india-teaches-a-lesson-to-pakisthan

ಪಾಕಿಸ್ತಾನ ಭಾರತವನ್ನು ಒಂದಿಲ್ಲಾ ಒಂದು ರೀತಿಯಿಂದ ಸೋಲಿಸಬೇಕು ಎಂದು ಸದಾ ಹೊಂಚು ಹಾಕಿ ಕೂತಿರುತ್ತದೆ. ಆದರೆ ಪ್ರತಿಬಾರಿಯೂ ಕೊನೆಯಲ್ಲಿ ತಾನೇ ಸೋತಿರುತ್ತದೆ. ಇವುಗಳಿಂದ ಬುದ್ದಿ ಕಲಿಯದ ಪಾಕ್ ಒಂದಿಲ್ಲೊಂದು ಕುತಂತ್ರಕ್ಕೆ ಕೈ ಹಾಕಿ ಸುಟ್ಟುಕೊಳ್ಳುವುದು ಅದರ ಜಾಯಮಾನವಾಗಿದೆ. ಆದರೆ ಇಂದು ಭಾರತ ಪಾಕಿಸ್ತಾನದ ಜೊತೆಯಲ್ಲಿ ಯುದ್ಧ ಮಾಡದೇ ಅದನ್ನು ಸೋಲಿಸಿ ತೋರಿಸಿದೆ. ಹೌದು ಸ್ನೇಹಿತರೆ.. ಇಂತಹ ಘಟನೆಯೊಂದು ನಡೆದಿದ್ದು, ಸಧ್ಯ ಎಲ್ಲೆಡೆ ಸುದ್ದಿಯಾಗುತ್ತಿದೆ.

ಕಳೆದ ಒಂದು ವಾರಗಳಿಂದ ಗಿಲ್ಗಿಟ್ ಬಲ್ಟಿಸ್ತಾನ್ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿರುವುದನ್ನು ನೀವು ನೋಡಿರುತ್ತೀರಿ. ಅಲ್ಲಿ ಚುನಾವಣೆ ನಡೆಸಲು ಸುಪ್ರಿಂ ಕೋರ್ಟ್ ಅನುಮತಿಯನ್ನು ನೀಡಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಭಾರತ ವಿರೋಧವನ್ನೂ ವ್ಯಕ್ತಪಡಿಸಿದ್ದು, ಇದಕ್ಕೆ ಎಂದಿನಂತೆ ಪಾಕ್ ಸರಕಾರ ಯಾವುದೇ ಕಿಮ್ಮತ್ತನು ನೀಡದಿರುವುದು ಭಾರತದ ಕೆಂಗಣ್ಣಿಗೆ ಗುರಿಯಾಗಿದೆ. ಇದಕ್ಕೆ ಭಾರತ ಪ್ರತಿಯಾಗಿ ಹಮಾಮಾನ ಅಸ್ತ್ರವನ್ನು ಪ್ರಯೋಗಿಸಿ ಪ್ರಪಂಚಕ್ಕೆ ಸಂಪೂರ್ಣ ಕಾಶ್ಮೀರ ತನ್ನದು ಎನ್ನುವ ಸಂದೇಶವನ್ನು ರವಾನಿಸಿದೆ.

ಏನಿದು ಹವಾಮಾನ ಅಸ್ತ್ರ ?

ಭಾರತವು ಪಾಕಿಸ್ತಾನದ ವಿರುದ್ಧ ಹವಾಮಾನ ಅಸ್ತ್ರ ಪ್ರಯೋಗಿಸಿದೆ. ಹಾಗಾದರೆ ಏನಿದು ಹವಾಮಾನ ಅಸ್ತ್ರ ಎಂದು ನೀವೆಲ್ಲಾ ಯೋಚಿಸುತ್ತಿದ್ದಿರಿ ತಾನೇ.. ತಿಳಿಸುತ್ತೇವೆ ನೋಡಿ.. ವಿಶ್ವ ಸಂಸ್ಥೆಯ ಅಧೀನ ಅಂಗ ವಿಶ್ವ ಹವಾಮಾನ ಸಂಸ್ಥೆಯು ಪ್ರಪಂಚದ ಹವಾಮಾನ ವರಧಿಗಳು, ಮುನ್ಸೂಚನೆಗಳು ಮತ್ತು ಅಪಾಯದ ಸಂಕೇತಗಳನ್ನು ತಿಳಿಯಲು ನಾನಾಭಾಗದಲ್ಲಿ ತನ್ನ ಮೀಟರಾಲಾಜಿಕಲ್ ಸೆಂಟರ್ ನ್ನು ತೆರೆದಿದೆ. ಅಂತೆಯೇ ಏಷ್ಯಾ ಖಂಡದಲ್ಲಿ ನಾಲ್ಕು ಸೆಂಟರ್ ಗಳಿದ್ದು, ಚೀನಾದ ಬಿಜಿಂಗ್, ರಷ್ಯಾದ ಒಡೆಸ್ನಿಕ್, ಜಪಾನಿನ ಟೋಕಿಯೋ ಮತ್ತು ಭಾರತದ ನವದೆಹಲಿಯಲ್ಲಿದೆ. ಸಧ್ಯ ಭಾರತದ ಮೀಟರಾಲಾಜಿಕಲ್ ಸೆಂಟರ್ ತನ್ನ ವೆಬ್ ಸೈಟ್ನಲ್ಲಿ ಹವಾಮಾನ ವರದಿಯನ್ನು ನೀಡುವ ಸಮಯದಲ್ಲಿ ಇವರೆಗೆ ಇರುವ ಕಾಶ್ಮೀರ ಮತ್ತು ಲಡಾಖ್ ಜೊತೆಗೆ ಪಾಕ್ ಆಕ್ರಮಿತ ಕಾಶ್ಮೀರವನ್ನೂ ಸೇರಿಸಿ ನೀಡಿದೆ. ಇದು ಪಾಕಿಸ್ತಾನಕ್ಕೆ ಸಂಪೂರ್ಣ ಕಾಶ್ಮೀರ ತನ್ನದೇ ಎನ್ನುವ ಸ್ಪಷ್ಟ ಸೂಚನೆಯನ್ನು ನಿಡಿದಂತಾಗಿದೆ.

