ವಾಚ್ ಡಾಗ್ ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ಎಂಬ ಅಮೇರಿಕಾ ಮೂಲದ ಸಂಸ್ಥೆಯು 2018 ರ ಸಾಲಿನ ಸಾಲಿನ ಜಾಗತೀಕ ಬ್ರಷ್ಟಾಚಾರ ಸುಚ್ಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಅನ್ವಯ ಭಾರತ ಟಾಪ್ 20 ದೇಶಗಳ ಪಟ್ಟಿಯಿಂದ ಹೊರಬಂದಿದೆ.
ಈ ಸಂಸ್ಥೆಯು ಭಾರತದಲ್ಲಿನ ಬ್ರಷ್ಟಾಚಾರ ಹಿಂದಿಗಿಂತಲೂ ಈಗ ಕಡಿಮೆಯಾಗಿದೆ ಎಂದು ತಿಳಿಸಿದ್ದು, 2011 ರ ನಂತರ ಇದೇ ಮೊದಲ ಬಾರಿಗೆ 20 ಪಟ್ಟಿಯಿಂದ ಭಾರತ ಹೊರಬಂದಿದೆ. 180 ರಾಷ್ಟ್ರಗಳ ಪಟ್ಟಿಯಲ್ಲಿ, ಭಾರತ 3 ಅಂಕಗಳ ಏರಿಕೆಯೊಂದಿಗೆ 78 ನೇ ಸ್ಥಾನ ಪಡೆದುಕೊಂದಿದ್ದರೆ, ನೆರೆಯ ರಾಷ್ಟ್ರಗಳಾದ ಚೈನಾ ಮತ್ತು ಪಾಕಿಸ್ತಾನ್ ಕ್ರಮವಾಗಿ 87 ಮತ್ತು 117 ನೇ ಸ್ಥಾನಗಳನ್ನು ಪಡೆದಿವೆ.
ಈ ಪಟ್ಟಿಯಲ್ಲಿ ಡೆನ್ಮಾರ್ಕ್, ನ್ಯೂಜಿಲ್ಯಾಂಡ್ ಮತ್ತು ಸಿಂಗಾಪುರ್ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತ್ರತೀಯ ಸ್ಥಾನವನ್ನು ಪಡೆದುಕೊಂಡಿವೆ. ಸೋಮಾಲಿಯಾ, ಸಿರಿಯಾ ಮತ್ತು ದಕ್ಷಿಣ ಸುಡಾನ್ ಕ್ರಮವಾಗಿ 10, 13 ಮತ್ತು 13 ಅಂಕಗಳೊಂದಿಗೆ ಬ್ರಷ್ಟಾಚಾರದಲ್ಲಿ ಮೊದಲ ಮೂರು ಸ್ಥಾನದಲ್ಲಿವೆ. ಅಮೇರಿಕಾ 2011 ರ ಬಳಿಕ ಇದೇ ಮೊದಲ ಬಾರಿಗೆ ಕಳಪೆ ಪ್ರದರ್ಶನ ತೋರುವ ಮೂಲಕ 22 ನೇ ಸ್ಥಾನ ಪಡೆದುಕೊಂಡಿದೆ.
ಭಾರತದಲ್ಲಿ ಬ್ರಷ್ಟಾಚಾರ ನಿಗ್ರಹಕ್ಕಾಗಿ ಪ್ರಭಲ ಜನ ಲೋಖಪಾಲ್ ಕಾಯಿದೆ ಜಾರಿಗೆ ತರಲು ತರಲು 2011 ರಿಂದ ಸರಕಾರದ ಮೇಲೆ ಒತ್ತಡ ಹೇರುತ್ತಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
Image Copyright : google.com