ಚೀನಾ ಸೈನಿಕರು ಗಡಿ ನುಸುಳುವುದನ್ನು ಭಾರತ ತಡೆದಿದೆ; ನಮ್ಮ ಯೋಧರ ಧೈರ್ಯಕ್ಕೆ ಸಲಾಂ – ರಾಜನಾಥ್‌ ಸಿಂಗ್‌

no-indian-soldier-martyred-in-face-off-with-china-at-arunachal-lac-rajnath-singh-in-parliament

ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಭಾರತ-ಚೀನಾ ಸೈನಿಕರ (China and India Soldiers) ಘರ್ಷಣೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸ್ಪಷ್ಟನೆ ನೀಡಿದ್ದಾರೆ.

ಸಂಘರ್ಷದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಯಾರಿಗೂ ತೀವ್ರ ಗಾಯಗಳೂ ಆಗಿಲ್ಲ. ಚೀನಾ ಸೈನಿಕರು ವಾಪಸ್ ತಮ್ಮ ನೆಲೆಗೆ ತೆರಳಿದ್ದಾರೆ. ಶಾಂತಿ ಕಾಪಾಡಲು ಚೀನಾ ಸೇನಾ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಗುತ್ತಿದೆ. ಭಾರತ ಎಲ್ಲ ದಾಳಿಗಳನ್ನು ತಡೆಯುವ ಶಕ್ತಿ ಹೊಂದಿದೆ. ಭಾರತ ಶೌರ್ಯ ಕ್ಷಮತೆಯನ್ನು ನಾನು ಅಭಿನಂದಿಸುತ್ತೇನೆ ಎಂದು ಲೋಕಸಭೆಯಲ್ಲಿ ರಾಜನಾಥ್‌ ಸಿಂಗ್‌ ಉತ್ತರಿಸಿದ್ದಾರೆ.

ಈ ಘರ್ಷಣೆಯಲ್ಲಿ ಎರಡೂ ಕಡೆಯ ಕೆಲವು ಸೈನಿಕರು ಗಾಯಗೊಂಡಿದ್ದಾರೆ. ನಾನು ಈ ಸದನಕ್ಕೆ ಹೇಳಲು ಬಯಸುತ್ತೇನೆ. ಭಾರತೀಯ ಸೇನಾ ಕಮಾಂಡರ್‌ಗಳ ಸಮಯೋಚಿತ ಮಧ್ಯಪ್ರವೇಶದಿಂದ, ಪಿಎಲ್‌ಎ ಸೈನಿಕರು ತಮ್ಮ ಸ್ವಂತ ಸ್ಥಳಕ್ಕೆ ಹಿಮ್ಮೆಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ಭಾರತ-ಚೀನಾ ಗಡಿ ಸಂಘರ್ಷ: ಮೂರು ಸೇನಾ ಪಡೆಗಳ ಮುಖ್ಯಸ್ಥರೊಂದಿಗೆ ರಾಜನಾಥ್ ಸಿಂಗ್ ಮಾತುಕತೆ

LEAVE A REPLY

Please enter your comment!
Please enter your name here