ಇದನ್ನೂ ಓದಿರಿ: ಭಾರತೀಯ ಯೋಧರನ್ನು ಕೆಣಕಿದ ಚೀನಾ: ಗುಂಡೇಟು ತಿಂದ 9 ಚೀನಿ ಯೋಧರು..!

india-teaches-a-lesson-to-pakisthan

ಈ ಅಸ್ತ್ರದಿಂದ ಪಾಕಿಸ್ತಾನಕ್ಕೆ ಏನು ತೊಂದರೆ ?

ಭಾರತ, ಪಾಕ್ ಆಕ್ರಮಿತ ಕಾಶ್ಮೀರವನ್ನೂ ಸೇರಿಸಿ ಹವಾಮಾನ ವರದಿಯನ್ನು ನೀಡಿದರೆ ಪಾಕ್ ಏಕೆ ಹೆದರಬೇಕು.? ಹೀಗೆ ನಿಮಗೆ ಅನಿಸುತ್ತಿರಬೇಕಲ್ಲವೇ ? ಸ್ನೇಹಿತರೆ ವಿಷಯ ಇಲ್ಲೇ ಇರುವುದು.. ಭಾರತ ಈ ರೀತಿಯ ವರದಿಯನ್ನು ನೀಡುವುದರಿಂದ ಪರೋಕ್ಷವಾಗಿ ಗಿಲ್ಗಿಟ್ ಬಲ್ಟಿಸ್ತಾನ್ ಮತ್ತು ಮುಜಫರಾಬಾದ್ ತನ್ನದು ಎನ್ನುವುದನ್ನು ಪ್ರಪಂಚಕ್ಕೆ ತಿಳಿಸಿದಂತಾಗುತ್ತದೆ. ಭಾರತೀಯ ಮೀಟರಾಲಾಜಿಕಲ್ ಸೆಂಟರ್ ನೀಡಿದ ಈ ವರದಿಯು ಜಿನೇವಾದ ಮುಖ್ಯ ಕಚೇರಿಗೆ ಕಳುಹಿಸಲ್ಪಡುತ್ತದೆ. ಇದರಿಂದಾಗಿ ವಿಶ್ವಸಂಸ್ಥೆಯಲ್ಲಿರುವ ಜಮ್ಮು ಕಾಶ್ಮೀರದ ವಿವಾದಕ್ಕೆ ಗಿಲ್ಗಿಟ್ ಬಲ್ಟಿಸ್ತಾನ್ ಮತ್ತು ಮುಜಫರಾಬಾದ್ ಯಾವತ್ತಿಗೂ ಭಾರತದ್ದೆ ಭಾಗ ಎನ್ನುವ ತನ್ನ ನಿರ್ಧಾರವನ್ನು ಮುಂದಿಟ್ಟಂತಾಗುತ್ತದೆ. ಇನ್ನು ಮುಂದೆ ಪ್ರಪಂಚದ ಎಲ್ಲೆಡೆಯೂ ವಿವಾದಿತ ಕಾಶ್ಮೀರದ ಭಾಗ ಭಾರತದದ್ದು ಎನ್ನುವ ರೀತಿಯಲ್ಲಿಯೇ ಹವಾಮಾನ ಪ್ರತಿದಿನ ಪ್ರಸಾರವಾಗುತ್ತದೆ. ಇದೆಲ್ಲ ಭಾರತದ ಭಾಹ್ಯಾಕಾಶ ಸಾಮರ್ಥ್ಯ ಮತ್ತು ಇಸ್ರೋದ ಉಪಗ್ರಹ ತಂತ್ರಜ್ಞಾನದ ಶಕ್ತಿಯಿಂದಾಗಿ ಸಾಧ್ಯವಾಗಿದೆ. ಪಾಕಿಸ್ತಾನದಿಂದ ಇಂತಹ ತಂತ್ರಜ್ಞಾನ ಸಾಮರ್ಥ್ಯಗಳನ್ನು ಹೊಂದಲು ಸಾಧ್ಯವೂ ಆಗದು. ಇದುವೇ ನಮ್ಮ ಭಾರತೀಯರ ಮೈಲುಗಲ್ಲು.

ಮಾಹಿತಿ ಕ್ರಪೆ: ನ್ಯೂಸ್ ಫಸ್ಟ್ ಕನ್ನಡ 

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here