ವೀರ ಯೋಧರ ಬಲಿಧಾನದ ಪ್ರತಿಕಾರವಾಗಿ ಭಾರತೀಯ ಸೇನೆಯು ತನ್ನ ವಾಯು ಸಾಮರ್ಥ್ಯವನ್ನು ಬಳಸಿಕೊಂಡು ಉಗ್ರರ ಸ್ವರ್ಗವಾಗಿದ್ದ ಪಾಕಿಸ್ತಾನದ ಒಳಗೆ ನುಗ್ಗಿ  ಪಾಪಿಗಳನ್ನು ಬಲಿಪಡೆದ ಸಾಹಸಮಯ ಘಟನೆ ಇಂದು ನಡೆದಿದೆ. ಇಂದಿನ ಈ ಏರ್ ಸ್ಟ್ರೈಕ್ ಭಾರತೀಯರನ್ನು ತುಸು ಸಂತೋಷಗೊಳಿಸಿದ್ದಂತು ಸುಳ್ಳಲ್ಲ. ಈ ಮೈ ನಡುಗಿಸುವ 21 ನಿಮಿಷಗಳ ಇಂಚಿಂಚು ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಸಂತೋಷ ಪಡುತ್ತಿದ್ದೇನೆ.

ಫೆ.15 ರಿಂದ ಈ ಕಾರ್ಯಕ್ಕಾಗಿ ಸೇನೆಯಿಂದ ಇಂಚಿಂಚು ಮಾಹಿತಿ ಕಲೆಹಾಕಿ, ಪ್ರತಿದಾಳಿ ನಡೆಸುವ ಕುರಿತು ತಯಾರಿಯನ್ನು ಮಾಡಲಾಗಿತ್ತು. ಅಲ್ಲದೇ ನಿನ್ನೆ ರಾತ್ರಿ 9.00 ಗಂಟೆಯ ಸುಮಾರಿಗೆ ಪ್ರಧಾನಿ ಮೋದಿಯವರಿಂದ ದಾಳಿ ನಡೆಸುವಂತೆ ವಾಯುಸೇನೆಗೆ ಆದೇಶ ದೊರೆತಿತ್ತು. ಈ ನಂತರ ಸೇನೆಯು ತನ್ನೆಲ್ಲಾ ತಯಾರಿಯನ್ನು ಮಾಡಿಕೊಳ್ಳಲು ಪ್ರಾರಂಭಿಸಿದ್ದವು. ರಾತ್ರಿ 10.00 ಗಂಟೆಯ ಸುಮಾರಿಗೆ ಪಂಜಾಬ್ ನ ಅಂಬಾಲಾ ವಾಯುನೆಲೆಯಲ್ಲಿ ದಾಳಿಗೆ ಅಗತ್ಯವಿರುವ ಮಿರಾಜ್-2000 ವಿಮಾನಗಳನ್ನು ಶಸ್ತ್ರಾಸ್ತ್ರ ಸಜ್ಜಿತವಾಗಿ ಇರಿಸಿಕೊಳ್ಳಲಾಯಿತು. ಇದಾದ ನಂತರದಲ್ಲಿ ಅಗತ್ಯವಿರುವ ಸಂಪೂರ್ಣ ಪ್ಲಾನಿಂಗ್ ನ್ನು  ತಯಾರಿಸಿಟ್ಟುಕೊಳ್ಳಲಾಯಿತು.

