ಅಡಿಲೇಡ್: ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅವರ ಅಮೋಘ ಬ್ಯಾಟಿಂಗ್ ನಿಂದಾಗಿ ಭಾರತ 168 ರನ್ನುಗಳ ಭರ್ಜರಿ ಮೊತ್ತವನ್ನು ಕಲೆ ಹಾಕಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 168 ರನ್ ಗಳಿಸಿತು. ಆರಂಭಿಕರಾಗಿ ಕ್ರೀಸ್ ಗೆ ಇಳಿದ ಕೆ ಎಲ್ ರಾಹುಲ್ ಒಂದು ಬೌಂಡರಿಯೊಂದಿಗೆ 5 ರನ್ನುಗಳನ್ನು ಗಳಿಸಿ ತೆರಳಿದರು. ನಾಯಕ ರೋಹಿತ್ ಶರ್ಮಾ 27 ರನ್ನುಗಳಿಗೆ ತಮ್ಮ ಆಟವನ್ನು ನಿಲ್ಲಿಸಿದರು. ನಂತರ ಬಂದ ವಿರಾಟ್ ಕೊಹ್ಲಿ ಭರ್ಜರಿ ಆಟವನ್ನು ಆಡಿ, 40 ಎಸೆತಗಳಲ್ಲಿ 50 ರನ್ನುಗಳನ್ನು ಕಲೆಹಾಕಿದರು. ಹಾರ್ದಿಕ್ ಪಾಂಡ್ಯ ವೇಗದ ಬ್ಯಾಟಿಂಗ್ ಗೆ ಇಳಿದು ವೇಗವಾಗಿ 63 (33 ಎಸೆತಗಳಲ್ಲಿ 63) ರನ್ನುಗಳನ್ನು ಕಲೆಹಾಕಿದರು.
ಇದನ್ನೂ ಓದಿರಿ: ಆಂಗ್ಲರ ಎದುರು ಮಂಡಿಯೂರಿದ ಭಾರತ, ಫೈನಲ್ ತಲುಪಿದ ಇಂಗ್ಲೆಂಡ್