india-ready-for-take-off-in-the-rafale
Image Credit: twitter.com

ಭಾರತೀಯ ವಾಯುಪಡೆಗೆ ವಿಜಯದಶಮಿಯಂದೇ ರಫೇಲ್ ಎಂಬ ಬ್ರಹ್ಮಾಸ್ತ್ರ ದೊರೆತಿದೆ. ಫ್ರಾನ್ಸ್ ನಿಂದ ಭಾರತಕ್ಕೆ ಮೊಟ್ಟ ಮೊದಲ ಯುದ್ಧ ವಿಮಾನ ಹಸ್ತಾಂತರವಾಗಿದೆ. ಒಪ್ಪಂದದಂತೆ ಒಟ್ಟು 36 ರಫೇಲ್ ಯುದ್ಧ ವಿಮಾನಗಳು ಬರಬೇಕಾಗಿದ್ದು, ಸಧ್ಯ ಒಂದು ವಿಮಾನವನ್ನು ಹಸ್ತಾಂತರ ಮಾಡಲಾಯಿತು.

ಪ್ರತಿವರ್ಷವೂ ಆಯುಧ ಪೂಜೆಯಲ್ಲಿ ಭಾಗಿಯಾಗುತ್ತಿದ್ದ ರಾಜನಾಥ ಸಿಂಗ್ ಅವರು ಈ ಬಾರಿ ಫ್ರಾನ್ಸ್ ನಲ್ಲಿ ರಾಫೆಲ್ ವಿಮಾನಕ್ಕೆ ಪೂಜೆಯನ್ನು ನೆರವೇರಿಸಿದರು. ರಾಫೆಲ್ ನ ಮೇಲೆ ಓಂ ಎಂದು ಬರೆದು ಶಾಸ್ತ್ರೋಕ್ತವಾಗಿ ಪೂಜೆಯನ್ನು ನೆರವೇರಿಸಿದರು. ಪೂಜೆಯ ಬಳಿಕ ಫಾರ್ನ್ಸ್ ಅಧ್ಯಕ್ಷರ ಜೊತೆಯಲ್ಲಿ ಉಭಯದೇಶಗಳ ಸಹಭಾಗಿತ್ವದ ಕುರಿತು ಕೆಲಸಮಯ ಮಾತುಕತೆ ನಡೆಸಿದರು.

ಮಾತುಕತೆಯ ಬಳಿಕ ಫ್ರಾನ್ಸ್ ವಾಯುಸೇನೆಯ ಪೈಲೆಟ್ ಜೊತೆಯಲ್ಲಿ ರಫೇಲ್ ವಿಮಾನದಲ್ಲಿ ಹಾರಾಟವನ್ನು ನಡೆಸಿದ್ದಾರೆ. ವಿಮಾನ ಹಾರಾಟಕ್ಕು ಮೊದಲು ಫ್ರಾನ್ಸ್ ಪೈಲೆಟ್ ಜೊತೆಯಲ್ಲಿ ಫೋಟೋ ತೆಗೆಸಿಕೊಂಡು ರಫೇಲ್ ಹಾರಾಟಕ್ಕೆ ತಯಾರಾಗಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿರಿ: ವಿಜಯದಶಮಿ ಹಿನ್ನೆಲೆಯಲ್ಲಿ ರಾವಣ ದಹನ ಮಾಡಿದ ನರೇಂದ್ರ ಮೋದಿ (ವಿಡಿಯೋ)

india-ready-for-take-off-in-the-rafale
Image Credit: twitter.com

ಸುಮಾರು 59,000 ಕೋಟಿ ರೂಪಾಯಿಯ ಈ ಒಪ್ಪಂದದ ಪ್ರಕಾರ ಪ್ರಾನ್ಸ್ ನ ಏವಿಯೇಷನ್ ಡಸಾಲ್ಟ್  ಕಂಪನಿಯು 36 ಯುದ್ಧ ವಿಮಾನಗಳು, ಅವಶ್ಯಕ ಯುದ್ಧೋಪಕರಣಗಳು ಮತ್ತು ಪೈಲೆಟ್ ಗಳಿಗೆ ರಫೇಲ್ ವಿಮಾನ ಹಾರಾಟದ ತರಬೇತಿಯನ್ನು ನೀಡಬೇಕಾಗಿದೆ. ಸಧ್ಯ ಒಂದು ಯುದ್ಧ ವಿಮಾನವನ್ನು ಔಪಚಾರಿಕವಾಗಿ ಹಸ್ತಾಂತರಿಸಲಾಗಿದ್ದು, ಕ್ಷಿಪಣಿ ನಿರೋಧಕ ವ್ಯವಸ್ಥೆ, ಅತ್ಯಾಧುನಿಕ ಯುದ್ಧೋಪಕರಣ ಅಳವಡಿಕೆ ಮತ್ತು ತರಬೇತಿ  ಸೇರಿದಂತೆ  ಮೇ 2020 ರ ಸುಮಾರಿಗೆ ವಾಯುಪಡೆಗೆ ಸೇರ್ಪಡೆಯಾಗಲಿದೆ.

ಇದನ್ನೂ ಓದಿರಿ: ರಾಜನಾಥ ಸಿಂಗ್ ಅವರ ರಫೇಲ್ ಪೂಜೆ ಬರೀ ನಾಟಕ ಎಂದ ಮಲ್ಲಿಕಾರ್ಜುನ್ ಖರ್ಗೆ

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here