ನವದೆಹಲಿ: 2021 ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಟೋಕಿಯೋಗೆ ತೆರಳಲಿರುವ 228 ಭಾರತೀಯ ಅಥ್ಲೀಟ್ ಗಳ ತಂಡದ ಜೊತೆಗೆ ಇಂದು ಪ್ರಧಾನಿ ಮೋದಿ ಸಂಭಾಷಣೆ ನಡೆಸಿ ಶುಭ ಕೋರಿದರು.
ಬರುವ ಜುಲೈ 23 ರಿಂದ ಜಪಾನ್ ನ ಟೋಕಿಯೋದಲ್ಲಿ ನಡೆಯಲಿರುವ ಒಲಂಪಿಕ್ ಕ್ರೀಡಾಕೂಟಕ್ಕೆ ತೆರಳಲು ಸಿದ್ದರಾಗಿರುವ ಭಾರತೀಯ ಕ್ರೀಡಾಪಟುಗಳೊಂದಿಗೆ ಪ್ರಧಾನಿಗಳು ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದರು. ಇದೆ ಸಮಯದಲ್ಲಿ ಮೋದಿಯವರು ‘ಜಗತ್ತಿನ ಅತ್ಯಂತ ಶ್ರೇಷ್ಠ ಕ್ರೀಡಾ ವೇದಿಕೆಯಲ್ಲಿ ಮಿಂಚಲು ಇಡೀ ಭಾರತವೇ ನಿಮ್ಮ ಬೆನ್ನಿಗೆ ನಿಂತಿದೆ. ನಿರೀಕ್ಷೆಗಳಿಂದ ವಿಚಲಿತರಾಗಬೇಡಿ, ಅತ್ಯುತ್ತಮವಾದದ್ದನ್ನು ಸಾಧಿಸಿ ಎಂದು ಕರೆ ನೀಡಿದರು.
ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರ ಕ್ರೀಡಾ ಯಾನವನ್ನು ಪ್ರೋತ್ಸಾಹಿಸಿದ ಅವರ ಪೋಷಕರನ್ನು ಇದೇ ವೇಳೆ ಪ್ರಶಂಸಿಸಿದರು. “ನೀವು ಒಲಿಂಪಿಕ್ಸ್ನಿಂದ ಹಿಂತಿರುಗಿದ ನಂತರ ನಾನು ನಿಮ್ಮೊಂದಿಗೆ ಐಸ್ಕ್ರೀಮ್ ಸವಿಯುತ್ತೇನೆ” ಎಂದು ಪಿ.ವಿ ಸಿಂಧು ಅವರಿಗೆ ನರೇಂದ್ರ ಮೋದಿ ಭರವಸೆ ನೀಡಿದರು.
Among other things, her love for mangoes led to @ImDeepikaK developing an interest in archery. She has emerged as a fine archer and is making India proud. Here is my interaction with her. #Cheer4India pic.twitter.com/amjRzCyuAj
— Narendra Modi (@narendramodi) July 13, 2021
ಇದನ್ನೂ ಓದಿರಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ತೈಲ ಬೆಲೆ ಏರಿಕೆಯ ನೀತಿಯನ್ನು ಖಂಡಿಸಿ ಕಾಂಗ್ರೆಸ್ ಮುಖಂಡರಿಂದ ನಡೆದ ಸೈಕಲ್ ಜಾತಾ