india-moves-air-defence-missile-systems-in-eastern-ladakh-sector

ಪೂರ್ವ ಲಡಾಖ್: ಈ ಪ್ರದೇಶದಲ್ಲಿ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಲೇ ಇಲ್ಲ. ಕುತಂತ್ರಿ ಚೀನಾ ತನ್ನ ನೈಜ (ಎಲ್.ಎ.ಸಿ.) ಗಡಿಭಾಗದಲ್ಲಿ ಸೈನಿಕರು ಮತ್ತು ಹೆಲಿಕಾಪ್ಟರ್ ಗಳ ಜಮಾವಣೆಯನ್ನು ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಭಾರತವೂ ತನ್ನ ಭದ್ರತೆಯನ್ನು ಹೆಚ್ಚಿಸಿದೆ.

ಚೀನಾ ಗಡಿನಿಯತ್ರಣ ರೇಖೆಯ ಬಳಿಯಲ್ಲಿ ಆಧುನಿಕ ಯುದ್ಧ ಸಾಮಗ್ರಿಗಳನ್ನು ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಇಂದು ಅತ್ಯಾಧುನಿಕ ವಾಯು ರಕ್ಷಣಾ ಕ್ಷಿಪಣಿಯನ್ನು ನಿಯೋಜನೆ ಮಾಡಿದೆ. ಈ ಕ್ಷಿಪಣಿಗಳ ಮೂಲಕ ಚೀನಾದ ಸೈನಿಕರು ಮತ್ತು ಯುದ್ಧವಿಮಾನಗಳು ಭಾರತದ ಗಾಡಿಯನ್ನು ದಾಟಿದ ಕೆಲ ಕ್ಷಣದಲ್ಲಿ ಹೊದೆದುರುಲಿಸಲು ಸಹಾಯಕವಾಗಲಿದೆ.

ಇದನ್ನೂ ಓದಿರಿ: ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ರಾಜಕಾರಣ ಸಲ್ಲ: ರಾಹುಲ್ ಗಾಂಧಿಗೆ ಶರದ್ ಪವಾರ್ ಪಾಠ

ಚೀನಾದ ಯುದ್ಧ ವಿಮಾನಗಳು ಗಡಿನಿಯತ್ರಣ ರೇಖೆಯ ಬಳಿಯಲ್ಲಿ ಹಾರಾಟವನ್ನು ನಡೆಸುತ್ತಿವೆ. ಯಾವುದೇ ಕ್ಷಣದಲ್ಲಾದರೂ ಒಳನುಸುಳಿದರೆ ಅತ್ಯಾಧುನಿಕ ವಾಯು ರಕ್ಷಣಾ ಕ್ಷಿಪಣಿಗಳ ಸಹಾಯದಿಂದ ಆಕ್ಷಣದಲ್ಲಿಯೇ ಹೊಡೆದುರುಳಿಸಲು ಸಹಾಯಕವಾಗಲಿವೆ. ಭಾರತದ ವಾಯುರಕ್ಷಣಾ ಕ್ಷಿಪಣಿಗಳ ಸಾಲಿನಲ್ಲಿ ಆಕಾಶ್ ಕ್ಷಿಪಣಿ ಸಹ ಇರುವುದು ಗಮನಾರ್ಹವಾಗಿದೆ. ಈ ಕ್ಷಿಪಣಿಯು ಸೈನಿಕರು, ಡ್ರೋಣ್ ಮತ್ತು ವಿಮಾನಗಳನ್ನು ಕೆಲವೇ ಸೆಕೆಂಡುಗಳಲ್ಲಿ ಅತ್ಯಂತ ವೇಗವಾಗಿ ನೆಲಕ್ಕುರುಳಿಸಲಿವೆ.

ಭಾರತದ ಆಕಾಶ್ ಕ್ಷಿಪಣಿಯಂತಹ ಕ್ಷೀಪ್ರ ದಾಳಿಯ ಅಸ್ತ್ರಗಳನ್ನು ಪರ್ವತ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲು ಸಿದ್ದತೆ ನಡೆಸಲಾಗಿದೆ. ಭಾರತದ ಯುದ್ಧವಿಮಾನಗಳು ಸಂಪೂರ್ಣ ಶಸ್ತ್ರ ಸಜ್ಜಿತವಾಗಿ ಯಾವುದೇ ಕ್ಷಣದಲ್ಲಾದರೂ ದಾಳಿಗೆ ಸಿದ್ಧವಾಗಿ ನಿಂತಿವೆ. ಇನ್ನು  ಸು-30 ಎಂ ಕೆ  ಚೀನಾ ಸೈನಿಕರ ಚಲನ ವಲನಗಳ ಮೇಲೆ ಕಂಗಾವಳಿಗೆ ನಿಯೋಜಿಸಲಾಗಿದೆ.

LEAVE A REPLY

Please enter your comment!
Please enter your name here