india-is-building-border-roads-faster-than-before-01

ಭಾರತ ಮತ್ತು ಚೀನಾ ಗಡಿಪ್ರದೇಶದಲ್ಲಿನ ಬಿಕ್ಕಟ್ಟು ಬಗೆಹರಿಯುತ್ತಿದ್ದಂತೆ ಬಾರ್ಡರ್ ರೋಡ್ ಆರ್ಗನೈಸೆಷನ್ (ಬಿ.ಅರ್.ಒ.) ತನ್ನ ರಸ್ತೆ ನಿರ್ಮಾಣ ಕಾರ್ಯವನ್ನು ತ್ವರಿತಗೊಳಿಸಿದೆ. ಎತ್ತರದ ಹಿಮಾಲಯ ಪ್ರದೇಶದಲ್ಲಿನ ಕೊನೆಯ ಸೇನಾ ಪೋಸ್ಟ್ ಗೆ ಸಂಪರ್ಕ ಕಲ್ಪಿಸಲು ಈ ಮಾರ್ಗವನ್ನು ಭಾರತ ಸರಕಾರ ನಿರ್ಮಿಸಲು ಬಿ.ಅರ್.ಒ. ವಹಿಸಿದೆ. 

ಹಿಮಾಲಯದ ಪ್ರದೇಶಗಳಲ್ಲಿನ ರಸ್ತೆ ನಿರ್ಮಾಣ ಕಾರ್ಯವು ತುಂಬಾ ಕಷ್ಟಕರವಾಗಿರುತ್ತವೆ. ಅಲ್ಲಿನ ಪ್ರದೇಶಗಳು ಎತ್ತರದ ಬೆಟ್ಟ, ಗುಡ್ಡಗಳನ್ನು ಮತ್ತು ದೊಡ್ಡದಾದ ಕಲ್ಲಿನ ಬಂಡೆಗಳನ್ನು ಹೊಂದಿರುತ್ತವೆ. ಈ ಪ್ರದೇಶಗಳಿಗೆ ಅವಶ್ಯಕ ಯಂತ್ರಗಳನ್ನು ಕೊಂಡೊಯ್ಯುವುದು ತುಂಬಾ ಕಷ್ಟದಾಯಕವಾಗಿರುತ್ತವೆ. ಈ ಎಲ್ಲಾ ಕಾರಣಗಳಿಂದಾಗಿ ರಸ್ತೆಯ ನಿರ್ಮಾಣ ಕಾರ್ಯವು ನಿಧಾನವಾಗಿ 2019 ರಿಂದಲೂ ನಡೆಯುತ್ತಲೇ ಇದೆ. 

ಭಾರತ ಮತ್ತು ಚೀನಾ ಗಡಿ ಪ್ರದೇಶದ ಮುನ್ಸಿಯಾರ್- ಬುಗ್ಡಿಯಾರ್-ಮಿಲಾಮ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ನಡೆಸಲು ದೈತ್ಯ ಬಂಡೆಗಳನ್ನು ಕೊರೆಯಬೇಕಾಗಿ ಬಂದಿದೆ. ಈ ಪ್ರದೇಶಕ್ಕೆ ಬೃಹತ್ ಬಂಡೆ ಕತ್ತರಿಸುವ ಯಂತ್ರವನ್ನು ಕೊಂಡೊಯ್ಯಲು BRO ನಿರ್ಧರಿಸಿತ್ತು. ಆದರೆ ಅಲ್ಲಿಗೆ ಯಂತ್ರವನ್ನು ಕೊಂಡೊಯ್ಯುವುದು ಸುಲಭವಾಗಿರಲಿಲ್ಲ. ಅಂತಹ ದುರ್ಘಮ ಪ್ರದೇಶಕ್ಕೆ ದೈತ್ಯ ಯಂತ್ರ ಕೊಂಡೊಯ್ಯಲು ಹೆಲಿಕಾಪ್ಟರ್ ಸಹಾಯ ಪಡೆಯಲು ರಸ್ತೆ ಕಾಮಗಾರಿ ನಡೆಸುವ ತಂದ ನಿರ್ಧರಿಸಿತು. ಆದರೆ ಹಲವು ಪ್ರಯತ್ನಗಳು ನಡೆಸಿಯೂ ವಿಫಲವಾಗಿತ್ತು. ಕೊನೆಗೆ ಜೂ 11 ರಂದು ಈ ಪ್ರಯತ್ನವು ಯಶಸ್ವಿಯಾಗಿದೆ. ಈ ಮೂಲಕ ಭಾರತ ಮತ್ತು ಚೀನಾ ಗಡಿಭಾಗದಲ್ಲಿ ರಸ್ತೆ ಕಾಮಗಾರಿ ವೇಗವನ್ನು ಪಡೆದುಕೊಂಡಿದೆ. 

ಬಾರ್ಡರ್ ರೋಡ್ ಆರ್ಗನೈಸೆಷನ್ ಇನ್ನು ಮುಂದೆ ತನ್ನ ಕಾರ್ಯವನ್ನು ಇನ್ನೂ ವೇಗವಾಗಿ ಮುಂದುವರೆಸಲಿದೆ. ಸುಮಾರು 70 ಕಿಲೋ ಮೀಟರ್ ನಷ್ಟು ಉದ್ದದ ರಸ್ತೆಯನ್ನು ನಿರ್ಮಿಸುವುದು ಬಾಕಿ ಉಳಿದುಕೊಂಡಿದೆ. ಇವು ತುಂಬಾ ದೊಡ್ಡ ದೊಡ್ಡ ಬಂಡೆಗಳು ಇರುವ ಪ್ರದೇಶವಾಗಿದ್ದು, ರಸ್ತೆ ನಿರ್ಮಾಣಕ್ಕೆ ತಡೆಯನ್ನು ಒಡ್ಡುತ್ತಿದ್ದವು. 

ಈ ರಸ್ತೆಯ ನಿರ್ಮಾಣ ಕಾರ್ಯ ಪುರ್ಣಗೊಂಡರೆ ಗಡಿ ಪ್ರದೇಶದಲ್ಲಿನ ಜನಜೀವನ ಮತ್ತು ಅಲ್ಲಿನ ಅಭಿವ್ರದ್ಧಿಗೆ ಸಹಕಾರಿಯಾಗುತ್ತದೆ. ಅತೀ ಮುಖ್ಯವಾಗಿ ಅವಶ್ಯ ಸಮಯದಲ್ಲಿ ಚೀನಾ ಗಡಿ ಪ್ರದೇಶಕ್ಕೆ ಸೇನೆಯನ್ನು ರವಾನಿಸಲು ಸಹಾಯವಾಗಲಿದೆ. ಅಲ್ಲದೇ ಅಲ್ಲಿನ ಪ್ರವಾಸೋದ್ಯಮಕ್ಕೂ ಸಹಕಾರಿ ಆಗಲಿದೆ. 

LEAVE A REPLY

Please enter your comment!
Please enter your name here