india-sent-6cr-vaccine-doses-outside-45cr-administered-here-vardhan
ಚಂಡೀಗಢ: ವಿಶ್ವದಾದ್ಯಂತ ಕರೋನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು, ಲಸಿಕೆಗಳಿಗೆ ಬೇಡಿಕೆ ಹೆಚ್ಚಿದೆ. ಭಾರತ ಇಲ್ಲಿಯವರೆಗೆ 76 ದೇಶಗಳಿಗೆ 6 ಕೋಟಿಗಿಂತಲೂ ಹೆಚ್ಚಿನ ಕೋವಿಡ್-19 ಲಸಿಕೆಗಳನ್ನು ಕಳುಹಿಸಿಕೊಟ್ಟಿದೆ. ಇದಲ್ಲದೆ ದೇಶದಲ್ಲಿ 4.5 ಕೋಟಿ ಲಸಿಕೆಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ತಿಳಿಸಿದ್ದಾರೆ.
ಚಂಡಿಗಡದ ಸಿಎಸ್ಐಆರ್ ಐ ಎಂ ಟಿ ಸಿ ಎಚ್ ನಲ್ಲಿ  ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಲಸಿಕೆ ಅಭಿಯಾನವನ್ನು ಜನಾಂದೋಲನವಾಗಿ ಮಾಡಲು ಕರೆ ನೀಡಿದ್ದರು. ಅದರಂತೆ ದೇಶದಲ್ಲಿ ಲಸಿಕೆ ಪೂರೈಕೆಯನ್ನು ಜನಾಂದೋಲನದ ರೀತಿಯಲ್ಲಿ ಜಾರಿಗೊಳಿಸಲಾಗಿದೆ. ಮಾರ್ಚ್ 21 ರ ಬೆಳಿಗ್ಗೆ ವರೆಗೆ ದೇಶದಾದ್ಯಂತ 4.5 ಕೋಟಿ ಕೋಟಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here