ಸಂಪೂರ್ಣ ಸಿದ್ಧತೆಯೊಂದಿಗೆ 3.30 ರ ಸುಮಾರಿಗೆ ಅಂಬಾಲಾ ವಾಯುನೆಲೆಯಿಂದ ಮಿರಾಜ್-2000 ಯುದ್ಧವಿಮಾನಗಳು ಪಾಕ್ ಆಕ್ರಮಿತ ಕಾಶ್ಮೀರದ ಕಡೆಗೆ ವೇಗವಾಗಿ ತಮ್ಮ ಪ್ರಯಾಣವನ್ನು ಬೆಳೆಸಿದವು. 3.45 ಕ್ಕೆ ಪಾಕಿಸ್ತಾನದ ಅಂತರಾಷ್ಟ್ರೀಯ ಗಾಡಿಯನ್ನು ದಾಟಿ ಉಗ್ರರ ಸ್ವರ್ಗದಂತಿದ್ದ ಬಾಲ್ ಕೊಟ್ ಅರಣ್ಯ ಪ್ರದೇಶದಲ್ಲಿ ಇರುವ ತರಬೇತಿ ಶಿಬಿರದ ಮೇಲೆ ದಾಳಿಯನ್ನು ನಡೆಸಿದವು. ಇದರ ಜೊತೆಗೆ ಮತ್ತೊಂದು ಟೀಮ್ 3.48 ಕ್ಕೆ ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರ್ ಬಾದ್ ಉಗ್ರರ ನೆಲೆಗಳ ಮೇಲೆ ದಾಳಿಯನ್ನು ನಡೆಸಿದವು. 3.58 ಕ್ಕೆ ಚಕೋಟ ಪ್ರದೇಶದ ಉಗ್ರರ ಕ್ಯಾಂಪ್ಮೇಲೆ ಬ್ರಹದಾಕಾರದ ಬಾಂಬ್ ಗಳನ್ನು ಹಾಕಿ ನೆಲೆಸಮಗೊಳಿಸಿತು. ಇಲ್ಲಿಂದ ಹಿಂತಿರುಗುವ ವೇಳೆಗಾಗಲೆ ಪಾಕಿಸ್ತಾನದ F16F16 ಯುದ್ಧ ವಿಮಾನವು ದಾಳಿ ಮಾಡುವ ಪ್ರಯತ್ನವನ್ನು ಮಾಡಿತು. ಇದಕ್ಕೆ ಪ್ರತಿದಾಳಿ ಮಾಡಲಾಯಿತಾದರೂ ಯಶಸ್ವಿಯಾಗದೆ ತಪ್ಪಿಸಿಕೊಂಡು ಓಡಿ ಹೋಯಿತು. ಇದಾದ ಕೆಲವೇ ಸಮಯಗಳಲ್ಲಿ ಭಾರತದ ಗಡಿಭಾಗದಲ್ಲಿ ಮಾಹಿತಿಯನ್ನು ಕಲೆಹಾಕುತ್ತಿದ್ದ ಪಾಕಿಸ್ತಾನದ ದ್ರೋಣ್ ಉಡೀಸ್ ಮಾಡಲಾಯಿತು. ಇಷ್ಟೊಂದು ಸಾಹಸವನ್ನು ಮಾಡಿದ ಎಲ್ಲ ವಿಮಾನಗಳು ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿ 4.05 ಕ್ಕೆ ಯಶಸ್ವಿಯಾಗಿ ಭಾರತದ ಭೂಭಾಗದಲ್ಲಿ ಲ್ಯಾಂಡ್ ಆದವು.

ಇಂತಹ ಮೈ ನವಿರೇಳಿಸುವ ಸರ್ಜಿಕಲ್ ದಾಳಿಯನ್ನು ಕಂಟ್ರೋಲ್ ರೂಮಿನಲ್ಲಿ ಕುಳಿತು ತದೇಕ ಚಿತ್ತದಿಂದ ಕುಳಿತು ಎಲ್ಲವನ್ನು ನೋಡುತ್ತಾ ಪ್ರಧಾನಿ ಮೋದಿಯವರು ಕುಳಿತಿದ್ದರು. ಮೋದಿಯವರು ಸೇನಾ ವಿಮಾನಗಳು ಯಶಸ್ವಿ ಕಾರ್ಯಾಚರಣೆಯನ್ನು ಮುಗಿಸಿ ಬರುವವರೆಗೆ ನೀರನ್ನೂ ಕುಡಿಯದೆ ವೀಕ್ಷಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅಲ್ಲದೆ ಈ ಯಶಸ್ವಿ ಕಾರ್ಯಾಚರಣೆಗೆ ಇಸ್ರೇಲ್ ನಿರ್ಮಿತ ದ್ರೋಣ್ ಹೆರಾನ್ ಮತ್ತು ಅಲ್ಲಿನ ಗುಪ್ತಚರ ಇಲಾಖೆ ಮೊಸಾದ್ ನೆರವನ್ನು ಪಡೆಯಲಾಗಿದೆ ಎಂದು ವರದಿಗಳು ಕೇಳಿಬರುತ್ತಿವೆ.

ಇದನ್ನೂಓದಿರಿ : ಸರ್ಜಿಕಲ್ ಸ್ಟ್ರೈಕ್ ನಂತರ ಸೈನಿಕರ ಸಂಭ್ರಮಾಚರಣೆ..!

Image Copyright: google.com

 

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here