ಮೆಲ್ಬರ್ನ್: ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯರ 113 ರನ್ನುಗಳ ಜೊತೆಯಾಟದೊಂದಿಗೆ ಪಾಕ್ ಸೋಲಿಸಿ ಟಿ -20 ವರ್ಡ್ ಕಪ್ ಪಂದ್ಯದಲ್ಲಿ ಶುಭಾರಂಭ ಮಾಡಿದೆ.
ಪಾಕಿಸ್ತಾನ ನೀಡಿ 160 ರನ್ನುಗಳ ಬೆನ್ನತ್ತಿದ ಭಾರತೀಯ ತಂಡ ಆರಂಭದಲ್ಲಿಯೇ ಆಘಾತವನ್ನು ಎದುರಿಸಬೇಕಾಯಿತು. ವಿರಾಟ್ ಕೊಹ್ಲಿ ಮತ್ತು ಪಾಂಡ್ಯರ 113 (78 ಎಸೆತ) ರನ್ನುಗಳ ಜೊತೆಯಾಟದೊಂದಿಗೆ, ಕೊನೆಯ ಓವರ್ ನಲ್ಲಿ ಆರ್ ಅಶ್ವಿನ್ ಸಿಡಿಸಿದ ಬೌಂಡರಿ ಭಾರತದ ಗೆಲುವಿಗೆ ಕಾರಣವಾಯಿತು.
ಆರಂಭಿಕರಾಗಿ ಬ್ಯಾಟಿಂಗ್ ಗೆ ಇಳಿದ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಜೋಡಿ ತಲಾ 4 ರನ್ನುಗಳನ್ನು ಬಾರಿಸುವಲ್ಲಿ ಸುಸ್ತಾಗಿ ಫೆವಿಲಿಯನ್ ಸೇರಿಕೊಂಡರು. ಆ ಬಳಿಕ ಬಂದ ಸೂರ್ಯಕುಮಾರ್ ಯಾದವ್ ಕೇವಲ 15 ರನ್ (10 ಎಸೆತ, 2 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ಅಕ್ಷರ್ ಪಟೇಲ್ ಸಹ 2 ರನ್ ಸಿಡಿಸಿ ನಿರಾಸೆ ಮೂಡಿಸಿದರು. ಈ ವೇಳೆ ಕೇವಲ 31 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತು.
ಆ ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಜವಾಬ್ಧಾರಿಯುತ ಆಟವಾಡಿದರು. ಪಾಂಡ್ಯ 40 ರನ್ (37 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿ ಕೊನೆಯ ಓವರ್‌ನಲ್ಲಿ ಫೆವಿಲಿಯನ್ ಸೇರಿಕೊಂಡರು. ಆದರೆ ಕೊಹ್ಲಿ ಗೆಲುವಿಗಾಗಿ ಟೊಂಕ ಕಟ್ಟಿ ನಿಂತು ಅಜೇಯ 82 ರನ್ (53 ಎಸೆತ, 6 ಬೌಂಡರಿ, 4 ಸಿಕ್ಸ್) ಬಾರಿಸಿ ಗೆಲುವಿನ ರೂವಾರಿಯಾದರು.
ಕೊನೆಯ 12 ಎಸೆತಗಳಲ್ಲಿ ಭಾರತ ಗೆಲುವಿಗೆ 31 ರನ್ ಬೇಕಾಗಿತ್ತು. 19ನೇ ಓವರ್‌ನಲ್ಲಿ ಒಟ್ಟು 16 ರನ್ ಗಳಿಸುವಲ್ಲಿ ಭಾರತ ತಂಡ ಶಕ್ತವಾಯಿತು. ಕೊನೆಯ 6 ಎಸೆತಗಳಲ್ಲಿ ಭಾರತ ಗೆಲುವಿಗೆ 16 ರನ್ ಅವಶ್ಯವಿತ್ತು. ಈ ವೇಳೆ ವಿಕೆಟ್‍ಗಳ ಪತನನವು ಆತಂಕಕ್ಕೆ ಕಾರಣವಾಯಿತು. ನಂತರ ಬಂದ ಬೌಂಡರಿ, ಸಿಕ್ಸ್ ಪಂದ್ಯದ ರೋಚಕತೆಯನ್ನು ಇನ್ನಷ್ಟು ಹೆಚ್ಚಿಸಿತು. ಭಾತರದ ಗೆಲುವಿಗೆ ಕೊನೆಯ ಎಸೆತದಲ್ಲಿ ಅಶ್ವಿನ್ ಹೊಡೆದ ಬೌಂಡರಿ ಸಹಕಾರಿಯಾಯಿತು. ಈ ಮೂಲಕ ಭಾರತ 4 ವಿಕೆಟ್ ಅಂತರದಿಂದ ಜಯಗಳಿಸಿ ಸಂಭ್ರಮಿಸಿತು.
ಇದನ್ನು ಓದಿರಿ: IND vs PAK: ಭಾರತೀಯ ಬೌಲರ್ ಗಳ ಅಬ್ಬರದ ನಡುವೆಯೂ 160 ರನ್ ಗೆಲುವಿನ ಸವಾಲು ಒಡ್ಡಿದ ಪಾಕಿಸ್ತಾನ