ನು ಕಲೆಹಾಕಲು ಶಕ್ತರಾದರು. ಇನ್ನುಳಿದಂತೆ ಜಿಂಬಾಬ್ವೆ ಪರವಾಗಿ ಯಾರೂ ಹೇಳಿಕೊಳ್ಳುವ ಆಟವನ್ನು ಆಡಲಿಲ್ಲ.

ಇದನ್ನೂ ಓದಿರಿ: ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಆಲಿಯಾ ಭಟ್ !

LEAVE A REPLY

Please enter your comment!
Please enter your name here