india-to-receive-second-batch-of-rafale-fighter-jets-from-france-on-november

ನವದೆಹಲಿ: ಕಳೆದ ಮೇ ತಿಂಗಳಲ್ಲಿ ಐದು ರಫೆಲ್ ವಿಮಾನಗಳನ್ನು ಕಲಿಸಿಕೊಟ್ಟಿದ್ದ ಫ್ರಾನ್ಸ್ ಇದೀಗ ಮತ್ತೆ ಮೂರೂ ಯುದ್ಧವಿಮಾನಗಳನ್ನು ನವೆಂಬರ್ 5 ರಂದು ಭಾರತಕ್ಕೆ ಹಸ್ತಾ೦ತರಿಸಲಿದೆ.

ಚೀನಾ ಗಡಿ ಪ್ರದೇಶದಲ್ಲಿ ಉದ್ಭವಿಸಿರುವ ಸಂಕಷ್ಟದ ನಡುವೆ ಭಾರತಕ್ಕೆ ಮತ್ತೆ 3 ರಾಫೆಲ್ ಯುದ್ಧ ವಿಮಾನ ಬರುತ್ತಿರುವುದು ಮತ್ತಷ್ಟು ಸಂತೋಷವನ್ನು ತಂದಿದೆ. ಮತ್ತೆ ಮೂರು ಯುದ್ಧವಿಮಾನಗಳನ್ನು ಹಸ್ತಾ೦ತರಿಸುವ ಕುರಿತು ಫ್ರಾನ್ಸ್ ಮೂಲಗಳಿಂದ ಅಧಿಕೃತ ಮಾಹಿತಿ ದೊರೆತಿದೆ ಎನ್ನಲಾಗಿದೆ. ಕಳೆದ ಬಾರಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಫ್ರಾನ್ಸ್ ನ ರಕ್ಷಣಾ ಸಚಿವ ಫ್ಲೋರೆನ್ಸ್ ಪಾರ್ಲೆ ಅವರ ಅವರ ಉಪಸ್ಥಿತಿಯಲ್ಲಿ ಭಾರತೀಯ ವಾಯುನೆಲೆ ಅಂಬಾಲಾಗೆ ಐದು ವಿಮಾನಗಳು ಬಂದಿಳಿದಿದ್ದವು.

ನರೇಂದ್ರ ಮೋದಿಯವರ ಸರಕಾರ 2016 ರಲ್ಲಿ ದೇಶದ ವಾಯುಪಡೆಗೆ ಅಗತ್ಯವಿರುವ 36 ರಾಫೆಲ್ ಯುದ್ಧವಿಮಾನಗಳನ್ನು ತರಿಸಿಕೊಳ್ಳಲು ಅನುಮತಿಯನ್ನು ಸೂಚಿಸಿತ್ತು. ಈ ಸಂಬಂಧ ಫ್ರಾನ್ಸ್ ಸರಕಾರದ ಜೊತೆಯಲ್ಲಿ 59 ಸಾವಿರ ಕೋಟಿ ವೆಚ್ಚದಲ್ಲಿ 36 ರಾಫೆಲ್ ಯುದ್ಧವಿಮಾನ ತರಿಸಿಕೊಳ್ಳಲು ಒಪ್ಪಂದವು ಕುದುರಿತ್ತು. ಈ ಒಪ್ಪಂದದ ಪ್ರಕಾರ ಮೊದಲ ಹಂತವಾಗಿ ಮೇ ತಿಂಗಳಿನಲ್ಲಿ ಎರಡು ತರಬೇತಿ ಮತ್ತು ಮೂರೂ ಯುದ್ಧವಿಮಾನಗಳನ್ನು ಫ್ರಾನ್ಸ್ ಕಲಿಸಿತ್ತು. ಇದೀಗ ಎರಡನೇ ಬ್ಯಾಚ್ ನಲ್ಲಿ ಮತ್ತೆ 3 ವಿಮಾನಗಳು ನವೆಂಬರ್ 5 ರಂದು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರಗೊಳ್ಳಲಿದೆ.

ಇದನ್ನೂ ಓದಿರಿ: ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕೊರೋನಾ ವೈರಸ್ ಪಾಸಿಟಿವ್

LEAVE A REPLY

Please enter your comment!
Please enter your name here