ಅಡಿಲೇಡ್: ಟಿ-20 ವಿಶ್ವಕಪ್ ನಲ್ಲಿ (T20 World Cup) ನೆದರ್ಲ್ಯಾಂಡ್ಸ್ ವಿರುದ್ಧ ದಕ್ಷೀಣ ಆಫ್ರಿಕಾ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಭಾರತ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಈ ಹಿಂದೆ ಭಾರತ ತಂಡ ತನ್ನ ಸೆಮಿಫೈನಲ್ ಆಸೆಯನ್ನು ಉಳಿಸಿಕೊಳ್ಳಲು ಜಿಂಬಾಬ್ವೆ ವಿರುದ್ಧ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿತ್ತು. ಆದರೆ ಇದೀಗ ದಕ್ಷೀಣ ಆಫ್ರಿಕಾ ಸೋಲನುಭವಿಸಿದ ಹಿನ್ನೆಲೆಯಲ್ಲಿ ಸೂಪರ್ ಲೀಗ್ 12 ರ ಕೊನೆಯ ಪಂದ್ಯ ಆಡುವ ಮುನ್ನವೇ ಸೆಮಿ ಫೈನಲ್ ಪ್ರವೇಶಿಸಿದೆ.
ಆಡಿಲೇಡ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲ್ಯಾಂಡ್ಸ್ ತಂಡ 4 ವಿಕೆಟ್ ಕಳೆದುಕೊಂಡು 158 ರನ್ನು ಗಳಿಸಿದರೆ, ದಕ್ಷಿಣ ಆಫ್ರಿಕಾ ತಂಡ 8 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡ ಟೂರ್ನಿಯಿಂದ ಹೊರ ಬಿದ್ದು, ಭಾರತದ ಸೆಮಿಫೈನಲ್ ಪ್ರವೇಶದ ಕನಸನ್ನು ನನಸು ಮಾಡಿದೆ.
ಭಾರತದ ಬದ್ದ ವೈರಿ ಪಾಕಿಸ್ತಾನ ಸಹ ಬಾಂಗ್ಲಾದೇಶದ ವಿರುದ್ಧ ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶ ಪಡೆದುಕೊಂಡಿದ್ದು, ಮತ್ತೊಮ್ಮೆ ಭಾರತ- ಪಾಕಿಸ್ತಾನ ಪಂದ್ಯ ನೋಡಲು ಅವಕಾಶ ಒದಗಿ ಬಂದಿದೆ. ಬಾಂಗ್ಲಾದೇಶ ನೀಡಿದ್ದ 127 ರನ್ನುಗಳ ಗುರಿಯನ್ನು ಬೆನ್ನತ್ತಿ, ಪಾಕಿಸ್ತಾನ 5 ವಿಕೆಟ್ ಕಳೆದುಕೊಂಡು 128 ರನ್ನುಗಳನ್ನು ಸುಲಭವಾಗಿ ಗಳಿಸಿ ಸೆಮಿಫೈನಲ್ ಪ್ರವೇಶ ಪಡೆದುಕೊಂಡಿದೆ.
ಇದನ್ನೂ ಓದಿರಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಬಿಪಾಶಾ ಬಸು, ಬೇಬಿ ಬಂಪ್ ಫೋಟೋಗಳು