india-second-digital-strike-on-china-47-more-chinese-mobile-apps-banned

ನವದೆಹಲಿ: ಜೂನ್ ಅಂತ್ಯದಲ್ಲಿ 59 ಚೀನಾ ಮೂಲದ ಅಪ್ಲಿಕೇಷನ್ ಬ್ಯಾನ್ ಮಾಡಿ ಶಾಕ್ ನೀಡಿದ್ದ ಕೇಂದ್ರ ಸರಕಾರ ಮತ್ತೆ ತದ್ರೂಪು ಎನ್ನುವಂತಹ 47 ಆಫ್ ಗಳಮೇಲೆ ನಿರ್ಬಂಧ ಹೇರಿದೆ. ಇದಲ್ಲದೇ ಬಳಕೆದಾರರ ಗೌಪ್ಯತೆ ಕಾಪಾಡದ ಇನ್ನೂ 250ಕ್ಕೂ ಹೆಚ್ಚು ಅಪ್ಲಿಕೇಷನ್ ಗಳ ಪಟ್ಟಿಯನ್ನು ತಯಾರಿಸಿದೆ.

ಸದ್ಯ ಬ್ಯಾನ್ ಮಾಡಲಾದ 47 ಅಪ್ಲಿಕೇಷನ್ ಗಳು ದೇಶದ ಭದ್ರತೆ ಮತ್ತು ಗ್ರಾಹಕರ ಗೌಪ್ಯತೆಗೆ ಕನ್ನ ಹಾಕುತ್ತಿದ್ದು, ಇವುಗಳು ಮೊದಲು ಬ್ಯಾನ್ ಆದ ಆಫ್ ಗಳ ತದ್ರೂಪುಗಳಾಗಿವೆ. ಭಾರತ ತಾನು ಬ್ಯಾನ್ ಮಾಡಿದ ಆಫ್ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದು, ದೇಶದ ನಿಯಮಪಾಲಿಸದಿದ್ದಲ್ಲಿ ಕಠಿಣ ಕ್ರಮಜರುಗಿಸಲಾಗುವುದು ಎಂದು ಹೇಳಿದೆ.

ಅಲಿಬಾಬಾ, ಪಬ್ ಜಿ ಸೇರಿದಂತೆ 250 ಕ್ಕೂ ಹೆಚ್ಚಿನ ಅಪ್ಲಿಕೇಷನ್ ಗಳ ಯಾದಿಯನ್ನು ಸರಕಾರ ತಯಾರಿಸಿದ್ದು, ಅವುಗಳಲ್ಲಿ ಗ್ರಾಹಕ ಗೌಪ್ಯತೆ ಸೇರಿದಂತೆ ಹಲವು ವಿಚಾರಗಳ ಕುರಿತಾಗಿ ಪರಿಶೀಲನೆ ನಡೆಯುತ್ತಿದೆ.

ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರ ಮೇಲೆ ನಡೆದ ದುಷ್ಕೃತ್ಯ ನಡೆದ ನಂತರ ಚೀನಾ ಮೂಲದ ತಯಾರಿಕೆಯನ್ನು ಬದಿಗೊತ್ತುವ ಕಾರ್ಯ ದೇಶದಲ್ಲಿ ಮುನ್ನೆಲೆಗೆ ಬಂದಿದ್ದು, ಕಳೆದ ಬಾರಿ 59 ಅಪ್ಲಿಕೇಷನ್ ಗಳು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದವು. ಇದಲ್ಲದೆ ಭಾರತದಲ್ಲಿ ತನ್ನ ಉಧ್ಯಮವನ್ನು ಕಂಡುಕೊಂಡಿದ್ದ ಹಲವಾರು ಕಂಪನಿಗಳು ಬೈಕೊಟ್ ಚೈನಾ ಹೊಡೆತಕ್ಕೆ ಸಿಲುಕಿ ನಲುಗಿಹೋಗಿವೆ. ನಷ್ಟದಲ್ಲಿರುವ ಕಂಪನಿಗಳು ತಮ್ಮ ಕೆಲಸಗಾರರನ್ನು ಕೈಬಿಡುತ್ತಿರುವ ಘಟನೆಗಳು ನಡೆಯುತ್ತಿವೆ. ಈ ಮೂಲಕ ಭಾರತೀಯರ ನಡೆಯಿಂದಾಗಿ ಚೀನಾ ಮೂಲದ ಉಧ್ಯಮಗಳು ನಷ್ಟವನ್ನು ಕಾಣುತ್ತಿವೆ.

LEAVE A REPLY

Please enter your comment!
Please enter your name here